ಹಾಸನ :
ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಕಾರಿನಲ್ಲಿದವರು ರಸ್ತೆ ಮಧ್ಯೆ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಕೆಳಗಿಳಿದ ತಕ್ಷಣ ನೋಡ ನೋಡುತ್ತಲೇ ಧಗಧಗನೆ ಕಾರು ಹೊತ್ತುಉರಿಯಿತು. ಇನ್ನು ಈ ಘಟನೆ ಹಾಸನದ ಜಿಲ್ಲಾಧಿಕಾರಿ ಕಛೇರಿ ಮುಂದೆ ನಡೆದಿದೆ. ಅದೃಷ್ಟವಷಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಈ ಘಟನೆ ಪತ್ನಿ ಮತ್ತು ಪುತ್ರರೊಂದಿನ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ತಕ್ಷಣ ದಾವಿಸ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.ಈ ಘಟನೆಯಿಂದಾಗಿ ರಸ್ತೆಯ ಮದ್ಯೆ ಕೆಲಕಾಲ ವಾಹನ ದಟ್ಟಣೆ ಜಾಸ್ತಿಯಾಗಿತ್ತು.
KA 05-MA 2694 ನಂಬರ್‌ನ ಮಾರುತಿ 800 ಕಾರು
ಈ ಕಾರು ಹಾಸನ ಜಿಲ್ಲೆಯ ಉದಯಗಿರಿ ಬಡಾವಣೆಯ ರಾಜಿವ್ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಇವರು ಕಸಬಾ ಹೋಬಳಿಯ ಕಂದಾಯ ಇಲಾಖೆಯ ನೌಕರನಾಗಿ ಕೆಲಸ ಮಾಡತಿದ್ದಾರೆ.
ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ಪೋಲಿಸರು