- Advertisement -
Manglore News: ಮಂಗಳೂರಿನ ಅಬಿದ್ ಅಹಮ್ಮದ್ ಸುರಲ್ಪಾಡಿ ಮಾಲಿಕತ್ವದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದೀಗ ವೈರಲ್ ಆಗಿದೆ.
ಮುಂಬಾಗಿಲ ಮೂಲಕ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ತಡರಾತ್ರಿ ಕಚೇರಿಗೆ ಒಳನುಗ್ಗಿದ ಕಳ್ಳರು ಡ್ರಾವರ್ ನಲ್ಲಿದ್ದ ಕಾರುಗಳ ಕೀ ಪಡೆದು ಹಾಗೂ ಕಾರಿನ ಕಾಗದ ಪತ್ರದ ಜೊತೆಗೆ ಎರಡು ಕಾರುಗಳನ್ನು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ.
6 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಹಾಗೂ 9 ಲಕ್ಷ ಮೌಲ್ಯದ ಕ್ರೇಟಾ ಕಾರು ಸೇರಿ ಒಟ್ಟು 15 ಲಕ್ಷ ಮೌಲ್ಯದ ಸೊತ್ತುಗಳ ಕಳ್ಳತನವಾಗಿದೆಯೆಂದು ಅಂದಾಜಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Railway-ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ಜಯಶಾಲಿ
- Advertisement -

