Financial Advice: ಕಾರ್ ಕಲಿಯುವುದು ಇತ್ತೀಚಿನ ದಿನಗಳಲ್ಲಿ ತುಂಬ ಮುಖ್ಯವಾಗಿದೆ. ಕಾರ್, ಸ್ಕೂಟಿ, ಬೈಕ್ ಕಲಿತರೆ, ಲೋನ್ ಮಾಡಿ, ಖರೀದಿಸಿ ನಮ್ಮ ಕೆಲಸವನ್ನು ನಾವು ಇನ್ನೂ ಸುಲಭವಾಗಿಸಿಕೊಳ್ಳಬಹುದು. ಆದರೆ ಕಾರ್ ಬಳಸುವಾಗ ನಾವು ಹೇಳುವ ಈ ಟಿಪ್ಸ್ ನೀವು ಫಾಲೋ ಮಾಡಿದ್ರೆ, 20% ರಿಂದ 30% ಪೆಟ್ರೋಲ್ ಉಳಿತಾಯ ಮಾಡಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಕಾರ್ ಫಾಸ್ಟ್ ಆಗಿ ಡ್ರೈವ್ ಮಾಡುವಾಗ, ಕಾರ್ ವಿಂಡೋವನ್ನು ತೆಗೆದಿರಿಸಬೇಡಿ. ಸದಾ ಕ್ಲೋಸ್ ಮಾಡಿಡಿ. ಗಾಡಿಯ ವಿಂಡೋವನ್ನು ರೋಲ್‌ಡೌನ್ ಮಾಡಿದಾಗ, ಕಾರಿನ ಮೇಲೆ ಹೆಚ್ಚು ಭಾರ ಬೀಳುತ್ತದೆ. ಇದನ್ನು ಡ್ರ್ಯಾಗ್ ಎನ್ನಲಾಗುತ್ತದೆ. ಹಾಗಾಗಿ ಗಾಡಿಯ ವಿಂಡೋವನ್ನು ಸದಾ ಕ್ಲೋಸ್ ಮಾಡಿ. ಇದರಿಂದ ಗಾಡಿಯ ಮೇಲೆ ಹೆಚ್ಚು ಪ್ರೆಶರ್ ಬೀಳದೇ, ಆರಾಮವಾಗಿ ಗಾಡಿ ಓಡಿಸಬಹುದು. ಮತ್ತು ಇದರಿಂದ ಪೆಟ್ರೋಲ್ ಕೂಡ ಉಳಿತಾಯವಾಗುತ್ತದೆ.
ಎರಡನೇಯದಾಗಿ ಹೆಚ್ಚು ಫಾಸ್ಟ್ ಆಗಿ ಗಾಡಿ ಓಡಿಸುವುದನ್ನು ತಪ್ಪಿಸಿ. ಕೇವಲ 50 ರಿಂದ 60ರ ಸ್ವೀಡ್‌ನಲ್ಲಿ ಗಾಡಿ ಓಡಿಸಿ. ಯಾಕಂದ್ರೆ ಇದಕ್ಕಿಂತ ಹೆಚ್ಚು ಫಾಸ್ಟ್ ಆಗಿ ಗಾಡಿ ಓಡಿಸಿದ್ರೆ, ಹೆಚ್ಚು ಪೆಟ್ರೋಲ್ ಖಾಲಿಯಾಗುತ್ತದೆ. ಅದೇ ನೀವು 50ರಿಂದ 60ರ ಸ್ಪೀಡ್‌ನಲ್ಲಿ ಇದ್ದರೆ, ನಿಮ್ಮ ಪೆಟ್ರೋಲ್ 10 ಪರ್ಸೆಂಟ್ ಉಳಿತಾಯವಾಗುತ್ತದೆ.
ಮೂರನೇಯದಾಗಿ ಕಾರ್‌ನಲ್ಲಿ ಫುಲ್ ಟ್ಯಾಂಕ್ ಪೆಟ್ರೋಲ್ ಮಾಡಿಸಬೇಡಿ. ಅಗತ್ಯವಿಲ್ಲದಿದ್ದರೂ ನೀವು ಫುಲ್ ಟ್ಯಾಂಕ್ ಮಾಡಿಸಿದರೆ, ಗಾಡಿಯ ಮೇಲೆ ಹೆಚ್ಚು ಭಾರ ಬೀಳುತ್ತದೆ. ಜೊತೆಗೆ ಗಾಡಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬ್ಯಾಗ್‌ಗಳನ್ನು, ಭಾರದ ವಸ್ತುಗಳನ್ನು ಇರಿಸಬೇಡಿ. ಇದರಿಂದ ಕಾರ್ ಮೇಲೆ ಹೆಚ್ಚು ಭಾರ ಬಿದ್ದು, ಪೆಟ್ರೋಲ್ ಹೆಚ್ಚು ಖರ್ಚಾಗುತ್ತದೆ. ನೀವು ಈ ಮೂರು ನಿಯಮ ಪಾಲಿಸಿದ್ದಲ್ಲಿ, ನೀವು 20% ರಿಂದ 30% ಪೆಟ್ರೋಲ್ ಉಳಿತಾಯ ಮಾಡಬಹುದು.