ಕೋಲಾರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಪ್ರಧಾನಿ ಮೋದಿಯವರು ಎರಡೂ ರಾಜ್ಯಗಳ ನಡುವೆ ಮದ್ಯಸ್ತಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ರಕ್ತದಿಂದ ಬರೆದ ಅಂಚೆ ಪತ್ರಗಳನ್ನು ಮೋದಿಯವರಿಗೆ ಪೋಸ್ಟ್ ಮಾಡುವ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ.
ಕೋಲಾರದಲ್ಲಿ ಕರವೇ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿ ನಗರದ ಗೌರಿಪೇಟೆಯ ಪ್ರಧಾನ ಅಂಚೆಕಚೇರಿ ಬಳಿ ಕಾವೇರಿ ಜಲವಿವಾದ ಸೌಹಾರ್ಧಯುತವಾಗಿ ಮುಕ್ತಾಯಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿ ರಕ್ತದಲ್ಲಿ ಬರೆದ ಅಂಚೆ ಪತ್ರಗಳನ್ನು ನೂರಾರು ಜನರು ಅಂಚೆಡಬ್ಬಿಗೆ ಹಾಕಿ ಕಾವೇರಿ ಉಳಿಸಿ ರೈತರ ಹಿತಕಾಪಾಡಿ ಎಂದು ಆಗ್ರಹಿಸಿದರು
ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಕೆ ರಾಘವೇಂದ್ರ ಅ.9 ಮತ್ತು 10 ರಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕಾವೇರಿ ಜಲವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸುತ್ತಿದ್ದು ಎರಡೂ ದಿನ ದೆಹಲಿಯ ಜಂಥರ್ ಮಂಥರ್ ಬಳಿ ಬೃಹತ್ ಪ್ರತಿಭಟನೆಯ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುತ್ತದೆ, ಕಾವೇರಿಗಾಗಿ ರಕ್ತ ಕೊಡುತ್ತೇವೆ ಹೊರತು ನೀರು ಬಿಡಲು ಸಿದ್ಧರಿಲ್ಲ, ಹೀಗಾಗಿ ರಕ್ತದಿಂದ ಪ್ರಧಾನಿ ಮೋದಿ ಆವರಿಗೆ ಪತ್ರ ಬರೆಯಲಾಗಿದ್ದು ರಾಜ್ಯದಿಂದ ಕನಿಷ್ಟ ಒಂದು ಲಕ್ಷ ಕಾರ್ಡ್ ಅಂಚೆಪೆಟ್ಟಿಗೆಗೆ ಹಾಕಲಾಗುತ್ತಿದೆ. ಕೋಲಾರದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ನಾಗನಾಳ ಮುನಿರಾಜು ಅವರು ಸಿರೆಂಜ್ ಮೂಲಕ ನೂರಕ್ಕೂ ಹೆಚ್ಚು ಕಾರ್ಯಕರ್ತರಿಂದ ರಕ್ತ ತೆಗೆದು ಕೊಟ್ಟು ಅಂಚೆ ಕಾರ್ಡ್‌ನಲ್ಲಿ ಬರೆಯಲು ಸಹಕರಿಸಿದರು ಎಂದು ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ತಿಳಿಸಿದ್ದಾರೆ.