ಬೆಂಗಳೂರಿನ :ಪ್ರಮುಖ ಏರಿಯಾವಾಗಿರುವ ಬ್ರಿಗೇಡ್ ರೋಡ್ ನಲ್ಲಿರು ರಸ್ತೆಯಲ್ಲಿ ಕಾರ್ ನಿಲ್ಲಿಸಬೇಕೆಂದರೆ ಎಷ್ಟು ಹಣ ಕೊಡಬೇಕು ಗೊತ್ತಿದೆಯಾ ನಿಮಗೆ ನಾವು ತಿಳಿಸ್ತಿವಿ ಕೇಳಿ
ಸ್ನೇಹಿತರೇ ಬೆಂಗಳೂರು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ? ಇದೊಂದು ಸುಂದರ ನಗರಿ , ಸಾಕಷ್ಟು ಜನಗಳಿಗೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದಂತಹ ನಗರ ಎಂದರೆ ತಪ್ಪಾಗಲಾರದು . ಇಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುತ್ತದೆ.
ಇಲ್ಲಿರುವ ಆಕರ್ಷಣಿಯ ಸ್ಥಳವಾಗಿರುವ ಪ್ರಮುಖ ಏರಿಯಾಗಳಲ್ಲಿ ಒಂದಾಗಿರುವ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಬ್ರಿಗೇಡ್ ರಸ್ತೆ ಹಲವಾರು ಕಾರಣಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಈಗ ಮತ್ತೊಂದು ಪ್ರಮುಖ ವಿಷಯದಿಂದ ಸುದ್ದಿಯಲ್ಲಿದೆ..ಅದು ಬೇರೆ ಯಾವುದು ಅಲ್ಲ ವಾಹನ ಪಾರ್ಕಿಂಗ್ ವಿಚಾರದಲ್ಲಿ .
ನಾವು ದುಬಾರಿ ಕಾರುಗಳನ್ನು ಕೊಳ್ಳಲು ಇಷ್ಟಪಡುತ್ತೇವೆ. ಅದರಲ್ಲಿ ಓಡಾಡಲು ತುಂಬಾ ಮಜವಾಗಿರುತ್ತದೆ. ಆದರೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಕಾರನ್ನು ನಿಲ್ಲಿಸಬೇಕೆಂದರೂ ದುಬಾರಿ ವೆಚ್ಚ ತೆರಬೇಕು.
ಈ ಮೊದಲು ನಾಲ್ಕು ಚಕ್ರದ ವಾಹನಗಳಿಗೆ ಒಂದು ಗಂಟೆ ಕಾರು ನಿಲ್ಲಿಸಲು 10 ರೂಪಾಯಿ ತೆಗೆದುಕೊಳ್ಳುತಿದ್ದರು 2 ಗಂಟೆಗೆ 20 ರೂ ಚಾರ್ಜ ಮಾಡುತಿದ್ದರು . ಆದರೆ ಇಂದಿನ ದುಬಾರಿ ದಿನಗಳಲ್ಲಿ ಪಾರ್ಕಿಂಗ್ ವೆಚ್ಚ ಕೂಡ ದುಬಾರಿ ಮಾಡಿದ್ದಾರೆ.
ಈಗ ಒಂದು ಗಂಟೆಗೆ 30 ರೂ ಕೊಡಬೇಕಾಗಿದೆ. ಮೊದಲಿಗಿಂತ ಮೂರು ಪಟ್ಟು ಜಾಸ್ತಿ ಮಾಡಿದ್ದಾರೆ. ಹಾಗಾಗಿ ಕಾರ್ ಮಾಲಿಕರು ವಾಹನಗಳನ್ನು ರಸ್ತೆಗೆ ಇಳಿಸಲು ಹೆದರುತಿದ್ದಾರೆ.
10ಕೋಟಿ ರೂ.ಗೆ ಅಧಿಕಾರಿಗಳ ವರ್ಗಾವಣೆ..! ಏನಿದು ಹೆಚ್.ಡಿ.ಕೆ ಹೊಸ ಬಾಂಬ್..?!