ಮುರುಘಾ ಶ್ರೀಗಳ ಕೇಸ್; 2 ನೇ ಚಾರ್ಜ್ ಶೀಟ್ ನಲ್ಲಿ ಏನೇನಿದೆ..?

ಬೆಂಗಳೂರು(ಫೆ.14): ಚಿತ್ರದುರ್ಗದ ಮುರುಘಾ ಶ್ರೀಗಳ ಮೇಲೆ ದಾಖಲಾದ ಎರಡನೇ ಚಾರ್ಜ್ ಶೀಟ್ ಅನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಎರಡನೇ ಸೆಷನ್ಸ್ ನ್ಯಾಯಾಲಯಕ್ಕೆ 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 73 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ನಾಲ್ಕು ಮಂದಿ ವಿದ್ಯಾರ್ಥಿನಿಗಳಲ್ಲಿ ಇಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ತಿಳಿಸಿದ್ದಾರೆ.

14 ವರ್ಷದ ಸಂತ್ರಸ್ತ ಬಾಲಕಿ, ಹೇಳಿರುವ ಹೇಳಿಕೆಯ ಪ್ರಕಾರ, ಸ್ವಾಮೀಜಿಯವರು ಚಾಕಲೇಟ್ ನೀಡಿದ್ರು, ಆದರೆ ಚಾಕಲೇಟ್ ತಿಂದ ಬಳಿಕ ನಿದ್ರೆಗೆ ಜಾರಿದ್ದೆ, ಅಲ್ಲಿ ಯಾರೂ ಇರಲಿಲ್ಲ. ನನಗೆ ಸಂಪೂರ್ಣ ಸುಸ್ತಾಗಿತ್ತು. ಎಚ್ಚರ ಆದಾದ ಅಲ್ಲಿ ಯಾರೂ ಇರಲಿಲ್ಲ. ಅಂಗಾಂಗ ನೋವಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದರು.

ಅಕ್ಟೋಬರ್ 13ರಂದು ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಸ್ವಾಮಿ ಸೇರಿ 7ಜನರ ವಿರುದ್ಧ ಆರೋಪ‌‌ ಕೇಳಿ ಬಂದಿತ್ತು. ಅದರಲ್ಲಿ ಎ1 ಮುರುಘಾಮಠದ ಮುರುಘಾ ಸ್ವಾಮಿ, ಎ2 ವಾರ್ಡನ್ ರಶ್ಮಿ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ), ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ‌ ಗಂಗಾಧರ್, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಳಿಕ‌ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ವರ್ಗಾವಣೆ ಆಗಿತ್ತು.  ಇದೀಗ 761 ಪುಟಗಳ ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್​​​ಶೀಟ್ ಸಲ್ಲಿಕೆ ಮಾಡಿದ್ದು, ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢವಾಗಿದೆ ಮಕ್ಕಳು‌ & ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ಅವರ ಮೇಲೆ ದೌರ್ಜನ್ಯ ಮಾಡಿರುತ್ತಾರೆ ಎಂದು ಉಲ್ಲೇಖವಾಗಿದೆ.

About The Author