ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ, ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೆಪ್ಟೆಂಬರ್ 10ರಂದು ಪಟ್ಟಣದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯ್ತು. ಮೆರವಣಿಗೆ ವೇಳೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ನಾಯಕರ ದಂಡೇ ಭಾಗಿಯಾಗಿತ್ತು. ಈ ವೇಳೆ ಸಿ.ಟಿ. ರವಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಮದ್ದೂರು ಠಾಣೆ ಪಿಎಸ್‌ಐ ಮಂಜುನಾಥ್ ದೂರು ಆಧರಿಸಿ ಎಫ್‌ಐಆರ್ ಹಾಕಲಾಗಿದೆ.
5 ಪರ್ಸೆಂಟ್ ಇದ್ದಾಗಲೇ ಬಾಲ ಬಿಚ್ಚುತ್ತಿದ್ದಾರೆ. ಇನ್ನೂ 50 ಪರ್ಸೆಂಟ್ ಆದ್ರೆ, ನಮ್ಮ ಮಕ್ಕಳು, ಮೊಮ್ಮಕ್ಕಳ ಬದುಕಲು ಆಗುತ್ತಾ? ಕೆಲವು ಕುತಂತ್ರಿಗಳು ವೋಟಿನ ಆಸೆಗೆ, ಹಿಂದೂ ಸಮಾಜವನ್ನೇ ಒಡೆಯುತ್ತಾರೆ. ಪಾಕ್ ಪರ ಕೂಗಿದ್ರು, ಬಾಂಬ್ ಹಾಕಿದ್ರೂ ಯೆಸ್ ಅಂತಾರೆ. ಮುಸ್ಲಿಮರು ಪೆಟ್ರೋಲ್ ಬಾಂಬ್ ಹಾಕಿದ್ದಾಗಲೇ ಬುದ್ಧಿ ಕಲಿಸಬೇಕಿತ್ತು. ಆ ಈ ರೀತಿ ಆಗುತ್ತಿರಲಿಲ್ಲ. ನೀವು ಹೊರಗಡೆಯಿಂದ ಬಂದವರು. ನಾವು ಇಲ್ಲೇ ಇರುವವರು. ತೊಡೆ ತಟ್ಟುವ ಕೆಲಸ ಮಾಡಬೇಡಿ. ತೊಡೆ ತಟ್ಟಿ ಸವಾಲು ಹಾಕಿದ್ರೆ, ತೊಡೆ ಮುರಿಯುತ್ತೇವೆ. ತಲೆಯನ್ನೂ ತೆಗೆಯುತ್ತೇವೆ. ನಮ್ಮಲ್ಲೂ ಉರಿಗೌಡ, ನಂಜೇಗೌಡರು ಇದ್ದಾರೆ ಅಂತಾ, ಸಿ.ಟಿ. ರವಿ ಹೇಳಿದ್ದಾರೆ ಎನ್ನಲಾಗಿದೆ.
ಕೇವಲ ಸಿಟಿ ರವಿ ವಿರುದ್ಧ ಮಾತ್ರವಲ್ಲ. ಪೇಟೆ ಬೀದಿ ರಸ್ತೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ, 500ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಮೇಲೂ ಕೇಸ್ ಹಾಕಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಕರ್ತವ್ಯನಿರತ ಪೊಲೀಸರ ಮೇಲೆ, ಕಲ್ಲು ತೂರಾಟ, ಮಸೀದಿಗೆ ನುಗ್ಗಲು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಟ್ಟು 5 ಎಫ್‌ಐಆರ್‌ಗಳು ದಾಖಲಾಗಿವೆ.