Friday, December 13, 2024

Latest Posts

ಪಾಲಿಕೆ ಚುನಾವಣೆಯಲ್ಲಿ ಜಾತಿರಾಜಕಾರಣ

- Advertisement -

www.karnatakatv.net :ಹುಬ್ಬಳ್ಳಿ: ರಾಜಕಾರಣಕ್ಕೂ ಜಾತಿಗೂ ಎಲ್ಲಿಲ್ಲದ  ನಂಟು ಇದ್ದೆ ಇದೆ. ಜಾತಿ ಇಲ್ಲದೇ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿನ 82 ವಾರ್ಡಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗಳೆರಡೂ ಬಹುತೇಕ ಎಲ್ಲ ಜಾತಿಯ ಜನರಿಗೂ ಟಿಕೆಟ್ ನೀಡಿದ್ದರೂ ಎರಡೂ ಪಕ್ಷಗಳೂ ಬಹುಸಂಖ್ಯಾತ ಲಿಂಗಾಯತರಿಗೆ ಮಣೆ ಹಾಕಿದೆ.

ಬಿಜೆಪಿ ಲಿಂಗಾಯತ ಸಮಾಜದ 15 ಪುರುಷರು ಮತ್ತು 12 ಮಹಿಳೆಯರು ಸೇರಿ 22 ಜನರಿಗೆ ಟಿಕೆಟ್ ನೀಡಿದ್ದರೆ, 12 ಪುರುಷರು ಮತ್ತು 08 ಮಹಿಳೆಯರಿಗೆ ಮಣೆ ಹಾಕಿದೆ.

ಕಾಂಗ್ರೆಸ್ ಟಿಕೆಟ್ ಪಡೆದವರಲ್ಲಿ ಮುಸ್ಲಿಂ ಸಮುದಾಯ ಎರಡನೇ ಸ್ಥಾನದಲ್ಲಿದ್ದು 10 ಮಹಿಳೆಯರು ಮತ್ತು 7 ಪುರುಷರು ಇದ್ದಾರೆ. ಮೂರನೇ ಸ್ಥಾನದಲ್ಲಿ ಕುರುಬ ಸಮುದಾಯಕ್ಕೆ 8 ಸ್ಥಾನ ನೀಡಿದ್ದು ಐವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಮೂವರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮರಾಠಾ ಸಮಾಜದ 7 ಜನ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಎಸ್ ಸಿ ಎಸ್ ಟಿ ಸಮುದಾಯದ 16 ಜನರಿಗೆ ಸ್ಪರ್ಧೆ ಅವಕಾಶ ಸಿಕ್ಕಿದೆ.

ಬಿಜೆಪಿಯಲ್ಲಿ 7 ಬ್ರಾಹ್ಮಣರಿಗೆ ಟಿಕೆಟ್ ನೀಡಲಾಗಿದ್ದು, ಕುರುಬರಿಗೆ ಐವರಿಗೆ ಟಿಕೆಟ್ ನೀಡಲಾಗಿದೆ. ಮರಾಠಾ ಸಮುದಾಯದ  6 ಜನರಿಗೆ ಮಣೆ ಹಾಕಲಾಗಿದ್ದು, ಕೊರಮ, ಮಾದರ, ಮಡಿವಾಳರ, ಬೋವಿ ವಡ್ಡರ, ಗೊಲ್ಲ, ಗೌಳಿ, ಸಮಗಾರ, ಮಾದರ ಮುಂತಾದ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಸ್ ಎಸ್ ಕೆ ಸಮಾಜ ನಿರ್ಣಾಯಕವಾಗಿದೆ. ಆದ್ರೆ ಈ ಬಾರಿ ಪ್ರಬಲ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಬಿಜೆಪಿ ಈ ಬಾರಿ ಕಡೆಗಣನೆ ಮಾಡಿದೆ. ಬಿಜೆಪಿ 4 ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸಹ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿಯ ವೋಟ್ ಬ್ಯಾಂಕ್ ಎಂದೆ ಭಾವಿಸಲಾಗುವ ತಮ್ಮ ಸಮುದಾಯಕ್ಕೆ ಕನಿಷ್ಟ 10 ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಸಮಾಜದ ಪ್ರಮುಖರು ಇಟ್ಟಿದ್ದರೂ ಕೇವಲ 4 ಸ್ಥಾನ ನೀಡಿರುವುದು ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss