ಧರ್ಮಸ್ಥಳ ಪ್ರಕರಣ ಮಹತ್ವದ ಘಟ್ಟ ತಲುಪಿದೆ. ನಿಗೂಢ ಸಾವುಗಳ ಪ್ರಕರಣದ ದಿಕ್ಕಲ್ಲಿ ತನಿಖೆ ಆರಂಭವಾಗಿತ್ತು. ಆದ್ರೀಗ ದೂರುದಾರರ ಬುಡಕ್ಕೆ ಬಂದು ನಿಂತಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ತಪ್ಪು ಒಪ್ಪಿಕೊಳ್ಳುತ್ತಿದ್ದಂತೆ, ಪ್ರಕರಣ ಬೇರೆಯದ್ದೇ ತಿರುವು ಪಡೆದಿದೆ. ಚಿನ್ನಯ್ಯ ಎಲ್ಲೆಲ್ಲಿ ಓಡಾಡಿದ್ದ. ಯಾರನ್ನೆಲ್ಲಾ ಭೇಟಿಯಾಗಿದ್ದ. ಆತನ ಕೆಲಸಗಳಿಗೆ ಸಹಾಯ ಮಾಡಿದ್ಯಾರು?. ಹೋದಲ್ಲೆಲ್ಲಾ ಚಿನ್ನಯ್ಯನಿಗೆ ಆಶ್ರಯ, ಊಟ ಕೊಟ್ಟಿದ್ಯಾರು? ಹೀಗೆ...
ಈಗಿನ ಕಾಲದಲ್ಲಿ ಕ್ಷುಲ್ಲಕ ಕಾರಣಕ್ಕೂ ಮಾನವೀಯತೆ ಮರೆತು, ಬರ್ಬರವಾಗಿ ಕೊಲೆ ಮಾಡುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಒಂದು ಹೃದಯವಿದ್ರಾವಕ ಘಟನೆ ಛತ್ತೀಸ್‌ಗಢದ ರಾಯಗಢದಲ್ಲಿ ನಡೆದಿದೆ. 25 ವರ್ಷದ ಯುವಕನನ್ನು ಕೇವಲ ನಾಯಿ ಬೊಗಳಿದ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹೀನ ಕೃತ್ಯವು ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಹುಟ್ಟಿಸಿದೆ.
ಈ ಘಟನೆ ಫಿಟ್ಟಿಂಗ್‌ಪರಾ...
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ, ಸೂಸೈಡ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಆತ್ಮಹತ್ಯೆ ಹಿಂದೆ ಪ್ರೇಮಿಯ ಪ್ರಚೋದನೆ ಇರೋದಾಗಿ ಆರೋಪಿಸಲಾಗಿದೆ. ಸಿದ್ದನಕಟ್ಟೆ ಗ್ರಾಮದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ, 20 ವರ್ಷದ ಅಶ್ವಿನಿ ನೇಣಿಗೆ ಶರಣಾಗಿದ್ರು. ಹೊಟ್ಟೆ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ಹೇಳಲಾಗಿತ್ತು. ಇದೀಗ ಅಶ್ವಿನಿ ಸಾವಿಗೆ ಪ್ರಿಯಕರನೇ ಕಾರಣ...
ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ್ದ ರೌಡಿ ಶೀಟರ್ ಶಿವ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಲೆಮರೆಸಿಕೊಂಡಿದ್ದ ಕೊಲೆಯ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನನ್ನು, ದೆಹಲಿ ವಿಮಾನ ನಿಲ್ದಾಣದಲ್ಲಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ CID ಅಧಿಕಾರಿಗಳು ಬಂಧಿಸಿದ್ದಾರೆ.
ಬಿಕ್ಲು ಶಿವನನ್ನು ಕೊಲೆ ಮಾಡಿದ ಬಳಿಕ ಎ1 ಆರೋಪಿ ಜಗ್ಗ ದುಬೈಗೆ...
ಕೇರಳದ ಕಲ್ಯಾಡ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಯುವತಿ ದರ್ಶಿತಾಳನ್ನು ಕೊಲೆ ಮಾಡಲಾಗಿದೆ. ಬಾಯಲ್ಲಿ ಸ್ಫೋಟಕ ತುರುಕಿ ಸ್ಫೋಟಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮದ ಲಾಡ್ಜ್‌ನಲ್ಲಿ ದರ್ಶಿತಾಳ ಮೃತದೇಹ ಪತ್ತೆಯಾಗಿದೆ. ದರ್ಶಿತಾಳ ಸ್ನೇಹಿತ ಸಿದ್ದರಾಜುನನ್ನು ಸಾಲಿಗ್ರಾಮ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದರ್ಶಿತಾ ಗಂಡನ ಮನೆಯಿಂದ 30 ಪವನ್ ಚಿನ್ನ ಮತ್ತು ನಾಲ್ಕು ಲಕ್ಷ...
ಜಗತ್ತು ಎಷ್ಟೇ ಮುಂದುವರಿದರೂ, ಇಂದಿಗೂ ವರದಕ್ಷಿಣೆ ಕಿರುಕುಳ ಮಾತ್ರ ನಿಂತಿಲ್ಲ. ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಮನುಷ್ಯ ಕುಲವೇ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ. ವರದಕ್ಷಿಣೆಗಾಗಿ ಪತ್ನಿಯನ್ನೇ ಜೀವಂತವಾಗಿ ಪತಿಯೇ ಸುಟ್ಟು ಹಾಕಿದ್ದಾನೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಆತನ 6 ವರ್ಷದ ಮಗ.
ತಾಯಿಯ ಮೇಲಾದ ದೌರ್ಜನ್ಯ, ಆಕೆಯ ಸಾವಿನ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾನೆ. ನನ್ನ ಅಮ್ಮನ ಮೈಮೇಲೆ...
ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಕ್ರೂರವಾಗಿ ಕೊಲೆ ಮಾಡಿರೋದು ಸಾಬೀತಾಗಿದೆ. ಪತ್ನಿ ಹಾಗೂ ಪ್ರಿಯಕರನಿಗೆ ಮರಣ ದಂಡನೆ ವಿಧಿಸಿ, ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ, ಶಿಕ್ಷಕ ಇಮ್ತಿಯಾಜ್ ಅಹಮದ್ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ನ್ಯೂ ಟೌನ್ ಠಾಣೆ ಪೊಲೀಸರು, ಇಮ್ತಿಯಾಜ್ ಪತ್ನಿ,...
ಧರ್ಮಸ್ಥಳ ನಿಗೂಢ ಸಾವುಗಳ ಕೇಸ್, ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಮೊದಲ ಬಾರಿಗೆ ಅನಾಮಿಕ, ಮಾಸ್ಕ್ ಮ್ಯಾನ್, ಮಾಧ್ಯಮದ ಎದುರು ಮಾತನಾಡಿದ್ದಾನೆ. ನ್ಯಾಷನಲ್ ಮೀಡಿಯಾ ಇಂಡಿಯಾ ಟುಡೇ ವರದಿಗಾರನ ಜೊತೆ, ತಾನು ನೋಡಿದ್ದೇನು? ಮಾಡಿದ್ದೇನು? ಬಳಿಕ ಏನಾಯ್ತು? ಧರ್ಮಸ್ಥಳ ತೊರೆದಿದ್ದು ಯಾವಾಗ? ಮತ್ತೆ ಬಂದಿದ್ದೇಕೆ? ಅನ್ನೋ ಬಗ್ಗೆ, ಎಲ್ಲಾ ವಿಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಇಂಡಿಯಾ ಟುಡೇ ವರದಿಗಾರನ...
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ, ನಟ ದರ್ಶನ್ ಅಂಡ್ ಗ್ಯಾಂಗ್ ಮತ್ತೆ ಜೈಲು ಪಾಲಾಗಿದೆ. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ, ತಕ್ಷಣವೇ ಬಂಧಿಸುವಂತೆ ಸೂಚಿಸಿತ್ತು. ದರ್ಶನ್ ಬೇಲ್ ರದ್ದಾಗಲು ಪ್ರಾಸಿಕ್ಯೂಷನ್ ಪರ ವಕೀಲರ ಪ್ರಬಲ ವಾದ ಮಂಡನೆಯೇ ಕಾರಣ.
ಪ್ರಾಸಿಕ್ಯೂಷನ್ ಪರ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದ್ದು, ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ. ಸುಪ್ರೀಂಕೋರ್ಟ್ ನಲ್ಲಿ ಸಾಕಷ್ಟು ವರ್ಷಗಳಿಂದ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಅರೆಸ್ಟ್ ಆಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಇದ್ದರೂ ದರ್ಶನ್ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಬೇಲ್ ರದ್ದು ಮಾಡಿದ್ದ ಸುಪ್ರೀಂಕೋರ್ಟ್, ತಕ್ಷಣವೇ ಬಂಧಿಸುವಂತೆ ಆದೇಶಿಸಿತ್ತು. ಸುಪ್ರೀಂ ಆದೇಶದಂತೆ, ದರ್ಶನ್‌ಗಾಗಿ ಪೊಲೀಸರು ಹುಡುಕಾಡಿದ್ದಾರೆ. ದರ್ಶನ್ ಕುಟುಂಬಸ್ಥರನ್ನೂ ಪೊಲೀಸರು ವಿಚಾರಿಸಿದ್ದರು.
ತಮಿಳುನಾಡಿನತ್ತ ಹೋಗಿದ್ದ ದರ್ಶನ್‌ಗೆ, ಬೇಲ್ ರದ್ದಾದ ವಿಷಯವನ್ನು ಕೂಡಲೇ ತಿಳಿಸಲಾಗಿದೆ. ಸಂಜೆ...
ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...