Tuesday, October 14, 2025

ಧರ್ಮ

ವಾಸಂತಿ ಇನ್ನೂ ಬದುಕಿದ್ದಾಳೆ ಎಂದ ಸುಜಾತಾ ಭಟ್

ಧರ್ಮಸ್ಥಳದ ಪ್ರಕರಣದಲ್ಲಿ ಸಂಚಲನ ಸೃಷ್ಟಿಸಿದ್ದ ಸುಜಾತಾ ಭಟ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆ ಗ್ಯಾಂಗ್‌ ಜೊತೆ ಹೋಗಿ ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಾ ಇದೆ. 60 ವರ್ಷದ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆ. ಉಳಿದ ಜೀವನವನ್ನು ಚೆನ್ನಾಗಿ ಮಾಡುವ ಆಸೆ ಇದೆ. ಮುಂದಿನ ವಾರ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವರ ದರ್ಶನ...

ನಮ್ಮ ಮೆಟ್ರೋ ಬಸವ ಮೆಟ್ರೋ ಆಗುತ್ತಾ?

ಬೆಂಗಳೂರಿನ ನಮ್ಮ ಮೆಟ್ರೋ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಭಾಗಿಯಾಗಿದ್ರು. ಆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವ ಬಗ್ಗೆ, ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ....

ಮೈಲಾರ ಲಿಂಗೇಶ್ವರ ಕಾರ್ಣಿಕ ಭವಿಷ್ಯವಾಣಿಯಿಂದ ಆತಂಕ

ಇಟ್ಟ ರಾಮರ ಬಾಣ ಹುಸಿಯಿಲ್ಲ. ಧರ್ಮ-ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರೂ ಎಚ್ಚರದಿಂದಿರಬೇಕು ಪರಾಕ್. ಇದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿಯವರ ಭವಿಷ್ಯವಾಣಿ. ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ, ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ, ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿ ಕಾರ್ಣಿಕ...

ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್ಸ್‌ಗೆ ಶಾಕ್!

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಎಸ್‌ಐಟಿ ತನಿಖೆ, ಬೇರೆಯದ್ದೇ ತಿರುವು ಪಡೆದುಕೊಂಡಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ತಿಮರೋಡಿ, ಮಟ್ಟಣ್ಣವರ್‌, ಜಯಂತ್ ವಿಚಾರಣೆ ಬಳಿಕ, ಅಧಿಕಾರಿಗಳು ಯೂಟ್ಯೂಬರ್‌ಗಳ ಬೆನ್ನು ಬಿದ್ದಿದ್ದಾರೆ. ಎಂ.ಡಿ. ಸಮೀರ್‌, ಹಾಸನ ಮೂಲದ ಅಭಿಷೇಕ್‌ ಸೇರಿದಂತೆ 5ಕ್ಕೂ ಹೆಚ್ಚು ಯೂಟ್ಯೂಬರ್‌ಗಳ ವಿಚಾರಣೆ ನಡೀತಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ, ಈ...

ಕೋರ್ಟ್‌ನಲ್ಲಿ ತಿಮರೋಡಿ ಭವಿಷ್ಯ

ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ತಲೆ ಮೇಲೆ, ಎರಡೆರಡು ತೂಗುಗತ್ತಿ ನೇತಾಡುತ್ತಿದೆ. ದಕ್ಷಿಣ ಕನ್ನಡದಿಂದಲೇ ಗಡಿಪಾರು ಮಾಡಲಾಗಿದೆ. ಮತ್ತು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಸೆಪ್ಟೆಂಬರ್‌ 21, 25ರಂದು ವಿಚಾರಣೆಗೆ ಬರಲು ನೋಟಿಸ್‌ ನೀಡಲಾಗಿತ್ತು. ಆದ್ರೆ ತಿಮರೋಡಿ ಗೈರಾಗಿದ್ರು. ಇದೀಗ 3ನೇ ಬಾರಿ ನೋಟಿಸ್‌ ನೀಡಿದ್ದು ವಿಚಾರಣೆಗೆ...

ಮೂವರು ಸುಳ್ಳು ಹೇಳಿಸಿದ್ರು ಇಷ್ಟಕ್ಕೆಲ್ಲಾ ಅವರೇ ಕಾರಣ..

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಸ್ವಇಚ್ಛಾ ಹೇಳಿಕೆ ವೇಳೆ ಉಲ್ಟಾ ಹೊಡೆದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ನ್ಯಾಯಾಲಯದಲ್ಲಿ, ಕಳೆದ 2 ದಿನಗಳಿಂದ ಚಿನ್ನಯ್ಯನ ಹೇಳಿಕೆ ದಾಖಲು ಮಾಡಿಕೊಳ್ಳಲಾಗ್ತಿದೆ. ಬಿಎನ್‌ಎಸ್‌ 183ರ ಅಡಿಯಲ್ಲಿ ಚಿನ್ನಯ್ಯನ ಸ್ವಇಚ್ಛಾ ಹೇಳಿಕೆಗಳನ್ನು ದಾಖಲಿಸಲಾಗಿದೆ. ಸುಮಾರು ಏಳೂವರೆ ಗಂಟೆಗಳ ಕಾಲ ಪ್ರಕ್ರಿಯೆ ನಡೆದಿದ್ದು, ಸೆಪ್ಟೆಂಬರ್‌ 23ರಂದು 11...

ಚಿನ್ನಯ್ಯನಿಗಾಗಿ ಸಮಯ ಮೀಸಲಿಟ್ಟ ಕೋರ್ಟ್

ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಇಂದೂ ಕೂಡ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ. ಚಿನ್ನಯ್ಯನ ವಿಚಾರಣೆಗಾಗಿಯೇ, ಕೋರ್ಟಿನ ಅರ್ಧ ದಿನದ ಸಮಯವನ್ನೇ ಮೀಸಲಿಡಲಾಗಿದೆ. ಸೆಪ್ಟೆಂಬರ್‌ 23ರಂದು ಚಿನ್ನಯ್ಯನನ್ನು, ಶಿವಮೊಗ್ಗ ಕಾರಾಗೃಹದಿಂದ ಬೆಳ್ತಂಗಡಿಗೆ ಕರೆದುಕೊಂಡು ಬರಲಾಗಿತ್ತು. ಜೆಎಂಎಫ್‌ಸಿ ಕೋರ್ಟ್‌ ನ್ಯಾಯಾಧೀಶರಾದ ವಿಜಯೇಂದ್ರ ಅವರು ವಿಚಾರಣೆ ನಡೆಸಿದ್ರು. ಸಂಜೆ 3 ಗಂಟೆಯಿಂದ 6 ಗಂಟೆವರೆಗೆ, ನಿರಂತರವಾಗಿ 3 ಗಂಟೆಗಳ ಕಾಲ ವಿಚಾರಣೆ ನಡೆದಿದೆ....

“ನಾನು ಯಾವುದೇ ರೀತಿಯ ಲವ್ ಜಿಹಾದ್ ಮಾಡಿಲ್ಲ”

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಯೂಟ್ಯೂಬರ್‌ ಮುಕಳೆಪ್ಪ ಲವ್‌ ಕಂ ಮ್ಯಾರೇಜ್‌ ಕಹಾನಿ ಭಾರೀ ಸಂಚಲನ ಸೃಷ್ಟಿಸಿದೆ. ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮುಸ್ಲಿಂ. ಗಾಯತ್ರಿ ಹಿಂದು. ಹೀಗಾಗಿ ಲವ್ ಜಿಹಾದ್ ಆರೋಪ ಮಾಡಲಾಗಿದ್ದು, ಹಿಂದೂ ಸಂಘಟನೆಗಳು ಕೂಡ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದವು. ಇದೀಗ ಕಿಡ್ನ್ಯಾಪ್ ಕೇಸ್ ದಾಖಲಾದ ಬೆನ್ನಲ್ಲೇ, ಮೊದಲ ಬಾರಿಗೆ ಪತ್ನಿ ಗಾಯತ್ರಿ ಜೊತೆ...

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳಿಸುವುದೇ ಪ್ಲಾನ್?

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವುಗಳ ಆರೋಪಕ್ಕೆ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಎಂಟ್ರಿ ಬಳಿಕ ಬಿಗ್‌ ಟ್ವಿಸ್ಟ್‌ ಸಿಕ್ಕಿತ್ತು. ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಹೇಳಿದ್ದ. ಆದ್ರೆ, ಆತ ಹೇಳಿದ್ದ ಜಾಗಗಳಲ್ಲಿ ಅಗೆದಾಗ ಅಸ್ಥಿಪಂಜರಗಳ ಸರಿಯಾದ ಸಾಕ್ಷಿ ಸಿಕ್ಕಿರಲಿಲ್ಲ. ಎಸ್‌ಐಟಿ ತೀವ್ರ ವಿಚಾರಣೆ ಬಳಿಕ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ಇದೀಗ ಚಿನ್ನಯ್ಯನ 2ನೇ ಪತ್ನಿ ಮಲ್ಲಿಕಾ ಸರದಿ. ಮಾಧ್ಯಮವೊಂದರ...

ಬಸವಕಲ್ಯಾಣದಲ್ಲಿ ಶರನ್ನವರಾತ್ರಿ ಧರ್ಮ ಸಮ್ಮೇಳನ

ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ 34ನೇ ಶರನ್ನವರಾತ್ರಿ ಧರ್ಮ ಸಮ್ಮೇಳನ ನಡೀತಿದೆ. ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಜ್ಯೋತಿ ಬೆಳಗಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದ್ದಾರೆ. ಹಾರಕೂಡ ಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿ ನೇತೃತ್ವದ ಸಮ್ಮೇಳನದಲ್ಲಿ, ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಡಾ. ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ...
- Advertisement -spot_img

Latest News

ಡಿನ್ನರ್‌ ಮೀಟಿಂಗ್‌ನಲ್ಲಿ ಸಚಿವರಿಗೆ ಸಿದ್ದು ತರಾಟೆ! ಇನ್‌ಸೈಡ್‌ ಸ್ಟೋರಿ

ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರ ರಾತ್ರಿ ತಮ್ಮ ಕಾವೇರಿ ನಿವಾಸದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು....
- Advertisement -spot_img