ಬೆಂಗಳೂರಿನ ನಮ್ಮ ಮೆಟ್ರೋ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಭಾಗಿಯಾಗಿದ್ರು.
ಆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವ ಬಗ್ಗೆ, ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ....
ತುಮಕೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ರಾಗಿ ಮಾರಾಟ ಮಾಡಲು ಅಕ್ಟೋಬರ್ 1ರಿಂದಲೇ ನೋಂದಣಿ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 11 ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ನೋಂದಣಿ ಮಾಡಿಸಲು ಡಿಸೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ.
ಇನ್ನು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಲ್‌ಗೆ 4,886 ರೂ.ಗಳನ್ನು ನಿಗದಿಪಡಿಸಲಾಗಿದೆ. 2026ರ ಜನವರಿ 1ರಿಂದ...
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಕರ್ತವ್ಯಾಧಿಕಾರಿ ಜ್ಯೋತಿ ಪ್ರಕಾಶ್, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜ್ಯೋತಿ ಪ್ರಕಾಶ್ ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದಾರೆ. ಕೆಪಿಟಿಸಿಎಲ್ ಎಸಿ ಕಾಮಗಾರಿಗೆ ಎನ್‌ಒಸಿ ನೀಡಲು, 1 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ರು ಎನ್ನಲಾಗಿದೆ.
ಅಡ್ವಾನ್ಸ್ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಿದ್ದು, ಜ್ಯೋತಿ ಪ್ರಕಾಶ್ ರೆಡ್ ಹ್ಯಾಂಡ್ ಆಗಿ...
ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಿಲ್ಲರ್ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ, 12 ಮಕ್ಕಳು ಸಾವು ಪ್ರಕರಣದ ಬಳಿಕ, ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಎಲ್ಲಾ ಬ್ರ್ಯಾಂಡ್‌ಗಳ ಕಾಫ್ ಸಿರಪ್‌ಗಳ ಸ್ಯಾಂಪಲ್ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಸಿರಪ್‌ಗಳ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ಲ್ಯಾಬ್‌ಗೆ ರವಾನೆ ಮಾಡಲಾಗುತ್ತದೆ. ಜೊತೆಗೆ ಸಿರಪ್ ಕಂಪನಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಮಕ್ಕಳಿಗೆ...
ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೀತಿದ್ದು, ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಗಾಳಿ ಬೀಸಲಿದೆಯಂತೆ. ಶೇಕಡ 50ರಷ್ಟು ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಸಂಪುಟದಲ್ಲಿ ಖಾಲಿಯಿರುವ 2 ಸಚಿವ...
ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮುಂಗಾರು ಮಳೆಯಾಗಿದ್ದು, ಬೆಂಗಳೂರಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆಯಂತೆ. ಜಲಮಂಡಳಿ ಸಹಯೋಗದಿಂದ ನಡೆಸಿದ ಅಧ್ಯಯನದ ವರದಿಯಲ್ಲಿ ಈ ಗುಡ್‌ನ್ಯೂಸ್ ಸಿಕ್ಕಿದೆ. ನವೆಂಬರ್‌ವರೆಗೂ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಂತರ್ಜಲ ಮಟ್ಟ ಇನ್ನಷ್ಟು ಏರಿಕೆ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಅಂತರ್ಜಲದ ಮಟ್ಟ 0.5 ಮೀಟರ್‌ನಿಂದ 1.2 ಮೀಟರ್‌ಗೆ ಏರಿಕೆಯಾಗಿದೆ. ಕಳೆದ...
ಬೆಂಗಳೂರಿನಲ್ಲಿ ಜಾತಿ ಗಣತಿ ಶುರುವಾಗಿದ್ದು, ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಸೆಲೆಕ್ಟ್ ಮಾಡಿದ್ದ ವಾರ್ಡ್ ಬಿಟ್ಟು, ಬೇರೆ ವಾರ್ಡ್‌ಗಳಿಗೆ ಗಣತಿದಾರರನ್ನು ನಿಯೋಜಿಸಲಾಗಿದೆ. 20ರಿಂದ 30 ಕಿಲೋ ಮೀಟರ್ ದೂರ ಇರೋ ಏರಿಯಾಗಳಲ್ಲಿ, ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆಯಂತೆ. 200ಕ್ಕೂ ಹೆಚ್ಚು ಸಿಬ್ಬಂದಿಯ ವಾರ್ಡ್ ಅದಲು ಬದಲಾಗಿದೆ.
ಆಪ್‌ನಲ್ಲಿ ಸೆಲೆಕ್ಟ್ ಮಾಡಿದ್ದ ವಾರ್ಡ್‌ಗಳನ್ನ ಬಿಟ್ಟು ಬೇರೆ ವಾರ್ಡ್ ನೀಡಲಾಗಿದೆಯಂತೆ.
ಸ್ಥಳಕ್ಕೆ...
ರಾಜ್ಯದ 3 ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ತರುವ, ಗಂಭೀರ ಪ್ರಯತ್ನಕ್ಕೆ ವೇದಿಕೆ ಸಿದ್ಧವಾಗಿದೆ. ಹಲವು ದಶಕಗಳಿಂದ ಕಾವೇರಿ ಕೊಳ್ಳದ ನೀರಿಗಾಗಿ, ಜಾತಕ ಪಕ್ಷಿಯಂತೆ ಕಾಯುತ್ತಾ ಕೂತಿದ್ರೂ, ಕನಸು ನನಸಾಗುವ ಲಕ್ಷಣಗಳು ಕಾಣಿಸ್ತಿಲ್ಲ. ಹೀಗಾಗಿ ನೆರೆಯ ಆಂಧ್ರ ಪ್ರದೇಶದ ಕುಪ್ಪಂನಲ್ಲಿ ಹರಿಯುತ್ತಿರುವ ಕೃಷ್ಣೆಯನ್ನು, ರಾಜ್ಯಕ್ಕೆ ತರಲು ಪ್ರಯತ್ನ ಶುರುವಾಗಿದೆ.
ಕೃಷ್ಣಾ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು...
ಬೆಂಗಳೂರಲ್ಲಿ ಇಂದಿನಿಂದ ಜಾತಿ ಗಣತಿಯ ಸಮೀಕ್ಷೆ ಶುರುವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನೆಗೆ ಗಣತಿದಾರರು ಹೋಗಿ ಸಮೀಕ್ಷೆ ನಡೆಸಿದ್ದಾರೆ. ಪ್ರಾರಂಭದಲ್ಲಿ ತಾಳ್ಮೆಯಿಂದಲೇ ಇದ್ದ ಡಿಕೆಶಿ, ಕೆಲ ಹೊತ್ತಿನ ಬಳಿಕ ಗರಂ ಆಗಿದ್ದಾರೆ. ಬರೋಬ್ಬರಿ 1 ಗಂಟೆಗಳ ಕಾಲ ಸಾಲು, ಸಾಲು ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ಸುಸ್ತಾಗಿದ್ದಾರೆ. ಬಳಿಕ ಇದೆಲ್ಲಾ ಬೇಕಾ ಅಂತಾ ಪ್ರಶ್ನಿಸಿದ್ದಾರೆ.
ಸಮೀಕ್ಷೆಯಲ್ಲಿ ಜನ್ಮ ಜಿಲ್ಲೆ...
ನಾಡಹಬ್ಬ ದಸರಾ ಆಚರಣೆ ವೇಳೆ ತಮ್ಮ ಮೊಮ್ಮಗ ಕಾಣಿಸಿಕೊಂಡ ವಿಚಾರವಾಗಿ, ಪ್ರೋಟೋಕಾಲ್ ಉಲ್ಲಂಘನೆ ಆರೋಪಗಳನ್ನು ಸಚಿವ ಮಹದೇವಪ್ಪ ತಳ್ಳಿ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರೇಡ್ ವೇಳೆ, ಮಹದೇವಪ್ಪ ಮೊಮ್ಮಗ ಕಾಣಿಸಿಕೊಂಡ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರಿನಲ್ಲಿ ಹೆಚ್.ಸಿ ಮಹದೇವಪ್ಪ, ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ದಸರಾ ದಿನ ಉದ್ಘಾಟಕರೊಂದಿಗೆ ಚಾಮುಂಡಿ...
ನವೆಂಬರ್ ಕ್ರಾಂತಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಶಾಸಕರು ನವೆಂಬರ್ ತಿಂಗಳನ್ನೇ ಎದುರು ನೋಡುತ್ತಿದ್ದಾರೆ. ತಟಸ್ಥರಾಗಿರುವ ಒಂದಷ್ಟು...