ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ನಾಯಕರ ಮತಕಳ್ಳತನ ಆರೋಪಗಳಿಗೆ ಯಾವುದೇ ತೂಕ ಇಲ್ಲವೆಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮತಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವಂತೆ ನಾವು ಹಲವು ಬಾರಿ ಹೇಳಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ದೂರು...
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜನ ಸುರಾಜ್ ಪಕ್ಷ ಕಟ್ಟಿ ಬಂದ ಯಶಸ್ವಿ ತಂತ್ರಗಾರ ಪ್ರಶಾಂತ್ ಕಿಶೋರ್ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ರಾಜ್ಯದ 243 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧೆಗೆ ತರುತ್ತಿದ್ದರೂ, ಪಕ್ಷ ಒಂದೇ ಒಂದು ಸ್ಥಾನವನ್ನು ಗೆಲ್ಲಲಿಲ್ಲ.
ಆರಂಭದಲ್ಲಿ ತೇಜಸ್ವಿ ಯಾದವ್ ವಿರುದ್ಧ ರಾಘೋಪುರ ಅಥವಾ ಕಾರ್ಗಹರ್‌ನಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಪ್ರಶಾಂತ್ ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ...
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆ ಮತ್ತೆ ಚುರುಕಾಗಿದೆ. ಚುನಾವಣೆಗೂ ಮುನ್ನ ಈ ವಿಷಯಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿತ್ತು. ವಿಜಯೇಂದ್ರ ವಿರುದ್ಧ ಕೆಲವು ಪಕ್ಷದ ನಾಯಕರು ತಮ್ಮ ಅಭಿಪ್ರಾಯವನ್ನು ತಟ್ಟಿಕೊಂಡಿದ್ದರೂ, ಬಿಹಾರ ಫಲಿತಾಂಶ ಬಿಡುಗಡೆಗೊಳ್ಳುತ್ತಿದ್ದಂತೆಯೇ ಅವರು...
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಇದರ ಪರಿಣಾಮ ‘ನವೆಂಬರ್ ಕ್ರಾಂತಿ’ ಅನ್ನೋ ನಿರೀಕ್ಷೆಗಳು ಸಂಪೂರ್ಣ ಹುಸಿ ಆಗಿದೆ. ಪಕ್ಷದ ಉತ್ಸಾಹಕ್ಕೆ ಗಟ್ಟಿಯಾದ ತಗ್ಗು ಉಂಟಾಗಿದೆ. ರಾಜ್ಯದಲ್ಲಿ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ನಾಯಕತ್ವ ಬದಲಾವಣೆ ಕುರಿತು ನಿರೀಕ್ಷೆ ಇತ್ತು. ಬಿಹಾರದ ಫಲಿತಾಂಶಗಳು ಈ ಎಲ್ಲಾ...
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ವಿಪಕ್ಷಗಳು ಸಂಪೂರ್ಣ ಧೂಳಿಪಟವಾಗಿರುವ ಚಿತ್ರಣ ಸ್ಪಷ್ಟವಾಗಿದೆ. ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷವು ಈ ಬಾರಿ ಸಂಪೂರ್ಣ ಹೀನಾಯ ಸೋಲನ್ನು ಕಂಡಿದ್ದು, ಯಾವುದೇ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ವಿಫಲವಾಗಿದೆ.
ಫಲಿತಾಂಶದ ದಿನವೇ ಜನ ಸುರಾಜ್ ಪಕ್ಷದ ತರಾರಿ ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖರ್ ಸಿಂಗ್ ಹೃದಯಾಘಾತದಿಂದ...
ದೇಶದ ಏಳು ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಮಿಶ್ರ ಫಲಿತಾಂಶ ಕಂಡುಬಂದಿದೆ. ತೆಲಂಗಾಣದ ಜುಬಿಲಿ ಹಿಲ್ಸ್‌ನಲ್ಲಿ ಕಾಂಗ್ರೆಸ್ ತೀವ್ರ ಮುನ್ನಡೆ ಸಾಧಿಸಿದೆ. ನವೀನ್ ಕುಮಾರ್ ಯಾದವ್ ಬಿಆರ್‌ಎಸ್ ಅಭ್ಯರ್ಥಿ ಸುನಿತಾ ಅವರಿಗಿಂತ 15,000ಕ್ಕೂ ಹೆಚ್ಚು ಮತಗಳಿಂದ ಮುಂದೆ ಇದ್ದಾರೆ. ಒಡಿಶಾದ ನುವಾಪಾದಲ್ಲಿ ಬಿಜೆಪಿ ಭರ್ಜರಿ ಮುನ್ನಡೆಯಲ್ಲಿದ್ದು, 28,000ಕ್ಕೂ ಹೆಚ್ಚು ಮತಗಳಿಂದ ಎದುರಾಳಿಗಳಿಗಿಂತ ಮುಂದೆ ಸಾಗುತ್ತಿದೆ.
ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ...
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಭರ್ಜರಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್–ಆರ್‌ಜೆಡಿ ಮೈತ್ರಿಯ ಕಳಪೆ ಸಾಧನೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಹಾರದಲ್ಲಿಯೂ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಹಾಘಟಬಂಧನ್ ಸೋಲಿಗೆ ನಿಖರ ಕಾರಣ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಹಿಂದೆಯೇ ಹರಿಯಾಣ ಮತ್ತು ಕರ್ನಾಟಕದಲ್ಲೂ ಇದೇ...
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದ ಮತ ಎಣಿಕೆ ನಡೀತಾಯಿದೆ. ಈ ಹಿನ್ನೆಲೆಯಲ್ಲಿ ಜತೆಗೆ ದೇಶದಾದ್ಯಂತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಜಿಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಬಿಹಾರ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ದಿನಗಳ ಹಿಂದೆಯೇ ಹೊರಬಿದ್ದ ಚುನಾವಣಾ ಸಮೀಕ್ಷೆಗಳು ಎನ್‌ಡಿಎ ಭರ್ಜರಿ ಮುನ್ನಡೆಯನ್ನು ಸೂಚಿಸಿತ್ತು. ಬಹುತೇಕ ಎಲ್ಲಾ ಸಮೀಕ್ಷೆಗಳೂ ಒಂದೇ ಸಂದೇಶವನ್ನು...
ತೆಲಂಗಾಣದ ಜುಬಿಲಿ ಹಿಲ್ಸ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೃಹತ್ ಜಯ ಸಾಧಿಸಿದೆ. ಬಿಹಾರ ಚುನಾವಣೆಯಲ್ಲಿ ಹೀನಾಯ ಸೋಲಿನತ್ತ ಸಾಗುತ್ತಿರುವ ಕಾಂಗ್ರೆಸ್‌ಗೆ, ತೆಲಂಗಾಣದ ಈ ಫಲಿತಾಂಶ ಮಹತ್ತರವಾದ ಸಮಾಧಾನ ತಂದಿದೆ. ಹೈದರಾಬಾದ್‌ನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾದ ಜುಬಿಲಿ ಹಿಲ್ಸ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ. ನವೀನ್ ಯಾದವ್ ಅವರು 24,729 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.
ನವೆಂಬರ್ 11ರಂದು ನಡೆದ ಉಪಚುನಾವಣೆಯಲ್ಲಿ...
ಇಲ್ಲೊಬ್ಬ ಅಭ್ಯರ್ಥಿ ಜೈಲಿನಲ್ಲೇ ಇದ್ದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. 2025ರ ಬಿಹಾರ ವಿಧಾನಸಭಾ ಚುನಾವಣೆಯ ಪ್ರಮುಖ ಹಾಟ್‌ಸೀಟ್ ಆಗಿದ್ದ ಪಾಟ್ನಾದ ಮೊಕಾಮಾ ಸ್ಥಾನದಲ್ಲಿ JD(U) ಅಭ್ಯರ್ಥಿ ಮತ್ತು ವಿವಾದಿತ ನಾಯಕ ಅನಂತ್ ಸಿಂಗ್ 28,206 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಅವರ ಮುಖ್ಯ ಪ್ರತಿಸ್ಪರ್ಧಿ, ಆರ್‌ಜೆಡಿ ಅಭ್ಯರ್ಥಿ ವೀಣಾ ದೇವಿ ಬಾಹುಬಲಿ ಸೂರಜ್‌ಭನ್ ಸಿಂಗ್...
Koppala News: ಕೊಪ್ಪಳದಲ್ಲಿಂದು ಜನಾರ್ಧನ ರೆಡ್ಡಿ ಮಾಧ್ಯಮದ ಜತೆ ಮಾತನಾಡಿದ್ದು, ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹವೇ ಕಾರಣ ಎಂದು ಹೇಳಿದ್ದ ಬೋಸ್‌ರಾಜುಗೆ ಟಾಂಗ್ ನೀಡಿದ್ದಾರೆ.
ಇರಾನ್‌ನಿಂದ...