Monday, June 16, 2025

ರಾಜಕೀಯ

ನಿಖಿಲ್ ಗೆಲುವಿಗಾಗಿ ಅಯ್ಯಪ್ಪನ ಮೊರೆ ಹೋದ ಅಭಿಮಾನಿಗಳು..!

ಮಂಡ್ಯ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲ ದಿನಗಳು ಬಾಕಿ ಇರೋ ಬೆನ್ನಲ್ಲೆ ಇದೀಗ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲುವಿಗಾಗಿ ಅಭಿಮಾನಿಗಳು ಅಯ್ಯಪ್ಪನ ಮೊರೆ ಹೋಗಿದ್ದಾರೆ. ನಿಖಿಲ್ ಗೆಲುವಿಗಾಗಿ ಪ್ರಾರ್ಥಿಸಿ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಅಯ್ಯಪ್ಪನ ಮಾಲೆ ಧರಿಸಿದ್ದಾರೆ. ಇಲ್ಲಿನ ಇಂಡವಾಳು ಗ್ರಾಮದ 35 ಮಂದಿ ಮಾಲೆ ಧರಿಸಿರುವವರಾಗಿದ್ದು, ಇಂದು ಇರುಮುಡಿ ಕಟ್ಟಿಕೊಂಡು...

ಮಾಜಿ-ಹಾಲಿ ಸಿಎಂಗಳ ಏಟು ಎದಿರೇಟು- ಟ್ವೀಟ್ ನಿಂದಲೇ ಕುಮಾರಸ್ವಾಮಿ ಉತ್ತರ

ಬೆಂಗಳೂರು: ಖರ್ಗೆ ಕುರಿತಾದ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದು ಒಂದೆಡೆಯಾದ್ರೆ, ಇದೀಗ ಸಿಎಂ ಕುಮಾರಸ್ವಾಮಿ ಕೂಡ ಸಿದ್ದುಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದಾರೆ. ಇಂದು ಬೆಳಗ್ಗೆಯೇ ಸಿದ್ದರಾಮಯ್ಯ, ಜೆಡಿಎಸ್ ನಲ್ಲೂ ಸಿಎಂ ಆಗೋ ಯೋಗ್ಯತೆ ಹೊಂದಿರೋ ಬಹಳ ಜನ ಇದ್ದಾರೆ. ಅದರಲ್ಲಿ ರೇವಣ್ಣ ಕೂಡ ಒಬ್ಬರು ಅಂತ ಟ್ವೀಟ್ ಮಾಡಿ ಕುಮಾರಸ್ವಾಮಿ...

ಖರ್ಗೆ ಕುರಿತ ಕುಮಾರಸ್ವಾಮಿ ಹೇಳಿಕೆ- ಟ್ವೀಟ್ ಮೂಲಕವೇ ಸಿದ್ದು ಗುದ್ದು

ಬೆಂಗಳೂರು: ಖರ್ಗೆಯವರಿಗೆ ಸಿಎಂ ಆಗೋ ಯೋಗ್ಯತೆ ಇದೆ ಅಂತ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಇದೀಗ ಸಿದ್ದರಾಮಯ್ಯ ಬೇರೆ ರೀತಿಯೇ ಟ್ವೀಟ್ ಮಾಡಿದ್ದಾರೆ. ಸಿಎಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರೋ ಮಾಜಿ ಸಿಎಂ ಸಿದ್ದು, ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ‌ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ‌...

ಬಸವಣ್ಣ ನೀಡಿದ ವಾಗ್ದಾನ-ನಿಖಿಲ್ ಗೆಲುವು ಖಚಿತ ಅಂತಿದ್ದಾರೆ ಜನ

ಮಂಡ್ಯ:  ಮಂಡ್ಯ ಲೋಕಸಭಾ ಚುನವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಸಮೀಕ್ಷಾ ವರದಿ ಹೊರಬಿದ್ದಿವೆ. ಈ ಮಧ್ಯೆ ಚುನಾವಣೆ ಸಮಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ತಮ್ಮ ಗೆಲುವು ಕುರಿತು ಬಸವನ ಪಾದ ಬೇಡಿದ್ದರು. ಈ ವೇಳೆ ಬಸವ ನಿಖಿಲ್ ಕೈ ಮೇಲೆ ಪಾದ ಇಟ್ಟು ಆಶೀರ್ವದಿಸಿದ ವಿಡಿಯೋ ಈಗ ವೈರಲ್ ಆಗಿದೆ. ಮಂಡ್ಯ...

ಕ್ಯಾಂಟರ್ ಪಲ್ಟಿಯಾಗಿ ಕೋಳಿಗಳ ಮಾರಣ ಹೋಮ-ಸತ್ತಕೋಳಿಯನ್ನೂ ಬಿಡದೇ ಬಾಚಿಕೊಂಡ ಜನರು..!

ದಾವಣಗೆರೆ: ಕ್ಯಾಂಟರ್ ಪಲ್ಟಿಯಾಗಿ ಸುಮಾರು 800 ಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸತ್ತ ಕೋಳಿಯನ್ನೂ ಬಿಡದೆ ಜನರು ಅದನ್ನು ಬಾಚಿಕೊಂಡುಹೋಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ತಾಲೂಕಿನ ದ್ಯಾಮೇನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕೋಳಿ ತುಂಬಿದ್ದ ಕ್ಯಾಂಟರ್ ಏಕಾಏಕಿ ಪಲ್ಟಿ ಹೊಡೆದಿದೆ. ಹೀಗಾಗಿ 800 ಕೋಳಿಗಳು ಸಾವನ್ನಪ್ಪಿವೆ. ವಿಷಯ ತಿಳಿದ ಸ್ಥಳೀಯರು, ಕ್ಯಾಂಟರ್ ನಲ್ಲಿದ್ದವರ ನೆರವಿಗೆ...

ಶಕ್ತಿ ಇದ್ದರೆ ನಿಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಿ- ಸಿದ್ದುಗೆ ಶೋಭಾ ಸವಾಲ್

ಹುಬ್ಬಳ್ಳಿ: ಸಿದ್ದರಾಮಯ್ಯನವರೇ ನಿಮಗೆ ಶಕ್ತಿ ಇದ್ರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ನೋಡೋಣ ಅಂತ ಸಂಸದೆ ಶೋಭಾ ಕರಂದ್ಲಾಜೆ ಸವಾಲ್ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ನವರಿಗೆ ಶಕ್ತಿ ಇದ್ರೆ ನಿಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಿ, ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾದಾನ ಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ...

ನಟ ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ

ಚೆನ್ನೈ: ಕಮಲ್ ಹಾಸನ್ ಭಾಷಣ ಮಾಡುತ್ತಿದ್ದ ವೇಳೆ ಅವರ ಮೇಲೆ ಚಪ್ಪಲಿ ಎಸೆದ ಘಟನೆ ಮಧುರೈನಲ್ಲಿ ನಡೆದಿದೆ. ನಟ ಹಾಗೂ ಮಕ್ಕಳ್ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕರೂ ಆದ ಕಮಲ್ ಹಾಸನ್ ಕೆಲ ದಿನಗಳ ಹಿಂದೆ ’ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ಆತನ ಹೆಸರು ನಾಥೂರಾಮ್ ಗೋಡ್ಸೆ ’ ಅಂತ ಗಾಂಧೀಜೀಯವರನ್ನು ಹತ್ಯೆಗೈದ...

ಸುಮಲತಾ ಗೆಲ್ಲೋದು ಪಕ್ಕಾ- ರಾಕಿಂಗ್ ಸ್ಟಾರ್ ಯಶ್

ಮಂಡ್ಯ: ಲೋಕಸಭೆ ಚುನಾವಣೆ ಪ್ರಚಾರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ರು. ತಮ್ಮ ಅಭಿಮಾನಿ ಪ್ರಸಾದ್ ಎನ್ನುವವರ ಮನೆಯ ಗೃಹ ಪ್ರವೇಶಕ್ಕೆ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಬಂದಿದ್ದ ಯಶ್ ಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ರು.  ಬಳಿಕ ಮಾತನಾಡಿದ ಯಶ್, ಚುನಾವಣೆ ಮುಗಿದ ಬಳಿಕ ಸುಮಲತಾರನ್ನು...

ಅಫಿಡವಿಟ್ ನಲ್ಲಿ ಅರ್ಧಂಬರ್ಧ ಮಾಹಿತಿ- ಪ್ರಜ್ವಲ್ ರೇವಣ್ಣಗೆ ಸಂಕಷ್ಟ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಅಫಿಡವಿಟ್ ನಲ್ಲಿ ಅಪೂರ್ಣ ಮಾಹಿತಿ ನೀಡಿರೋ ದೂರಿನನ್ವಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ನಾಮಪತ್ರ ಸಲ್ಲಿಕೆ ವೇಳೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ತಾವು 7.39ಕೋಟಿ ರೂಪಾಯಿ ಆಸ್ತಿಯ ಒಡೆಯ, ಅಲ್ಲದೆ 3.72ಕೋಟಿ ರೂಪಾಯಿ ಸಾಲ ಹೊಂದಿದ್ದಾಗಿ ನಮೂದಿಸಿದ್ದರು. ಆದರೆ ಅಫಿಡವಿಟ್ ನಲ್ಲಿದ್ದ...

ಖರ್ಗೆಯನ್ನು ಹಾಡಿ ಹೊಗಳಿದ ಸಿಎಂ- ಸಿದ್ದುಗೆ ಎಚ್ಡಿಕೆ ಪರೋಕ್ಷ ಟಾಂಗ್

ಕಲಬುರಗಿ: ರಾಜಕೀಯ ಅನುಭವ ನೋಡಿದ್ರೆ ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು ಅಂತ ಸಿಎಂ ಕುಮಾರಸ್ವಾಮಿ ಮಲ್ಲಿಕಾರ್ಜುನ ಖರ್ಗೆಯವರನ್ನ ಹಾಡಿ ಹೊಗಳಿದ್ದಾರೆ. ಪದೇ ಪದೇ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅನ್ನೋ ಮಾತು ಕೇಳಿಬರುತ್ತಿರೋ ಮಧ್ಯೆ ಇದೀಗ ಖರ್ಗೆ ಸಿಎಂ ಆಗಬೇಕು ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಿಎಂ ಕುಮಾರಸ್ವಾಮಿ  ಕೂಡ ಪುಷ್ಟಿ ನೀಡೋ ರೀತಿಯಲ್ಲಿ ಮಾತನಾಡಿದ್ದಾರೆ. ಕಲಬುರಗಿ...
- Advertisement -spot_img

Latest News

ಶಬರಿಮಲೈ ಅಯ್ಯಪ್ಪ ದರ್ಶನ ಮಾಡಿ ಬರುವಾಗ ಹೃದಯಾಘಾತದಿಂದ ಯುವಕ ಸಾ*ವು

National News: ಶಬರಿಮಲೈ ಅಯ್ಯಪ್ಪನ ದರ್ಶನ ಮುಗಿಸಿ ಬರುವಾಗ, 18 ವರ್ಷದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತನಾಗಿದ್ದಾನೆ. ರಾಮನಗರದ ಕನಕಪುರ ಮೂಲದ ಪ್ರಜ್ವಲ್ ಮೃತ ಭಕ್ತನಾಗಿದ್ದಾನೆ. ಕನಕಪುರ...
- Advertisement -spot_img