93ರ ಇಳಿವಯಸ್ಸಲ್ಲೂ ರಾಜಕೀಯ ಹೋರಾಟ ನಿಲ್ಲಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆ, ಜೆಡಿಎಸ್ಗೆ ಹೊಸ ಹುಮ್ಮಸ್ಸು ನೀಡಿದೆ. ಆದ್ರೆ, ಮಿತ್ರಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ದೇವೇಗೌಡರ ರಾಜಕೀಯ ಮುಗಿಯಿತೆಂಬ ಲೆಕ್ಕಾಚಾರದಲ್ಲಿದ್ದವರಿಗೆ, ಹೆಚ್ಡಿಡಿ ಮಾತು ಕೇಳಿ ನಡುಕ ಉಂಟಾಗಿದೆ. ರಾಜ್ಯಸಭೆಗೆ ವ್ಹೀಲ್ಚೇರ್ನಲ್ಲೇ ಹೋಗುತ್ತೇನೆ. ಅವಧಿ ಪೂರ್ಣಗೊಂಡರೂ ನನ್ನ ಹೋರಾಟ ನಿಲ್ಲುವುದಿಲ್ಲ ಎನ್ನುವ...
ರಾಜ್ಯದೆಲ್ಲೆಡೆ ರಸ್ತೆ ಗುಂಡಿಗಳ ವಿಚಾರ, ಭಾರೀ ಸದ್ದು ಮಾಡ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟಕ್ಕೆ ಕರೆ ಕೊಡಲಾಗಿದೆ. ಈ ಬಗ್ಗೆ ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಜನಸಾಮಾನ್ಯರಿಗೆ ಸೂಕ್ತ ರಸ್ತೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ರಸ್ತೆ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ, ಕರ್ನಾಟಕದ ಬಹು ದೊಡ್ಡ ವರ್ಗಗಳ ಜನರನ್ನು ನಮ್ಮ ಪಕ್ಷದತ್ತ ಸೆಳೆಯುವ ಮೂಲಕ ಸಹಾಯ ಮಾಡುತ್ತಿರುವುದಕ್ಕಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತರಾತುರಿಯಲ್ಲಿ ಜಾತಿ ಜನಗಣತಿ...
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸಮರ ಸಾರಿದ್ದಾರೆ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದು, ಕಳಪೆ ಮಟ್ಟದ ಡಾಂಬರೀಕರಣ ಮಾಡಲಾಗ್ತಿದೆ ಎಂದು ಆರೋಪಿಸಿದೆ. ಹೀಗಾಗಿ ಬೆಂಗಳೂರಿನ ರಸ್ತೆಗಳನ್ನು ತಡೆದು, ಗುಂಡಿ ಮುಚ್ಚುವ ಅಭಿಯಾನವನ್ನು ಬಿಜೆಪಿಗರು ಕೈಗೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಗೆ ಇಳಿದಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ನಾಯಕರು ರೋಡಿಗಿಳಿದಿದ್ದಾರೆ....
ಸ್ವಾತಂತ್ರ್ಯ ಭಾರತದ ನಂತರ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಇಂದು ಕಾಂಗ್ರೆಸ್ CWC ಸಭೆ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿಮಿತ್ತ, ಸಿಎಂ ಸಿದ್ದರಾಮಯ್ಯಗೂ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಹಾರಕ್ಕೆ ಹೋಗಿದ್ದಾರೆ. ಈ ವೇಳೆ ಗಯಾದಲ್ಲಿರುವ ಪುರಾಣ ಪ್ರಸಿದ್ಧ ವಿಷ್ಣುಪಾದ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ತಮ್ಮ ಇಷ್ಟಾರ್ಥ ಸಿದ್ಧಿಗೆ, ಭಗವಾನ್...
ಬಿಹಾರದಲ್ಲಿ ಎಲೆಕ್ಷನ್ ಹತ್ತಿರವಾಗುತ್ತಿದೆ. ಚುನಾವಣಾ ಕಾರ್ಯತಂತ್ರದ ಕುರಿತು, ಕಾಂಗ್ರೆಸ್ ನಾಯಕರು ಮಹತ್ವದ ಕಾರ್ಯಕಾರಿ ಸಭೆ ನಡೆಸುತ್ತಿದ್ದಾರೆ. ಮತಗಳ್ಳತನ ವಿರುದ್ಧ ಹೋರಾಟದ ಬಳಿಕ ಮೊದಲ ಸಭೆ ಇದಾಗಿದೆ. ಬಿಹಾರದಲ್ಲಿ ನಡೆಯುತ್ತಿರುವ ಮೊದಲ ಸಿಡಬ್ಲ್ಯುಸಿ ಸಭೆ, ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿದೆ.
ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ ಅಧಿಕಾರ ಯಾತ್ರೆ ಬೆನ್ನಲ್ಲೇ ಸದಾಖತ್ ಆಶ್ರಮದಲ್ಲಿ ಈ ಸಭೆ...
ರಾಜ್ಯದಲ್ಲಿರುವ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು, ಈಗ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಪ್ರತಿ ತಿಂಗಳು ಗೃಹಲಕ್ಷ್ಮೀಯಿಂದ ಬಂದ ಹಣವನ್ನು ಕೂಡಿಟ್ಟು, ಬಂಡವಾಳ ಮಾಡಿಕೊಂಡು ವ್ಯಾಪಾರ ಶುರು ಮಾಡಿದ್ದಾರೆ. ಮಹಿಳಾ ದಸರಾದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಮಳಿಗೆಗಳು, ಎಲ್ಲರ ಗಮನ ಸೆಳೆದಿವೆ.
ತಿಂಡಿ ತಿನಿಸುಗಳ ಮಳಿಗೆ, ಬ್ಯಾಂಗಲ್ಸ್ ಸ್ಟೋರ್ ಹಾಗೂ ಬಟ್ಟೆ ಮಳಿಗೆ ತೆರೆದಿದ್ದು, ಸ್ವಯಂ ಉದ್ಯೋಗಿಗಳಾಗಿ ಫಲಾನುಭವಿಗಳು ಬದಲಾಗಿದ್ದಾರೆ. ವರಲಕ್ಷ್ಮಿ...
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನವೆಂಬರ್ನಲ್ಲಿ ಸಂಪುಟ ಪುನಾರಚನೆ ಫಿಕ್ಸ್ ಅಂತ್ಲೇ ಹೇಳಲಾಗ್ತಿದೆ. ಈ ಮಧ್ಯೆ ನಿಗಮ ಮಂಡಳಿ ಆಕಾಂಕ್ಷಿಗಳಿಗೆ, ದಸರಾ ಗಿಫ್ಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ. 35ರಿಂದ 37 ಕಾಂಗ್ರೆಸ್ ನಾಯಕರಿಗೆ, ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಸಿದ್ಧತೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಸಿದ್ಧಪಡಿಸಿದ ಪಟ್ಟಿ,...
Tumakuru: ತುಮಕೂರು: ತುಮಕೂರಿನಲ್ಲೂ ದಸರಾ ಧಾರ್ಮಿಕ ಮಂಟಪ ಉದ್ಘಾಟನೆ ಮಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಇಂದು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಪರಮೇಶ್ವರ್, ಇವತ್ತು ಎರಡನೇ ದಿವಸದ ಪೂಜೆಯಲ್ಲಿ ನಾನು ಮತ್ತು ನನ್ನ ಶ್ರೀಮತಿಯವರು ಭಾಗವಹಿಸಿದ್ದೇವೆ. ಬಹಳ ಯಶಸ್ವಿಯಾಗಿ ಪೂಜಾ ಕಾರ್ಯಗಳು ನಡೆದಿವೆ. ಇವತ್ತು ಎರಡನೇ ದಿನದ ಅಲಂಕಾರ ಚಾಮುಂಡೇಶ್ವರಿಗೆ ಮಾಡಲಾಗಿದೆ. ನಮ್ಮ...
ಕೋಲಾರ ಜಿಲ್ಲೆಯಲ್ಲೂ ಜಾತಿಗಣತಿಗೆ ಚಾಲನೆ ನೀಡಲಾಗಿದೆ. ಪ್ರಮುಖ ನಾಯಕರ ಮನೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ, ಚಾಲನೆ ನೀಡಲಾಗಿದೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಕೆಲ ಹೊತ್ತು ತೊಡಕುಂಟಾಗಿ ಆತಂಕ ಮೂಡಿಸಿತ್ತು. ಕೈಪಿಡಿ, ಬ್ಯಾಗ್ ಒಳಗೊಂಡ ಕಿಟ್ಗಳೊಂದಿಗೆ, 15 ತಾಲೂಕುಗಳಲ್ಲಿ ಮನೆ ಮನೆಗೆ ತೆರಳಿ ಗಣತಿದಾರರು ಸಮೀಕ್ಷೆ ಕೈಗೊಂಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 4 ಲಕ್ಷದ 17 ಸಾವಿರದ...