Friday, March 6, 2026

ಜಿಲ್ಲಾ ಸುದ್ದಿಗಳು

ಚುನಾವಣೆಗೆ ಸ್ಪರ್ಧಿಸೋಕೇ ಮಗಳನ್ನೇ ಕೊಂದ ಪಾಪಿ ತಂದೆ!

ಚುನಾವಣೆಗೆ ಸ್ಪರ್ಧಿಸಲು ಎರಡು ಮಕ್ಕಳ ನಿಯಮ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಆರು ವರ್ಷದ ಮಗಳನ್ನೇ ಕೊಂದ ಪಾಪಿ ತಂದೆಯೊಬ್ಬನನ್ನು ಪೊಲೀಸರು ಬಂಧಿಸಿರುವ ಭೀಕರ ಘಟನೆ ಮಹಾರಾಷ್ಟ್ರ–ತೆಲಂಗಾಣ ಗಡಿಭಾಗದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯಾದ ಬಾಲಕಿಯನ್ನು ಪ್ರಾಚಿ (6) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ಆರೋಪಿ ಮಹಾರಾಷ್ಟ್ರದ ನಾಂದೇಡ್, ಮುಖೇಡ್ ನ ಕೆರೂರ್...

ಆಸ್ಪತ್ರೆಯಲ್ಲೇ ರಕ್ತಪಾತ, ಕಿಮ್ಸ್‌ನಲ್ಲಿ ಭಯಾನಕ ಘಟನೆ!

ಗಾಂಜಾ ವಿಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಹಾಕಿದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಏಳು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಯದ್, ಹಸನ್ ನಾಯಕ್ ಮತ್ತು ಹಜರೆಸಾಬ ಎಂಬ ವ್ಯಕ್ತಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದರ ಬಗ್ಗೆ ಕಸಬಾಪೆಟೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ಪ್ರಕರಣಗಳು ದಾಖಲಾಗಿದೆ. ಹಲ್ಲೆ ಆಗಿದ್ದ ವ್ಯಕ್ತಿಗಳು ಕಿಮ್ಸ್...

ಕುರುಕ್ಷೇತ್ರ ನಾಟಕದಿಂದ ಮನಗೆದ್ದ ಪುಟಾಣಿಗಳು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪೌರಾಣಿಕ ನಾಟಕ ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದಾರೆ. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಪೌರಾಣಿಕ ನಾಟಕವನ್ನು ಕಲಿತು ಗ್ರಾಮದ ವೇದಿಕೆಯಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿದರು. ಕುರುಕ್ಷೇತ್ರ ಆಧಾರಿತ ಪೌರಾಣಿಕ ನಾಟಕವನ್ನು ಪುಟಾಣಿ ಮಕ್ಕಳು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಮಕ್ಕಳ ಅದ್ಭುತ ಅಭಿನಯವನ್ನು...

ಬಂಜಾರ ಕಲಾ ಮೇಳ ಸಂಭ್ರಮ, 65 ತಂಡಗಳ ಭರ್ಜರಿ ಪ್ರದರ್ಶನ!

ಕೊಪ್ಪಳ ನಗರದಲ್ಲಿ ಬಂಜಾರ ಸಮುದಾಯದ ಬಹುಮುಖಿ ಕಲಾ ಮೇಳ ಅದ್ದೂರಿಯಾಗಿ ಜರುಗಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು–ಕೊಪ್ಪಳ ವಲಯದ ಸಹಯೋಗದಲ್ಲಿ ವಿಭಾಗ ಮಟ್ಟದ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣಾ ಮೇಳವನ್ನು ನಗರದ ಶಹಾದಿ ಮಹಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಕಲಾ ಮೇಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ...

SSLC ಪೂರ್ವ ಪರೀಕ್ಷೆ ಕೇಂದ್ರಗಳಿಗೆ CEO ದಿಢೀರ್ ಭೇಟಿ

SSLC ಪೂರ್ವಸಿದ್ದತಾ ಪರೀಕ್ಷೆ ಪರಿಶೀಲಿಸಿದ ಜಿ.ಪಂ. ಸಿಇಓ ಜನವರಿ 27 ರಿಂದ ಪ್ರಾರಂಭವಾಗಿರುವ SSLC ಪೂರ್ವ ಸಿದ್ದತಾ ಪರೀಕ್ಷೆ ಹಿನ್ನೆಲೆಯಲ್ಲಿ ಮಂಡ್ಯ ತಾಲ್ಲೂಕಿನ ಸೂನಗನಹಳ್ಳಿ ಮತ್ತು ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಸಿಇಓ ನಂದಿನಿ KR ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಗೆ ಭೇಟಿ ನೀಡಿದ ಸಿಇಓ ಅವರು ಕಳೆದ ಮಾಹೆ...

ಚಿನ್ನ, ಬೆಳ್ಳಿ, ನಗದು, ಬೈಕ್ ಪತ್ತೆ; ಪೊಲೀಸ್ ಭರ್ಜರಿ ಕಾರ್ಯಾಚರಣೆ!

ಮಂಡ್ಯದಲ್ಲಿ ಮಳವಳ್ಳಿ ಉಪ ವಿಭಾಗದ ಪೊಲೀಸ್ ಠಾಣೆ ನೇತೃತ್ವದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಚಿನ್ನ, ಬೆಳ್ಳಿ, ನಗದು ಹಾಗೂ ಬೈಕ್ ಸೇರಿದಂತೆ 34.17 ಲಕ್ಷ ರೂಪಾಯಿ ಮೌಲ್ಯದ ವಸ್ತು ಜಪ್ತಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಮಳವಳ್ಳಿ ಪೊಲೀಸರು 3 ಪ್ರತ್ಯೇಕ ಪ್ರಕರಣಗಳಲ್ಲಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇರೋದು ಆತಂಕವನ್ನು...

ವಿದ್ಯಾರ್ಥಿಗಳ ‘ವ್ಯಾಪಾರ’ ಪ್ರತಿಭೆ ಮೆರೆದ ಸಂತೆ ಮೇಳ!

ತುಮಕೂರಿನ ತಿಪಟೂರು, ಗಾಂಧಿನಗರ ಬಡಾವಣೆಯಲ್ಲಿ ಇರುವ ಕೇಮ್ ಬ್ರಿಡ್ಜ್ ಇಂಗ್ಲಿಷ್ ಶಾಲೆ ಈಚೆಗೆ ವಿದ್ಯಾರ್ಥಿಗಳಲ್ಲಿ ವ್ಯವಹಾರ ಮತ್ತು ಉದ್ಯಮಿಕ ಜ್ಞಾನವನ್ನು ಉತ್ತೇಜಿಸಲು ಅದ್ದೂರಿ ಸಂತೆ ಮೇಳ ಕಾರ್ಯಕ್ರಮವನ್ನು ಆಯೋಜಿಸಿತು. ಶಾಲೆಯ ಮುಖ್ಯಸ್ಥರು ಮಾಧ್ಯಮಕ್ಕೆ ತಿಳಿಸಿದ್ದಂತೆ, ಮಕ್ಕಳನ್ನು ಉತ್ತಮ ಶಿಕ್ಷಣದೊಂದಿಗೆ ವ್ಯವಹಾರ ಜ್ಞಾನವನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಒಳ್ಳೆಯ ಉದ್ಯಮಿಗಳನ್ನಾಗಿ ಮಾಡಲು ಈ ರೀತಿಯ ಕಾರ್ಯಕ್ರಮಗಳು ನೆರವಾಗುತ್ತವೆ....

ಆಣೆ ಪ್ರಮಾಣ ಮಾಡಲು ಹೋಗಿ ಲಾಂಗ್ ಹಿಡಿದು ಗಲಾಟೆ!

ಶನಿದೇವರ ಮುಂದೆ ಆಣೆ ಪ್ರಮಾಣ ಮಾಡಲು ಹೋಗಿದ್ದ ವೇಳೆ ಲಾಂಗ್ ಹಾಗೂ ಮಚ್ಚುಗಳಿಂದ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಜನವರಿ 31ರ ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಮಂಜು ಮತ್ತು ನಾಗೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಜಗದೀಶ್ ಹಾಗೂ ವಿಜಯ್ ಮೇಲೆ ಲಾಂಗ್...

ನಿವೃತ್ತ DSPಗೆ ಅದ್ದೂರಿ ಬೀಳ್ಕೋಡುಗೆ!

ಸರ್ಕಾರಿ ಸೇವೆಯಿಂದ ನಿವೃತ್ತರಾದ ಪೊಲೀಸ್ ಅಧಿಕಾರಿಗೆ ಸಹೋದ್ಯೋಗಿಗಳಿಂದ ಅದ್ದೂರಿ ಬೀಳ್ಕೋಡುಗೆ ನೀಡಲಾಗಿದೆ. ಶ್ರೀರಂಗಪಟ್ಟಣ ಉಪ ವಿಭಾಗದ ನಿವೃತ್ತ DySP ಶಾಂತ ಮಲ್ಲಪ್ಪ ಅವರಿಗೆ ಠಾಣಾ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಹೋದ್ಯೋಗಿ ಸಿಬ್ಬಂದಿ ಪುಷ್ಪವೃಷ್ಟಿ ಮಾಡಿ, ಜೀಪ್ ಮೆರವಣಿಯ ಮೂಲಕ ಗೌರವ ಸಲ್ಲಿಸಿದರು. ಸಹೋದ್ಯೋಗಿಗಳ ಆತ್ಮೀಯ ಅಭಿಮಾನ ಕಂಡು ನಿವೃತ್ತ ಅಧಿಕಾರಿ ಶಾಂತ...

ಕೆಟ್ಟು ನಿಂತ ಲಾರಿಗೆ ಖಾಸಗಿ ಬಸ್ ಡಿಕ್ಕಿ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ಭಾರೀ ಅಪಘಾತ ತಪ್ಪಿದ ಘಟನೆ ನಡೆದಿದೆ. ಕೆಟ್ಟು ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಬಸ್ ಚಾಲಕ ಸೇರಿದಂತೆ ಒಟ್ಟು 15 ಮಂದಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾರನಗೆರೆ ಬಳಿ ಈ ಅಪಘಾತ ಸಂಭವಿಸಿದ್ದು, ಘಟನೆ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಿಗಂಧೂರು ಚೌಡೇಶ್ವರಿ...
- Advertisement -spot_img

Latest News

ಹಾಸನದಲ್ಲಿಎಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ!

ಹಾಸನ ಮಹಾನಗರಪಾಲಿಕೆಯ ಎಂಜಿನಿಯರ್ ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಹಾಸನದ ರವೀಂದ್ರ...
- Advertisement -spot_img