ಶ್ರೀನಗರ: ಇಲ್ಲಿನ ಲಾಲ್ ಬಜಾರ್ ಪ್ರದೇಶದಲ್ಲಿ ಮಂಗಳವಾರ ನಾಕಾ ಪಾರ್ಟಿಯ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಗ್ರರ ಗುಂಡಿನ ದಾಳಿ ನಡೆಸಿದ ಪ್ರದೇಶವನ್ನು ಸುತ್ತುವರೆದಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಅಮರನಾಥ ಯಾತ್ರೆಯಿಂದಾಗಿ ಹೆಚ್ಚಿನ ಭದ್ರತೆಯ...
ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರಿಗೆ ಮಂಗಳವಾರ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ. ವೈರಸ್ಗೆ ಧನಾತ್ಮಕ ಪರೀಕ್ಷೆ ಮಾಡುವ ಕೆಲವೇ ಗಂಟೆಗಳ ಮೊದಲು ಚೆನ್ನೈನಲ್ಲಿ ಚೆಸ್ ಒಲಿಂಪಿಯಾಡ್ಗಾಗಿ ಕೈಗೊಂಡ ವ್ಯವಸ್ಥೆಗಳನ್ನು ಸಿಎಂ ಕೊನೆಯದಾಗಿ ಪರಿಶೀಲಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸ್ಟಾಲಿನ್, "ನಾನು ಬೆಳಿಗ್ಗೆ ದಣಿದಿದ್ದೇನೆ. ಆದ್ದರಿಂದ, ನಾನು ಕರೋನವೈರಸ್ ಪರೀಕ್ಷೆಗೆ ಒಳಗಾದೆ. ನಾನು...
ಇತ್ತಿಚೀನ ದಿನಗಳಲ್ಲಿ ಮದುವೆಗಳಲ್ಲಿ ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಷ್ಟೆ ಅಲ್ಲದೇ ಅದರಲ್ಲಿ ಕೆಲ ಕ್ರಿಯಾತ್ಮಕ ಪದ್ದತಿಗಳನ್ನು ನೀವು ಕಾಣಬಹುದಾಗಿದೆ. ಪ್ರೀ ವೆಡ್ಡಿಂಗ್ ಶೂಟ್ಗಳು, ಬ್ಯಾಚುಲರ್ ಪಾರ್ಟಿ, ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ದಂಪತಿಯನ್ನು ಮೆರವಣಿಗೆ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ತರವುದಾಗಿರಬಹುದು ಹೀಗೆ ಅನೇಕ ಹೊಸ ಹೊಸ ಪದ್ದತಿಗಳನ್ನು ನೀವು ನೋಡಿರಬಹುದು. ಇದೀಗ ಅಸ್ಸಾಂನ...
ಮುಂಬೈ: ಕುದುರೆ, ಕಾರ್, ಬುಲ್ಡೋಜರ್ ಆಯ್ತು. ಇದೀಗ ಇಲ್ಲೋಂದು ಜೋಡಿ ಮದುವೆ ಮೆರವಣಿಗೆಗೆ ನೀರಿನ ಟ್ಯಾಂಕರ್ ಬಳಸಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ.
ಮಹಾರಾಷ್ಟದ ಈ ನವ ಜೋಡಿ ವಿಶಾಲ್ ಮತ್ತು ಅಪರ್ಣಾ ನೀರಿನ ಅವ್ಯವಸ್ಥೆ ಎತ್ತಿಹಿಡಿಯಲು ಟ್ಯಾಂಕರ್ ಬಳಸಿ ಅಚ್ಚರಿ ಮೂಡಿಸಿದ್ದಾರೆ. ಕೊಲ್ಹಾಪುರದಲ್ಲಿ ನೀರಿನ ಸಮಸ್ಯೆ ಅತೀಯಾಗಿರುವ ಹಿನ್ನೆಲೆ ಸ್ಥಳೀಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ಹೀಗೆ...
ನವದೆಹಲಿ: ಹಣ ನೀಡಲು ನಿರಾಕರಿಸಿದ್ದಕ್ಕೆ ಬಾಲಕನೊಬ್ಬ ಅಜ್ಜಿಯ ಕತ್ತನೆ ಸೀಳಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಶಾಲಿಮಾರ್ ಬಾಗ್ದಲ್ಲಿ ನಡೆದಿದೆ.
ಬಾಲಕನು ಸರ್ಜಿಕಲ್ ಬ್ಲೇಡ್ನಿಂದ ಅಜ್ಜಿಯ ಕತ್ತು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ವೃದ್ಧೆ...
ನವದೆಹಲಿ: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ 4 ತಿಂಗಳ ಜೈಲು ಶಿಕ್ಷೆ ಮತ್ತು 2000 ರೂ ದಂಡವನ್ನು ವಿಧಿಸಿದೆ. 2017ರಲ್ಲಿ ನ್ಯಾಯಾಲಯದಿಂದ ಮಾಹಿತಿಯನ್ನು ತಡೆಹಿಡಿದಿದ್ದಕ್ಕಾಗಿ ಅವರು ನ್ಯಾಯಾಂಗ ನಿಂದನೆಯ ಅಪರಾಧಿ ಎಂದು ಕಂಡುಬಂದಿದೆ. ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.
ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸೇರಿದ...
ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16,678 ಹೊಸ ಪ್ರಕರಣಗಳು ದಾಖಲಾಗಿದ್ದು, ಭಾರತವು ನಿನ್ನೆಗಿಂತ ಹೊಸ ಕರೋನವೈರಸ್ ಸೋಂಕುಗಳಲ್ಲಿ ಸ್ವಲ್ಪ ಇಳಿಕೆಯನ್ನು ದಾಖಲಿಸಿದೆ.
ಭಾನುವಾರ ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ, ದೈನಂದಿನ ಪಾಸಿಟಿವಿಟಿ ದರವು ಈಗ ಶೇಕಡಾ 6 ರ ಸಮೀಪದಲ್ಲಿದೆ. ದೇಶದ ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳ ಶೇಕಡಾ 0.30 ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ 14,629...
ನವದೆಹಲಿ: ಜೆಇಇ ಮೇನ್ 2022 ಫಲಿತಾಂಶ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜುಲೈ 11 ರಂದು ಸೆಷನ್ 1 ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮುಖ್ಯ 2022) ಫಲಿತಾಂಶವನ್ನು ಇಂದು ಪ್ರಕಟಿಸಿದೆ.
ಜೆಇಇ ಮೇನ್ 2022 ಜೂನ್ ಸೆಷನ್ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಸ್ಕೋರ್ಕಾರ್ಡ್ ಡೌನ್ಲೋಡ್ ಮಾಡಬಹುದು- jeemain.nta.nic.in. ಜೆಇಇ ಮುಖ್ಯ...
ಡೆಹ್ರಾಡೂನ್: ಭಾರೀ ಮಳೆಯಿಂದಾಗಿ ನದಿ ನೀರಿನ ರಭಸಕ್ಕೆ ಕಾರೊಂದು ಕೊಚ್ಚಿ ಹೋಗಿದ್ದು, 9 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಾಖಂಡದ ರಾಮನಗರದ ಬಳಿ ಧೇಲಾ ನದಿಯಲ್ಲಿ ನಡೆದಿದೆ.
ಮಳೆ ಆರ್ಭಟಕ್ಕೆ ನದಿಯಲ್ಲಿ ಪ್ರವಾಹ ಹೆಚ್ಚಿದ್ದ ಕಾರಣ ನೀರಿನ ಸೆಳೆತಕ್ಕೆ ಸಿಲುಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಬಾಲಕಿಯನ್ನು ರಕ್ಷಿಸಲಾಗಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ...
ಚೆನ್ನೈ: ನಟ ವಿಕ್ರಮ್ ಅವರಿಗೆ ಲಘು ಹೃದಯಾಘಾತ ಉಂಟಾಗಿತ್ತು, ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ 56 ವರ್ಷ ವಯಸ್ಸಾಗಿದೆ.
ಮೂಲಗಳ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ವಿಕ್ರಮ್ ಅವರನ್ನು ದಾಖಲಿಸಲಾಗಿದೆ. ಸಂಜೆ 6 ಗಂಟೆಗೆ ಚೆನ್ನೈನಲ್ಲಿ ನಡೆಯಲಿರುವ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ವಿಕ್ರಮ್ ಭಾಗವಹಿಸಬೇಕಿತ್ತು.
ವಿಕ್ರಮ್ ಅವರನ್ನು ಚಿಯಾನ್ ವಿಕ್ರಮ್ ಎಂದೂ...