Friday, May 8, 2026

ರಾಜಕೀಯ

ಅರಸು ದಾಖಲೆ ಮುರೀತಾರಾ ಸಿದ್ದರಾಮಯ್ಯ..?

ನವೆಂಬರ್ ಕ್ರಾಂತಿಯ ಕಿಚ್ಚಿನ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಂದು ಐತಿಹಾಸಿಕ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ, ಸಿಎಂ ಆಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ದೇವರಾಜ ಅರಸು ಅವರ ದಾಖಲೆಯನ್ನು, ಸಿದ್ದರಾಮಯ್ಯ ಮುರಿಯಲಿದ್ದಾರೆ. ಆದರೆ, ಇದು ಸಾಕಾರಗೊಳ್ಳಬೇಕಾದರೆ ಸಿದ್ದರಾಮಯ್ಯ ಅವರು, ಜನವರಿವರೆಗೂ ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕು. ಅಧಿಕಾರ ಹಂಚಿಕೆ ಊಹಾಪೋಹಗಳು ನಿಜವಾಗದೇ ಇದ್ದಲ್ಲಿ,...

ಕತ್ತಿಯ ಸೊಕ್ಕು ಮುರಿದ ಸಾಹುಕಾರ್, ಜೊಲ್ಲೆ ಗೆಲುವಿನ ಸೀಕ್ರೆಟ್ ಏನು?

'ಅಶ್ವಮೇಧ ಕುದುರೆಯನ್ನ ಕಟ್ಟಿ ಹಾಕ್ತಿನಿ' ಎಂದಿದ್ದ ಕತ್ತಿಗೆ ದೊಡ್ಡ ಮುಖಭಂಗವಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಓಟದಲ್ಲಿ ಬ್ಯಾಂಕ್ ನ ಅಧ್ಯಕ್ಷರಾಗಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಸಕ ರಾಜು ಕಾಗೆ ಆಯ್ಕೆಯಾಗಿದ್ದು, ಈ ಮೂಲಕ ಜಾರಕಿಹೊಳಿ ಬ್ರದರ್ಸ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಲಿಂಗಾಯತ ಸಮುದಾಯದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ...

ಬಿಹಾರ ಸಿಎಂ ನಿತೀಶ್‌ ಕುಮಾರ್‌ಗೆ ಸೋಲಿನ ಭಯನಾ..?

ಇಡೀ ದೇಶದ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಕೊನೆಯಾಗಿದೆ. ರಾಜ್ಯದ 243 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯ 2ನೇ ಹಂತ, ನಾಳೆ ನಡೆಯಲಿದೆ. ನವೆಂಬರ್‌ 14ರಂದು ಎಲೆಕ್ಷನ್ ರಿಸಲ್ಟ್ ಪ್ರಕಟವಾಗಲಿದೆ. ಕೊನೆ ಹಂತದ ಪ್ರಚಾರದಲ್ಲಿ ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ವಿಪಕ್ಷ ನಾಯಕ ರಾಹುಲ್‌ ಗಾಂಧಿ ತಮ್ಮ ಅಭ್ಯರ್ಥಿಗಳ ಪರ...

ನೋಂದಣಿ ಇಲ್ಲ, ತೆರಿಗೆ ಕಟ್ಟುತ್ತಿಲ್ಲ ಟೀಕೆಗೆ ‘ಭಾಗವತ್’ ಸ್ಪಷ್ಟನೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವ ಕಾರಣಕ್ಕಾಗಿ ನೋಂದಣಿ ಮಾಡಿಸಿಕೊಳ್ಳಲಿಲ್ಲ ಎಂಬುದಕ್ಕೆ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಸಂಘ ಸ್ಥಾಪನೆಯ 100ನೇ ವರ್ಷದ ಅಂಗವಾಗಿ ಬೆಂಗಳೂರಿನ PES ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ನವಕ್ಷಿತಿಜ ಉಪನ್ಯಾಸದಲ್ಲಿ ಮಾತನಾಡಿ ಈ ಕುರಿತು ಸ್ಪಷ್ಟಪಡಿಸಿದರು. ಆರ್‌ಎಸ್‌ಎಸ್‌ಗೆ ಕಾನೂನುಬದ್ದ ಮಾನ್ಯತೆ ಇಲ್ಲದೆ ಇದ್ದರೆ, ಸಂಘವನ್ನು ನಿಷೇಧಿಸಲು ಯಾಕೆ ಆಗ್ರಹಿಸುತ್ತಿದ್ದಾರೆ?...

C.T.ರವಿ ವಿರುದ್ಧ FIR ದಾಖಲು

ಸವಿತಾ ಸಮಾಜದ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿರುವ ಆರೋಪದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕಾಂಗ್ರೆಸ್‌ ಮುಖಂಡ ಮುರುಗೇಶ್‌ ಮೊದಲಿಯಾರ್ ದೂರಿನನ್ವಯ, ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ಟೋಬರ್‌ 17ರಂದು ಚಿಕ್ಕಮಗಳೂರಿನ ಮೆಡಿಕಲ್‌ ಕಾಲೇಜಿಗೆ ಎಂಎಲ್‌ಸಿ ಸಿ.ಟಿ. ರವಿ ಭೇಟಿ ಕೊಟ್ಟಿದ್ರು. ಆ ವೇಳೆ ಡೀನ್‌ ಇರದಿದ್ದಕ್ಕೆ ಸಿಟ್ಟಾಗಿದ್ದ ಸಿ.ಟಿ....

ಬಿಹಾರದಲ್ಲಿ ಗೆಲ್ಲೋದ್ಯಾರು? ಕಿಂಗ್‌ ಮೇಕರ್‌ ಅಂತೂ ಪಕ್ಕಾ!

ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ, ಇದೇ ನವೆಂಬರ್ 11ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಎರಡನೇ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್ ಹೊರಬೀಳಲಿದೆ. ಮೊದಲ ಹಂತದಲ್ಲಿ ನಡೆದ 121 ಕ್ಷೇತ್ರಗಳಲ್ಲಿ ಶೇಕಡಾ 64.66 ಮತದಾನವಾಗಿದೆ. ಇದುವರೆಗೆ ಹಲವು ಸಮೀಕ್ಷೆಗಳು ಹೊರಬಿದ್ದಿವೆ. ಈ ಸರ್ವೇಗಳ ಪ್ರಕಾರ, ಬಿಹಾರದ...

ಅನ್ನದಾತರಿಗೆ ಅನ್ಯಾಯವಾಗಲು ಬಿಡಲ್ಲ..

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ರತಿ ಟನ್‌ ಕಬ್ಬಿಗೆ 3,300 ರೂಪಾಯಿ ದರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿದ್ದು, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನಮ್ಮ ಸರ್ಕಾರ ಅನ್ನದಾತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ...

ಸಿದ್ದು ವಿರುದ್ಧ ಪ್ರಹ್ಲಾದ್‌ ಜೋಶಿ ಸಿಡಿಮಿಡಿ

ಮುಖ್ಯಮಂತ್ರಿ ಹುದ್ದೆಯ ಹಗ್ಗಜಗ್ಗಾಟದಲ್ಲಿ ಸಿಎಂ ಸಿದ್ದರಾಮಯ್ಯ ಏನೇನೋ ಬಡಬಡಿಸುತ್ತಿದ್ದಾರೆ. ಸರಿಯಾದ ದತ್ತಾಂಶ, ಅಧಿಕಾರಿಗಳಿಂದ ನೈಜ ಮಾಹಿತಿ ಪಡೆದು ಮಾತನಾಡಬೇಕೆಂಬ ಪರಿಜ್ಞಾನ ಸಿಎಂಗೆ ಇಲ್ಲದಿರುವುದು ರಾಜ್ಯದ ದುರಂತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಎಥೆನಾಲ್‌ ಹಂಚಿಕೆಯ ಮಾಹಿತಿಯೇ ಸುಳ್ಳು ಎಂದಿರುವ ಸಿಎಂ ಆರೋಪಕ್ಕೆ ಜೋಶಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿರುವ ಸಿಎಂ,...

ಮುಂದಿನ CM ಆಗ್ತಾರಾ ಡಿಕೆಶಿ?‌ ಪಂಜುರ್ಲಿ ದೈವವಾಣಿ!

ಪವರ್‌ ಶೇರಿಂಗ್‌ ವಿಚಾರ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ನಾನೇ ಸಿಎಂ ಅಂತಾರೆ. ಮತ್ತೊಮ್ಮೆ ಹೈಕಮಾಂಡ್‌ ತೀರ್ಮಾನ ಅಂತಾರೆ. ಆದ್ರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಮೌನದ ಮೊರೆ ಹೋಗಿದ್ದಾರೆ. ದೇವರು, ಭಕ್ತ, ಪ್ರಯತ್ನ ವಿಫಲವಾಗಲ್ಲ ಎನ್ನುತ್ತಾ ಒಗಟಾಗಿ ಮಾತುಗಳನ್ನಾಡ್ತಿದ್ದಾರೆ. ಈ ಮಧ್ಯೆ ಮುಂದಿನ ಸಿಎಂ ಯಾರು? ಯಾವಾಗ?...

ರೈತರ ಸಮಸ್ಯೆ ಪರಿಹಾರಕ್ಕೆ PMಗೆ CM ಪತ್ರ

ರಾಜ್ಯದಲ್ಲಿ ಕಬ್ಬು ಬೆಳೆಗಾರರು ರಣಕಹಳೆ ಮೊಳಗಿಸಿದ್ದು, ಕಾಂಗ್ರೆಸ್‌ ಸರ್ಕಾರದ ನಿದ್ದೆಗೆಡಿಸಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚರ್ಚಿಸಲು, ತುರ್ತು ಭೇಟಿಗೆ ಅವಕಾಶ ನೀಡುವಂತೆ, ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆಗೆ ರಾಜ್ಯ ಸರ್ಕಾರ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img