ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಎಸ್‌ಐಟಿ ತನಿಖೆ, ಬೇರೆಯದ್ದೇ ತಿರುವು ಪಡೆದುಕೊಂಡಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ, ತಿಮರೋಡಿ, ಮಟ್ಟಣ್ಣವರ್, ಜಯಂತ್ ವಿಚಾರಣೆ ಬಳಿಕ, ಅಧಿಕಾರಿಗಳು ಯೂಟ್ಯೂಬರ್‌ಗಳ ಬೆನ್ನು ಬಿದ್ದಿದ್ದಾರೆ.
ಎಂ.ಡಿ. ಸಮೀರ್, ಹಾಸನ ಮೂಲದ ಅಭಿಷೇಕ್ ಸೇರಿದಂತೆ 5ಕ್ಕೂ ಹೆಚ್ಚು ಯೂಟ್ಯೂಬರ್‌ಗಳ ವಿಚಾರಣೆ ನಡೀತಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ, ಈ...
ಹಾವು ಎಂದರೇ ಹೌಹಾರಿಬಿಡ್ತೀವಿ. ಎದ್ನೋ ಬಿದ್ನೋ ಅಂತ ಓಡಿಬಿಡ್ತೀವಿ. ಆದರೇ, ಇಲ್ಲೊಬ್ಬ ವ್ಯಕ್ತಿ ಹಾವುಗಳನ್ನ ಸ್ನೇಹಿತರಂತೆ ನೋಡ್ತಾರೆ. ಅದ್ಯಾವುದೇ ಜಾತಿಯ ಹಾವೇ ಇರ್ಲಿ, ಸಂಕಷ್ಟದಲ್ಲಿದ್ದರೇ ಈತನೇ ಅವುಗಳ ಪಾಲಿಗೆ ವೆಂಕಟರಮಣ ಆಗಿದ್ದಾನೆ. ಹೀಗೆ ರೋಜ್ ಹಿಡಿಯೋ ರೀತಿ ಹಾವು ಹಿಡಿಯೋ ಉರಗ ಪ್ರೇಮಿ ಯಾರು ಗೊತ್ತಾ? ಇವರೇ ವಸಂತ್..
ವಸಂತ್ ಶಿಳ್ಳೆಕ್ಯಾತವರ.. ಕೊಪ್ಪಳ ಜಿಲ್ಲೆಯ ಕೆರಳ್ಳಿ...
ರಾಜ್ಯದ ರಾಜಧಾನಿ ಬೆಂಗಳೂರಿನ ಭಾಗವೇ ಆಗಿ ಕಾಣೋ ತುಮಕೂರು ಜಿಲ್ಲೆಗೂ ನಮ್ಮ ಮೆಟ್ರೋ ಸಾಗಲಿದೆ ಅನ್ನೋ ವಿಷಯ ಕೇಳಿಯೇ ತುಮಕೂರಿನ ಮಂದಿ ಖುಷಿಪಟ್ಟಿದ್ದಾರೆ. ಸದ್ಯ, ಕರ್ನಾಟಕ ಸರ್ಕಾರವು ಬೆಂಗಳೂರು - ತುಮಕೂರು ಮೆಟ್ರೋ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ. ಸದ್ಯ ಯೋಜನೆಯ 2ನೇ ಹಂತವಾದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧ...
ಕಳೆದ 7 ದಿನಗಳಿಂದ ಈ ಸ್ವಾಮಿಯ ಮಾತಿಲ್ಲ... ಊಟವಿಲ್ಲ..! ಎಲ್ಲದಕ್ಕೂ ಕಾರಣ 'ಲೋಕ ಶಾಂತಿ'ಯ ಸಂಕಲ್ಪ! ಸಕ್ಕರೆನಾಡು ಮಂಡ್ಯದಲ್ಲಿ ಒಂದು ಅದ್ಭುತ ದೃಶ್ಯ ನಡೆಯುತ್ತಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಕಾರಣದಿಂದ ಈ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತಿದೆ. ಈ ಅನಾಹುತ ತಡೆಯುವ ನಿಟ್ಟಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಇಲ್ಲೊಬ್ಬರು ಸ್ವಾಮೀಜಿ ತಮ್ಮ ಮಾತನ್ನೇ ನಿಲ್ಲಿಸಿದ್ದಾರೆ.
ಹೌದು...
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಡಾ. ನೇಮಿನಾಥ ತಪಕೀರೆ ಎಂಬ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಮುಂದಾಗಿ ಡೆತ್ ನೋಟ್ ಬರೆದಿದ್ದಾರೆ. ಆ ಡೆತ್ ನೋಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆತಂಕ ಸೃಷ್ಟಿಸಿದೆ. ಅವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿರುವುದರಿಂದ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಗಮನಾರ್ಹ ಏನೆಂದರೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ...
ಯಾದಗಿರಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಅಪಾರ ಬೆಳೆ ಹಾನಿಯಾಗುತ್ತಿದೆ. ಈ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡದ ಬಗ್ಗೆ ಮಾಜಿ ಸಚಿವ ರಾಜುಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರವಾಹ ಆಗಿ ಬೆಳೆ ಹಾನಿಯಾಗಿದೆ ಇದರ ಬಗ್ಗೆ ಮಾತಾಡೋದು...
ನಾಳೆ ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 1 ಹಾಗೂ 2 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅ.1ರಂದು ಮಧ್ಯಾಹ್ನ 3.25ಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದು ವಾಸ್ತವ್ಯ ಹೂಡುವರು. 2ರಂದು ಬೆಳಿಗ್ಗೆ 8.30ಕ್ಕೆ ಗಾಂಧಿ ವೃತ್ತದಲ್ಲಿ ಗಾಂಧಿ ಜಯಂತಿ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಬೆಳಿಗ್ಗೆ 9ಕ್ಕೆ ಚಾಮುಂಡಿಬೆಟ್ಟದ...
ಇಂದು ದೇಶದೆಲ್ಲಡೆ ಆಯುಧಪೂಜೆಯ ಸಂಭ್ರಮ ಮನೆಮಾಡಿದೆ. ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಆಯುಧಪೂಜೆ ಸಂಭ್ರಮ ಮಾಡಿದೆ. ಯದುವೀರ್ ಒಡೆಯರ್ ಅವರು ಪೂಜೆ ಕಾರ್ಯ ನೆರೆವೇರಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಚಂಡಿಕಾ ಹೋಮ ಆರಂಭವಾಗಿದ್ದು, 7.55 ಕ್ಕೆ ಅರಮೆನಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಗಿದೆ. ನಂತರ ಆಯುಧಗಳನ್ನು ಶುಚಿಗೊಳಿಸಿ...
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಟೆನಿಸ್ ಕ್ರೀಡಾಂಗಣ ನಿರ್ಮಾಣಕ್ಕೆ, ರಾಜ್ಯ ಸರ್ಕಾರ ಮುಂದಾಗಿದೆ. ತುಮಕೂರು ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಕ್ರೀಡಾಂಗಣ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಲಾಗುತ್ತಿದೆ. ಹೀಗಂತ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಟೆನಿಸ್ ಕ್ರೀಡಾಂಗಣದ ಕನಸು...
ಕೋಲಾರ ನಗರಸಭೆ ಅಧಿಕಾರಿಗಳು ಭಾರೀ ಯಡವಟ್ಟು ಮಾಡಿದ್ದಾರೆ. ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರಂತೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಶಾಸಕ ಕೊತ್ತನೂರು ಮಂಜುನಾಥ್ ಸೂಚಿಸಿದ್ದಾರೆ.
ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನ, ಸದಸ್ಯರಾದ ಸೂರಿ ಹಾಗೂ ಮಂಜುನಾಥ್ ಪ್ರಸ್ತಾಪಿಸಿದ್ರು. ನಗರಸಭೆ ಸಿಬ್ಬಂದಿಯ ಲಾಗಿನ್ ಐಡಿ, ಪಾಸ್‌ವರ್ಡ್ ಬೇರೊಬ್ಬರ ಕೈಯಲ್ಲಿದ್ದು,...
ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...