ರಂಜಾನ್ ಹಬ್ಬದಂದೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಹಾಸನ ರಸ್ತೆಯ ಸಮೀಪದ ಕೆರಗೋಡಿ ರಸ್ತೆ ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಜಾನುವಾರು ಸಾಗಾಟದ ವಿಚಾರವಾಗಿ ಉದ್ಭವಿಸಿದ ಗಲಾಟೆಯಲ್ಲಿ ಬಜರಂಗದಳದ ಸಂಘಟನೆಯ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕೆಲ...
ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅವರಿಗೆ ಭಾರೀ ಆಘಾತ ಎದುರಾಗಿದೆ. ಇದೀಗ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ, ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ...
Bidar: 1 ತಿಂಗಳ ಉಪವಾಸದ ಬಳಿಕ ದೇಶದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು. ಅದೇ ರೀತಿ ಬೀದರ್‌ನಲ್ಲೂ ಕೂಡ ಸಂಭ್ರಮದ ರಂಜಾನ್ ಹಬ್ಬ ನಡೆದಿದೆ.
ಬೀದರ್‌ನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಸವಕಲ್ಯಾಣ, ಹುಮನಾಬಾದ್, ಔರಾದ್, ಭಾಲ್ಕಿ ಸೇರಿದಂತೆ ಬೀದರ್ ಜಿಲ್ಲೆಯಾದ್ಯಂತ ರಂಜಾನ್ ಹಬ್ಬದ ಸಂಭ್ರಮ ಜೋರಾಗಿತ್ತು.
ಪೌರಾಡಳಿತ ಸಚಿವ...
Tumakuru News: ತಿಪಟೂರು: ರಂಜಾನ್ ಹಬ್ಬದಂದೆ ತಾಲ್ಲೂಕಿನ ಹಾಸನ ರಸ್ತೆಯ ಸಮೀಪದ ಕೆರಗೋಡಿ ರಸ್ತೆ ಬಸವನಪುರ ಗ್ರಾಮದ ಬಳಿ ಅಕ್ರಮವಾಗಿ ಜಾನುವಾರು ಸಾಗಾಟದ ವಿಚಾರವಾಗಿ ಉದ್ಭವಿಸಿದ ಗಲಾಟೆಯಲ್ಲಿ ಬಜರಂಗದಳದ ಸಂಘಟನೆಯ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ನಡೆದಿದೆ.
ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಜರಂಗದಳ ಮತ್ತು...
ದಾವಣಗೆರೆ ದಕ್ಷಿಣ ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ರಂಗೇರುತ್ತಿದೆ. ಕಾಂಗ್ರೆಸ್‌ನ ಭದ್ರಕೋಟೆಯಲ್ಲೇ ಬಿಜೆಪಿ ಹೊಸ ತಂತ್ರ ರೂಪಿಸಿದ್ದು, ಅಹಿಂದ ಸಮುದಾಯದ ಮೇಲೆ ಕಣ್ಣು ನೆಟ್ಟಿದೆ. ಜಾತಿ ಲೆಕ್ಕಾಚಾರವೇ ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಸೂಚನೆ ನೀಡುತ್ತಿದೆ.
ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ಹಾಗೂ ಮುಸ್ಲಿಂ ನಾಯಕರ ನಡುವಿನ ಟಿಕೆಟ್ ಪೈಪೋಟಿ ಇದೀಗ ಬಹಿರಂಗವಾಗಿ ತಲೆದೋರಿದೆ. ಈ...
Hubli News: ಹುಬ್ಬಳ್ಳಿ: ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕ``ಂಡಿರುವ ಸುದ್ದಿ ಪ್ರತಿದಿನ ನಾವು ಕೇಳುತ್ತೇವೆ. ಆದರೆ ಕೆಲವರು ಈ ಮಾತನ್ನು ಸಿರಿಯಸ್‌ಯಾಗಿ ತೆಗೆದುಕ``ಳ್ಳುವ ಮನಸ್ಸೇ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ಮನೆಯ ಹಿರಿಯ ವ್ಯಕ್ತಿಯನ್ನು ಗಂಟುಮೂಟೆ ಕಟ್ಟಿ, ಪಾರ್ಸೆಲ್ ಕಳುಹಿಸುವ ರೀಲ್ಸ್ ಮಾಡಲಾಗಿತ್ತು.
ಬಸ್ ಟಿಕೇಟ್ ಹೆಚ್ಚಾಗಿದ್ದು, ಅದನ್ನು ಖರೀದಿಸಲು ಎಷ್ಟು ಸಮಸ್ಯೆಯಾಗುತ್ತಿದೆ ಎಂಬ...
Dharwad News: ನವಲಗುಂದ: ನೈತಿಕ ಪಾಠ ಮಾಡಬೇಕಾದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕನೇ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಕೃತ್ಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.
ಬುಧವಾರ (ಮಾರ್ಚ್ 18ರಂದು) ಸಂಜೆ 4:30 ಸುಮಾರಿಗೆ ಮುಖ್ಯಶಿಕ್ಷಕ ಬಾಲಕಿಯನ್ನು ತನ್ನ ಕಚೇರಿ ಸಮೀಪದ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷಕನ...
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯುಗಾದಿ ಹಬ್ಬದ ಸಂದರ್ಭ ವಿಶೇಷ ಕಾರ್ಯಕ್ರಮ ನಡೆಯಿತು. ಶಾಲೆಯಲ್ಲಿ ವಾಸ್ತವ್ಯ ಹೂಡಿ ಅಭ್ಯಾಸ ಮಾಡುತ್ತಿರುವ SSLC ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಹಾಗೂ SDMC ವತಿಯಿಂದ ಹಬ್ಬಕ್ಕೆ ಒಬ್ಬಟ್ಟು ಊಟವನ್ನು ಏರ್ಪಡಿಸಿದರು.
SSLC ಪರೀಕ್ಷೆಯ ಹಿನ್ನೆಲೆ, ವಿದ್ಯಾರ್ಥಿಗಳು ಶಾಲೆಯಲ್ಲೇ ಉಳಿದುಕೊಂಡು ಓದುತ್ತಿದ್ದು, ಯುಗಾದಿ ಹಬ್ಬದ ದಿನವೂ ಮನೆಗೆ ತೆರಳದೆ...
ಯುಗಾದಿ ಹಬ್ಬದ ಮುನ್ನವೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ ಉತ್ಪನ್ನಗಳಿಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ, ಅಂದರೆ KMF ಇದೀಗ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಕಮರ್ಷಿಯಲ್ LPG ಸಿಲಿಂಡರ್ ಕೊರತೆ ಉಂಟಾಗಿದ್ದು, ಅದರ ನೇರ ಪರಿಣಾಮ KMF ಉತ್ಪಾದನಾ ಘಟಕಗಳ ಮೇಲೆ ಬೀಳುತ್ತಿದೆ....
Mandya News: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಫ್ಲೆಕ್ಸ್ ವಾರ್ ಜೋರಾಗಿದೆ. ಕೆ.ಆರ್.ಪೇಟೆ ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಕಿತ್ತಾಟ ಜೋರಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದ್ದರೂ ಕೂಡ, ಮಂಡ್ಯದಲ್ಲೇ ಜೆಡಿಎಸ್ ಮತ್ತು ಬಿಜೆಪಿ ಮದ್ಯೆ ಬಿರುಕು ಜೋರಾಗಿದೆ. ಯುಗಾದಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಹಾಕುವ ವಿಚಾರಕ್ಕೆ...