ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ರಾಜಕೀಯ ಸುಳಿವುಗಳನ್ನ ನೀಡುತ್ತಿದೆ.
ಅಣ್ಣಾಮಲೈ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ ಅಖಿಲಾ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ...
ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ MSc ಪದವೀಧರನನ್ನು ಕೊಂದು ಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಂಎಸ್ಸಿ ಪದವೀಧರನೊಬ್ಬನಿಗೆ ಕೆಲಸದ ಭರವಸೆಯಿಂದ 11 ಲಕ್ಷ ರೂ. ವಂಚನೆ ಮಾಡಿ, ಕೊನೆಗೆ ಆತನನ್ನೇ ಕೊಲೆ ಮಾಡಿ ಬಾವಿಗೆ ಬಿಸಾಕಿರುವ ಅಮಾನವೀಯ ಘಟನೆ ನಡೆದಿದೆ.
ಚಿಂತಾಮಣಿಯ ಜಿ ರಾಮಪುರದ 30 ವರ್ಷದ ರಾಮಾಂಜಿ, MSc ಪದವೀಧರನಾಗಿದ್ದರು. ಬೆಂಗಳೂರಿನ ಯಲಹಂಕದ ಒಂದು...
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ಕ್ಕೆ ಇನ್ನೂ 2-3 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನವೇ ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಿಚ್ಚ ಸುದೀಪ್ ಅವರೇ ಸೀಸನ್ 12ಕ್ಕೆ ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಇವತ್ತು ನಡೆದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಬಿಗ್ ಬಾಸ್ ಟೀಂ ಮತ್ತು ಕಿಚ್ಚ ಸುದೀಪ್...
Hubli News: ಹುಬ್ಬಳ್ಳಿ: ಪಾಲಕರೇ ಎಚ್ಚರ..! ಎಚ್ಚರ..! ಎಚ್ಚರ..! ನಿಮ್ಮ ಮಕ್ಕಳಿಗಿರುವ ಮೊಬೈಲ್ ಗೀಳು ನಿಜಕ್ಕೂ ನಿಮ್ಮ ಮಕ್ಕಳನ್ನು ಬಹುದೊಡ್ಡ ಆತಂಕಕ್ಕೆ ದೂಡಲಿದೆ. ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಲು ಅವರ ಬಳಸುತ್ತಿರುವ ಮೊಬೈಲ್, ಜೀವನ ಶೈಲಿ, ಆಹಾರ ಅಭ್ಯಾಸಗಳೇ ಪ್ರಮುಖ ಕಾರಣ ಎನ್ನುವ ಭಯಾನಕ ಅಂಶವೊಂದು ಬೆಳಕಿಗೆ ಬಂದಿದೆ. ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಮೊಬೈಲ್...
ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿ ಬಾಳಲಿ ಎಂದು ಎದೆ ಉಬ್ಬಿಸಿಕೊಂಡು ಎಲ್ಲವನ್ನೂ ಕೊಟ್ಟರು ಹೆತ್ತವರು. ಕೇಳಿದಷ್ಟು ಕೊಟ್ಟರು – 72 ಲಕ್ಷದ ಮೌಲ್ಯದ 800 ಗ್ರಾಂ ಚಿನ್ನ, 70 ಲಕ್ಷ ಬೆಲೆಯ ಕಾರು. ಅಂದ್ರೆ ಒಟ್ಟು 2.5 ಕೋಟಿ ಮೌಲ್ಯದ ವರದಕ್ಷಿಣೆ. ಆದರೆ ಅಳಿಯನಾದವನು ಮಾತ್ರ ಆ ಮಗಳ ಪ್ರಾಣ ಉಳಿಸಲು ವಿಫಲನಾಗಿದ್ದ. ಮಗಳು,...
ಇತ್ತಿಚೀಗೆ ಹಾಸನ ಜಿಲ್ಲೆಯಲ್ಲಿ ಯುವಕ ಯುವತಿಯರಿಂದ ಹಿಡಿದು ವಯಸ್ಸಾದವರೂ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ದಿನಕ್ಕೆ ಒಂದು ಸಾವಾದರೂ ಆಗುತ್ತಲೇ ಬರುತ್ತಿದೆ. ಕಳೆದ 40 ದಿನಗಳಲ್ಲಿ ಹಾಸನದವ್ರೇ ಒಟ್ಟು 22 ಮಂದಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನದ ಈ ಆಘಾತಕಾರಿ ಸುದ್ದಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಇವತ್ತೂ ಕೂಡ ಹೃದಯಾಘಾತದ ಸರಣಿ ಮುಂದುವರೆದಿದೆ. ಒಂದೇ ದಿನ...
Bengaluru: ಬೆಂಗಳೂರು, ಜೂ. 29: ನಗರವು ಹಸಿರುಮಯವಾಗಿರಬೇಕು, ಶುದ್ಧ ಗಾಳಿ ಸಿಗುವಂತೆ ಹಾಗೂ ನಗರವನ್ನು ಸುಸ್ಥಿರವಾಗಿಟ್ಟುಕೊಳ್ಳುವಲ್ಲಿ ನಾವೆಲ್ಲರೂ ಪಣ ತೊಡಬೇಕು ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ನಗರದಲ್ಲಿ ಹಸಿರೋತ್ಸವ ಫೋರಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ ಮತ್ತು ಸುದಯಾ ಫೌಂಡೇಶನ್...
ಜೂನ್ 29ರಂದು ಬೆಳಗ್ಗಿನ ಜಾವ 1:45ರ ಸಮಯ. ಇಡೀ ಬೆಂಗಳೂರು ನಿದ್ದೆಗೆ ಜಾರಿ ಬಹಳ ಹೊತ್ತಾಗಿತ್ತು. ಆದರೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ಬೆಳಕಿಗೆ ಬಂದಿದೆ. ಬಿಬಿಎಂಪಿ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿದೆ.
ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಶವ ಸಿಕ್ಕ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಲಿವಿಂಗ್ ಟುಗೆದರ್...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಸೇರಿ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಕಿಡಿಗೇಡಿಗಳು ಹುಸಿ ಬಾಾಂಬ್ ಬೆದರಿಕೆ ಹಾಕಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣ ನಿರ್ದೇಶಕರಿಗೆ ಹುಸಿ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ.
ಈ ಇ- ಮೇಲ್‌ನಲ್ಲಿ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. Roadkill kyo ಎಂಬ ಇ- ಮೇಲ್ ಐಡಿಯಿಂದ ಈ...
ಸೆಪ್ಟೆಂಬರ್ ಕ್ರಾಂತಿ, ಶಾಸಕರ ಸಿಟ್ಟು ಕಾಂಗ್ರೆಸ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಬಿ.ಆರ್ ಪಾಟೀಲ್ ಅವರ ನೇರ ನುಡಿ ಒಂದು ಕಡೆಯಾದ್ರೆ, ಸಚಿವ ಕೆ.ಎನ್ ರಾಜಣ್ಣ ಅವರ ಬದಲಾವಣೆಯ ಸುಳಿವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಂತರಿಕ ಅಸಮಾಧಾನದ ಒಳ ಬೇಗುದಿ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಬೆಂಗಳೂರಿಗೆ ಬಂದಿದ್ದಾರೆ.
ಬದಲಾವಣೆಯ ಸುಳಿವಿನ ಮಧ್ಯೆ...