ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ವೇಳೆ, ರೀಲ್ಸ್ ಹಾಗೂ ಫೇಸ್ಬುಕ್ ಪೋಸ್ಟ್ಗಳಿಗಾಗಿ ಹಲ್ಲೆ ನಡೆಸುವುದು ಅಥವಾ ಪೊಲೀಸರನ್ನು ನಿಂದಿಸುವುದು ಒಪ್ಪಲಾಗದು ಎಂದು ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಚನ್ನಮ್ಮನ...
ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವಿಷಯಗಳ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ಹೊಸ ಕ್ರಮ ತೆಗೆದುಕೊಂಡಿದೆ. 67.26 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿ, ದ್ವೇಷ ಪ್ರಚಾರ, ಕಾನೂನು...
ಬೆಳ್ಳಿ–ಬಂಗಾರದ ಸಾಲಿಗೆ ಈಗ ತೆಂಗಿನವೂ ಸೇರ್ಪಡೆಯಾಗಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಗಳಲ್ಲಿ ಒಂದಾದ ಅರಸೀಕೆರೆ ಹಾಗೂ ತಿಪಟೂರಿನಲ್ಲಿ ಉಂಡೆ ಕೊಬ್ಬರಿ ದರ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ ಒಂದು ವರ್ಷದಿಂದ ಕೊಬ್ಬರಿ ಬೆಲೆ ನಿರಂತರ ಏರಿಕೆ ಕಾಣುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಫೆಬ್ರವರಿ 2ರಂದು ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ರೂ.30,400ಕ್ಕೆ ಟೆಂಡರ್ ಆಗಿದ್ದರೆ,...
ಜನವರಿ 22ರಿಂದ ಆರಂಭವಾಗಿದ್ದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬುಧವಾರ ತೆರೆ ಬಿದ್ದಿದ್ದು, ಇದರೊಂದಿಗೆ ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಕದನ ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರವೇ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಕರೆಸಿಕೊಳ್ಳಬಹುದೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದೆ.
ಸಂಕ್ರಾಂತಿ ಬಳಿಕ ರಾಜ್ಯ ನಾಯಕತ್ವ...
Political News: ಪ್ರತೀ ವರ್ಷ ವಿಜೃಭಣೆಯಿಂದ ನಡೆಯುವ ಬೆಂಗಳೂರು ಕರಗ ಆಚರಣೆಗೂ ಕಮಿಷನ್ ದಂಧೆ ಅಡ್ಡ ಬಂದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆದಿಶಕ್ತಿ ದ್ರೌಪದಮ್ಮನ ಆರಾಧನೆಯಾಗಿರುವ ವಿಶ್ವವಿಖ್ಯಾತ ಬೆಂಗಳೂರು ಕರಗ ಆಚರಣೆಗೆ ಸರ್ಕಾರ ಕೊಡುವ ಅನುದಾನದಲ್ಲೂ ಕೆಲ...
Uttara Kannada: ಅನೈತಿಕ ಸಂಬಂಧ ಆರೋಪದಡಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಪೋಲೀಸರು ಬಂಧಿಸಿದ್ದು, ಇವರ ಅಕ್ರಮ ಸಂಬಂಧಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆಂದು ಆರೋಪಿಸಲಾಗಿದೆ.
ಸುಚಿತ್ರಾ ಎಂಬ ವಿವಾಹಿತೆಯ ಜತೆ ಕಮಲಾಕರ್ ಅನೈತಿಕ ಸಂಬಂಧವಿರಿಸಿದ್ದು, ಇದನ್ನು ಪ್ರಶ್ನಿಸಿದ್ದ ಆಕೆಯ ಪತಿ, ಪತಿಯ ಸಹೋದರ ಮತ್ತೋರ್ವ ಸಂಬಂಧಿಯ ಮೇಲೆ ಸುಚಿತ್ರಾ ಕಡೆಯವರು ಹಲ್ಲೆ ಮಾಡಿದ್ದು, ಈ...
ಕಾನ್ಫಿಡೆಂಟ್ ಗ್ರೂಪ್ನ ಮುಖ್ಯಸ್ಥ ಸಿಜೆ ರಾಯ್ ಯಾವುದೇ ವ್ಯವಹಾರ ಮಾಡಿದರೂ ಅದನ್ನು ಹೆಚ್ಚಿನ ವಿವರಗಳೊಂದಿಗೆ ಕೈಯಲ್ಲಿ ಬರೆದುಕೊಳ್ಳುತ್ತಿದ್ದರು ಎಂಬುದು ಹೊಸ ಬೆಳವಣಿಗೆಯಾಗಿರುವುದು ಗಮನ ಸೆಳೆದಿದೆ.
ಸಾಂದರ್ಭಿಕ ತನಿಖೆ (SIT) ತಂಡವು ರಿಚ್ಮಂಡ್ ಸರ್ಕಲ್ನ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಅಪಾರ ಪ್ರಮಾಣದ ದಾಖಲೆಯನ್ನು ವಶಕ್ಕೆ ಪಡೆದಿದ್ದು, ವಿವರವಾದ ಪರಿಶೀಲನೆ ನಡೆಸುತ್ತಿದೆ.
ತಂದಿರುವ ಮಾಹಿತಿಯಂತೆ, ಸಿಜೆ ರಾಯ್...
ಚುನಾವಣೆಗೆ ಸ್ಪರ್ಧಿಸಲು ಎರಡು ಮಕ್ಕಳ ನಿಯಮ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಆರು ವರ್ಷದ ಮಗಳನ್ನೇ ಕೊಂದ ಪಾಪಿ ತಂದೆಯೊಬ್ಬನನ್ನು ಪೊಲೀಸರು ಬಂಧಿಸಿರುವ ಭೀಕರ ಘಟನೆ ಮಹಾರಾಷ್ಟ್ರ–ತೆಲಂಗಾಣ ಗಡಿಭಾಗದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯಾದ ಬಾಲಕಿಯನ್ನು ಪ್ರಾಚಿ (6) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ.
ಆರೋಪಿ ಮಹಾರಾಷ್ಟ್ರದ ನಾಂದೇಡ್, ಮುಖೇಡ್ ನ ಕೆರೂರ್...
ಗಾಂಜಾ ವಿಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು ಹಾಕಿದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಏಳು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಯದ್, ಹಸನ್ ನಾಯಕ್ ಮತ್ತು ಹಜರೆಸಾಬ ಎಂಬ ವ್ಯಕ್ತಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದರ ಬಗ್ಗೆ ಕಸಬಾಪೆಟೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ಪ್ರಕರಣಗಳು ದಾಖಲಾಗಿದೆ.
ಹಲ್ಲೆ ಆಗಿದ್ದ ವ್ಯಕ್ತಿಗಳು ಕಿಮ್ಸ್...
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪೌರಾಣಿಕ ನಾಟಕ ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಪೌರಾಣಿಕ ನಾಟಕವನ್ನು ಕಲಿತು ಗ್ರಾಮದ ವೇದಿಕೆಯಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿದರು. ಕುರುಕ್ಷೇತ್ರ ಆಧಾರಿತ ಪೌರಾಣಿಕ ನಾಟಕವನ್ನು ಪುಟಾಣಿ ಮಕ್ಕಳು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.
ಮಕ್ಕಳ ಅದ್ಭುತ ಅಭಿನಯವನ್ನು...
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ಬಡ ಕುಟುಂಬವೊಂದು ಕಳೆದ ಎರಡು ದಶಕಗಳಿಂದ ತಾತ್ಕಾಲಿಕ ಮೇಲ್ಚಾವಣಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ.
ಗ್ರಾಮದ ಸಿದ್ದಮ್ಮ ಅವರ ಕುಟುಂಬ...