ರಾಷ್ಟ್ರ ರಾಜಧಾನಿ ದೆಹಲಿ ಅತ್ಯಂತ ಭದ್ರತೆಗೆ ಹೆಸರುವಾಸಿಯಾಗಿದೆ. ಆದರೆ ಅದೇ ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ, ಕಾಂಗ್ರೆಸ್ ಸಂಸದೆಯ ಚಿನ್ನದ ಸರ ಕಳ್ಳತನವಾಗಿದೆ. ಇದು ಮಹಿಳಾ ಸುರಕ್ಷತೆ, ರಾಜಕೀಯ ನಾಯಕರ ಭದ್ರತೆ, ಹಾಗೂ ದೆಹಲಿ ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಆಗಸ್ಟ್ 4ರಂದು ಬೆಳಗ್ಗೆ ಸುಮಾರು 6.15ಕ್ಕೆ ಈ ಸರಗಳ್ಳತನ ನಡೆದಿದೆ. ತಮಿಳುನಾಡು...
ನಮ್ಮ ದೇಶದ ಲಕ್ಷಾಂತರ ರೈತರಿಗೆ ಖುಷಿಯ ಸುದ್ದಿಯೊಂದಿದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಈಗ ಬಿಡುಗಡೆ ಆಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ 2025 ಜುಲೈನಲ್ಲಿ ಈ ಕಂತನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ₹20,500 ಕೋಟಿಗಳ ಮೊತ್ತವನ್ನು 9.7 ಕೋಟಿ ರೈತರ...
ಅಂಬಾನಿಯ ವನ್ಯಧಾಮಕ್ಕೆ ಜೈನಮಠದ ಆನೆ ಹಸ್ತಾಂತರಗೊಂಡಿದೆ. ಇದರ ವಿರುದ್ಧ ಜೈನ ಸಮುದಾಯ ಆಕ್ರೋಶ ತೀವ್ರಗೊಂಡಿದೆ. ಇದು ಕೇವಲ ಪ್ರಾಣಿ ಹಸ್ತಾಂತರವಲ್ಲ, ಧರ್ಮ, ನಂಬಿಕೆ ಮತ್ತು ಸಂಸ್ಕೃತಿಯ ನಡುವೆ ವಿವಾದ ಭುಗಿಲೆದ್ದಿದೆ.
36 ವರ್ಷದ ಆನೆ, ಮಹಾದೇವಿ ಅಥವಾ ಮಾಧುರಿ ಎಂದೇ ಪರಿಚಿತ. ಮೂಲತಃ ಕರ್ನಾಟಕದಲ್ಲಿ ಜನಿಸಿದ ಈ ಆನೆ, 1992ರಲ್ಲಿ ಅಂದರೆ ತಾನು 3 ವರ್ಷದಾಗಿದ್ದಾಗ...
ಚುನಾವಣಾ ಆಯೋಗದ ಮೇಲೆ ಈಗಾಗಲೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿದ್ದಾರೆ. ಇದೀಗ ಚುನಾವಣಾ ಆಯೋಗದ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ 70 ರಿಂದ 100 ಸ್ಥಾನಗಳಲ್ಲಿ ಸಂಘಟಿತ ಅಕ್ರಮಗಳು ನಡೆದಿರುವ ಶಂಕೆ ಇದೆ. ನಮ್ಮ ಚುನಾವಣಾ ವ್ಯವಸ್ಥೆಯು ಈಗಾಗಲೇ ಸತ್ತಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಅಕ್ರಮಗಳ...
ಶ್ರಾವಣ ಮಾಸದ ಆರಂಭದೊಂದಿಗೆ ತಿರುಪತಿ ತಿಮ್ಮಪ್ಪನಿಗೆ ಭಕ್ತರು ಚಿನ್ನ ಮತ್ತು ಇತರ ರೂಪಗಳಲ್ಲಿ 5ಕೋಟಿ ರೂ.ಗೂ ಅಧಿಕ ದೇಣಿಗೆ ನೀಡಿದ್ದಾರೆ. ಹೌದು ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಲಕ್ಷಾಂತರ ಭಕ್ತರು ಪ್ರತಿದಿನ ಈ ತೀರ್ಥಕ್ಷೇತ್ರಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆದು ದೇಣಿಗೆಯನ್ನು ಸಲ್ಲಿಸುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದಂದು...
ವೈದ್ಯೋ ನಾರಾಯಣೋ ಹರಿಃ. ಅಂದರೆ ವೈದ್ಯರು ನಾರಾಯಣನಂತೆ, ಅಂದರೆ ಭಗವಂತನಂತೆ ಎಂದು. ಈ ಮಾತನ್ನು ಸತ್ಯ ಮಾಡುವಂತೆ ಪ್ರಬಲ ಭೂಕಂಪದ ನಡುವೆ ರಷ್ಯಾದಲ್ಲಿ ಒಂದು ಘಟನೆ ನಡೆದಿದೆ. ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಜು.30 ರಂದು 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಭೂಕಂಪದ ನಂತರ, ಸಾಗರದಲ್ಲಿ ಭಾರಿ ಸುನಾಮಿ ಎದ್ದಿದೆ. ಇದರಿಂದ ಅಲ್ಲಿನ ಜನರನ್ನು...
17 ವರ್ಷಗಳ ಬಳಿಕ ಮಾಲೆಂಗಾವ್ ಸ್ಫೋಟ ಪ್ರಕರಣದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ, 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಬಿಜೆಪಿ ಮಾಜಿ ಸಂಸದೆ ಪ್ರಗ್ಯಾ ಠಾಕೂರ್, ಮಾಜಿ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್, ಶ್ರೀಕಾಂತ್ ಪುರೋಹಿತ್ ಸೇರಿ ಎಲ್ಲರನ್ನು ನಿರ್ದೋಷಿಗಳೆಂದು ಹೇಳಿದೆ.
ಸಾಕ್ಷ್ಯಾಧಾರ ಕೊರತೆ ಇರುವುದರಂದ, ಪ್ರಕರಣವನ್ನು ಮುಂದುವರೆಸಲು ಸಾಧ್ಯವಿಲ್ಲ....
ತಮಿಳುನಾಡು ಬಿಜೆಪಿ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನಟಿ-ರಾಜಕಾರಣಿ ಖುಷ್ಬೂ ಸುಂದರ್ ಅವರ ಆಯ್ಕೆ ಆಗಿದೆ. ಇಷ್ಟು ದಿನ ಉಪಾಧ್ಯಕ್ಷರಾಗಿದ್ದ ನಾರಾಯಣನ್ ತಿರುಪತಿ ಅವರನ್ನು, ಬಿಜೆಪಿ ವಕ್ತಾರರನ್ನಾಗಿ ನಿಯೋಜಿಸಲಾಗಿದೆ.
2010ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಖುಷ್ಬೂ, ಡಿಎಂಕೆ ಪಕ್ಷ ಸೇರಿದ್ರು. 2014ರಲ್ಲಿ ಡಿಎಂಕೆ ಬಿಟ್ಟು ಕಾಂಗ್ರೆಸ್ ಸೇರಿದ್ರು. ಅಲ್ಲಿಯೂ ಸಕ್ಸಸ್ ಕಾಣದ...
ಇದೇ ಆಗಸ್ಟ್ 5ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ. ಅದರಲ್ಲೂ ಕರ್ನಾಟಕದಲ್ಲೇ ಚುನಾವಣಾ ಅಕ್ರಮ ಆಗಿದೆ ಅಂತಾ, ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಮತಗಳ್ಳತನ ವಿರುದ್ಧ ಕಾಂಗ್ರೆಸ್ ಹೋರಾಟ ಹಮ್ಮಿಕೊಂಡಿದೆ.
ರಾಹುಲ್ ಗಾಂಧಿ ಅವರು ಮತಗಳ್ಳತನದ ವಿರುದ್ಧದ ತಮ್ಮ ಹೋರಾಟವನ್ನು ಕರ್ನಾಟಕದಿಂದಲೇ...
ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ್ ಕುರಿತು ಮಾತನಾಡುತ್ತಿದ್ದಾರೆ. ಪಹಲ್ಗಾಮ್ ದಾಳಿಗೆ ಆಪರೇಷನ್ ಮಹಾದೇವ್ ಸೇಡು ತೀರಿಸಿಕೊಂಡಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ಕುರಿತು ಎರಡು ದಿನಗಳ ಚರ್ಚೆಯನ್ನು ಉದ್ದೇಶಿಸಿ ಮಂಗಳವಾರ ಲೋಕಸಭೆಯಲ್ಲಿ...
ಮುಸ್ಲಿಂ ಯುವತಿಯರ ಕುರಿತಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ...