ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ರಸ್ತೆ ಒತ್ತುವರಿ ತೆರವು ಮಾಡಲಾಗ್ತಿದೆ. ಕಳೆದ ಎರಡ್ಮೂರು ದಿನಗಳಿಂದ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಪೊಲೀಸರ ಬಿಗಿ ಭದ್ರತೆಯೊಂದಿಗೆ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗ್ತಿದೆ. ಆದ್ರೆ, ಕೆಲವು ಏರಿಯಾಗಳಿಗಷ್ಟೇ ಸೀಮಿತವಾಗಿರೋದು, ನಗರದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿ.ಹೆಚ್. ರಸ್ತೆ, ಹುಳಿಯಾರು ರಸ್ತೆ ಹಾಗೂ ಬಸ್ ನಿಲ್ದಾಣಗಳ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆ...
2026ರ ಜೂನ್ 30ರೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಹಲವು ವರ್ಷಗಳ ಬಳಿಕ ಗ್ರೇಟರ್ ಬೆಂಗಳೂರು ಚುನಾವಣೆ ನಡೆಯುತ್ತಿದೆ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್...
Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು ರಾಜ್ಯ ಕಂಡಿಲ್ಲ. ಜನರ ಜೀವ, ಆಸ್ತಿ ಮತ್ತು ಗೌರವವನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ಇಂದು ಸುದ್ದಿಯಾಗುತ್ತಿರುವುದು ಅಪರಾಧಿಗಳನ್ನು ಹಿಡಿದಿದ್ದಕ್ಕಾಗಿ ಅಲ್ಲ – ಅಧಿಕಾರಿಗಳೇ ಕಾನೂನು ಮುರಿದ, ನಗೆಪಾಟಲಿಗೀಡಾದ...
Political News: ಕಲಿಯುಗದ ಕಾಮಧೇನು, ಕೇಳಿದ್ದನ್ನು ನೀಡುವ ಕಲ್ಪವೃಕ್ಷ, ಕಲಿಯುಗದಲ್ಲಿ ಭಕ್ತಿ ಮಾಡಿದರೆ, ಮಗುವಿನಂತೆ ಬರುವ ದೇವರು ಅಂದ್ರೆ ಅದು ಗುರು ರಾಘವೇಂದ್ರರು ಅಂತಾರೆ ರಾಯರ ಭಕ್ತರು.
ಏಕೆಂದರೆ ಈ ಘೋರ ಕಲಿಯುಗದಲ್ಲೂ ರಾಯರ ಇರುವಿಕೆಯನ್ನು ಅವರ ಅನೇಕ ಭಕ್ತರು ಕಂಡಿದ್ದಾರೆ. ಹಾಗಾಗಿಯೇ ಅವರು ರಾಯರಿದ್ದಾರೆ ಎನ್ನುತ್ತಾರೆ. ಕಷ್ಟದಲ್ಲಿರುವ ಭಕ್ತರನ್ನು ರಾಯರು ಯಾವುದಾದರೂ 1 ರೂಪದಲ್ಲಿ...
Mandya News: ಮಂಡ್ಯದಲ್ಲಿಂದು ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಎನ್.ಚಲುವರಾಯಸ್ವಾಮಿ, ಬಿಜೆಪಿಯವರು ಎರಡನೇ ಬ್ರಿಟಿಷರು ಎಂದು ವಾಗ್ದಾಳಿ ನಡೆಸಿದ್ದಾರೆ.
ಯುವ ಸಮ್ಮೇಳನದಲ್ಲಿ ಮಾತನಾಡಿದ ಅವರು ಹಳ್ಳಿ ಹಳ್ಳಿಯಲ್ಲಿ ನರೇಗಾ ಬಚಾವೋ ಬಾವುಟ ಹಿಡಿದು ಹೋರಾಟ ಮಾಡಿ. ಜೆಡಿಎಸ್ ಅನ್ನು ಓಡಿಸದಿದ್ದರೆ ಜಿಲ್ಲೆಗೆ ಭವಿಷ್ಯ ಇಲ್ಲ. ಮೋದಿ ಅವರ ಪ್ರಧಾನ ಮಂತ್ರಿ ಸಾಧನೆ ಅಂದ್ರೆ 8 ಸಾವಿರ ಕೋಟಿ...
Political News: ಅಬಕಾರಿ ಇಲಾಖೆಯಲ್ಲಿ ಕೇಳಿಬರುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಾಲು ಸಾಲು ಪ್ರಶ್ನೆ ಕೇಳಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಕಾಂಗ್ರೆಸ್ ಸರ್ಕಾರದ ಲಂಚಾವತಾರ; ಬಗೆದಷ್ಟೂ ಬಯಲಾಗುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರ! ಅಬಕಾರಿ ಇಲಾಖೆ ಕಾಂಗ್ರೆಸ್ ಪಾಲಿನ ಪರ್ಸೆಂಟೇಜ್ ದಂಧೆಯ ಎಟಿಎಂ ಯಂತ್ರವಾಗಿ ಬದಲಾಗಿದೆ. ಅಧಿಕಾರಿಗಳ...
Tumakuru: ತಿಪಟೂರು: ತಾಲ್ಲೂಕಿನ ಬೆಂಗಳೂರು ಮಾರ್ಗವಾಗಿ ಹೋಗುವ ಬೆಟ್ಟದ ಗೇಟ್ ರಜತಾದ್ರಿಪುರ ಯಗಚಿಗಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ರೈತರಿಗೆ ವಿದ್ಯಾರ್ಥಿಗಳಿಗೆ ಅಂಡರ್ ಪಾಸ್ • ಸರ್ವಿಸ್ ರಸ್ತೆ,ಬಸ್ ನಿಲ್ದಾಣ ಸೌಕರ್ಯವಿಲ್ಲದ ಕಾರಣ, ವಿಭಾಗೀಯ ಅಧ್ಯಕ್ಷರಾದ ಯಗಚಿಗಟ್ಟೆ ರಾಘವೇಂದ್ರ, ಶಿವಕುಮಾರ್ ಮತ್ತಿಘಟ್ಟ, ರಮೇಶ್ ಸೇರಿದಂತೆ ಆಟೋ ಚಾಲಕರು ಗ್ರಾಮಸ್ಥರು ವಿದ್ಯಾರ್ಥಿಗಳು ಬೆಟ್ಟದ ಗೇಟ್ ನ...
Political News: 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಪೋಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಪೋಲೀಸರಿಂದ ಯಾವುದೇ ಲೋಪ ನಾವು ಸಹಿಸುವುದಿಲ್ಲ. ಕೆಲ ಕೇಸ್ಗಳಲ್ಲಿ ಪೋಲೀಸರದ್ದೇ ತಪ್ಪು ಕಂಡುಬರುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು. ಅದಾಗ 24 ಗಂಟೆ ಕಳೆಯಲಿಲ್ಲ. ಆಗಲೇ ಡಿಜಿಪಿ ರಾಮ್ಚಂದ್ರ ರಾವ್ ರಾಸಲೀಲೆ ಪ್ರಕರಣದಲ್ಲಿ ಅಮಾನತಾಗಿದ್ದಾರೆ.
ಈ ವಿಷಯದ ಬಗ್ಗೆ ಕಿಡಿಕಾರಿರುವ ಹಿರಿಯ ನಾಯಕ...
Political News: ರಾಜ್ಯ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪದೇ ಪದೇ ಆರೋಪಗಳು ಕೇಳಿಬರುತ್ತಿದೆ. ಹಾಗಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮತ್ತೊಂದು ಅಧ್ಯಾಯ ಅಬಕಾರಿ ಇಲಾಖೆಯ ಮೂಲಕ ಬಯಲಾಗಿದೆ. 27 ಲಕ್ಷ...
Political News: ಬೆಳಗಾವಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಡಿಜಿಪಿ ರಾಮಚಂದ್ರರಾವ್ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಅವರು ಮಹಿಳೆಯರೊಂದಿಗೆ ಅನುಚಿತ ವರ್ತನೆ ತೋರಿರುವ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಉನ್ನತ ಮಟ್ಟದ ಅಧಿಕಾರಿಯಾದ ಮಾತ್ರಕ್ಕೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಸಿಎಂ ಹೇಳಿದ್ದಾರೆ.
ಇನ್ನು ಜನಾರ್ಧನ...
ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿರುವ ನಿಫಾ ವೈರಸ್ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಒಂದಿಬ್ಬರು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಮುಂಜಾಗ್ರತೆ ವಹಿಸದಿದ್ದರೆ ರೋಗ ವೇಗವಾಗಿ ಹರಡುವ...