Friday, May 8, 2026

ರಾಜಕೀಯ

AXIS MY INDIA – ಜಿದ್ದಾಜಿದ್ದಿ ಫಲಿತಾಂಶ : ಬಿಹಾರದ ಅಸಲಿ ಲೆಕ್ಕ!

ಬಿಹಾರದ ಚುನಾವಣೋತ್ತರ ಸಮೀಕ್ಷೆ ರಣರೋಚಕವಾದ ಫಲಿತಾಂಶವನ್ನ ನೀಡಿದೆ. ನಿನ್ನೆ 2ನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಹಲವು ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಗಳನ್ನು ಬಿಡುಗಡೆ ಮಾಡಿದ್ದವು. ನಿನ್ನೆ ಬಹುತೇಕ ಎಲ್ಲ ಸಮೀಕ್ಷೆಗಳಲ್ಲೂ ಎನ್‌ಡಿಎ ಮೈತ್ರಿಕೂಟವೇ ಬಿಹಾರದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇಂದು ಪ್ರಕಟಗೊಂಡಿರುವ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಬಿಹಾರದಲ್ಲಿ ಎನ್‌ಡಿಎಗೆ...

ಸಂಪುಟ ಸೇರ್ಪಡೆಗೆ ಶಾಸಕರ ಲಾಬಿ ಶುರು!

ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದ್ದು, ಆಕಾಂಕ್ಷಿ ಶಾಸಕರು ಲಾಬಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 15ರಂದು ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆ ಕುರಿತ ಚಟುವಟಿಕೆ ಚುರುಕುಗೊಂಡಿದೆ. ನಾಯಕತ್ವ ಬದಲಾವಣೆ ಕುರಿತು ಮಾತುಕತೆ ನಡೆಯುತ್ತಿರುವ ವೇಳೆಯಲ್ಲೇ ಸಂಪುಟ ಪುನಾರಚನೆ ಚರ್ಚೆ ಗರಿಗೆದರಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ...

ಸಿದ್ದರಾಮಯ್ಯ ಹೇಗಿದ್ರು? ಈಗ ಹೇಗಿದ್ದಾರೆ?

ಸಿಎಂ ಸಿದ್ದರಾಮಯ್ಯನವರ ಮುಂದೆ ರಾಹುಲ್ ಗಾಂಧಿ ಒಬ್ಬ ಬಚ್ಚಾ. ಅಂಥವನ ಭೇಟಿಗಾಗಿ ಗೇಟ್‌ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆ. ಅವರಿಗೆ ಈ ದೈನೇಸಿ ಸ್ಥಿತಿ ಬರಬಾರದಿತ್ತು. ಹೀಗಂತ ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಹುಲಿಯಾಗಿದ್ದರು. ಈಗ ಇಲಿಯಾಗಿದ್ದಾರೆ. ಹಿಂದೆ ಇಂದಿರಾಗಾಂಧಿಯವರನ್ನೇ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಇಂದು ಅವರ ಮೊಮ್ಮಗನ ಪಾದ ಪೂಜೆ ಮಾಡಲು...

DK ಸಿಎಂ ಆಗಲು ಪ್ರಾರ್ಥನೆ – ಅಭಿಮಾನಿಗಳಿಂದ ಚಂಡಿಕಹೋಮ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗ ದೇವರ ಮೊರೆ ಹೋಗಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರು ಮುಂದಿನ ಮುಖ್ಯಮಂತ್ರಿ ಆಗಲಿ ಎಂಬ ಆಶಯದೊಂದಿಗೆ ಭವ್ಯ ಚಂಡಿಕಾ ಹೋಮ ಆಯೋಜಿಸಿದ್ದಾರೆ. ಹುಲಿಯೂರಮ್ಮ ದೇವಾಲಯದ ಆವರಣದಲ್ಲಿ ಬೆಳಗ್ಗಿನಿಂದಲೇ ಭಕ್ತಿ ಮತ್ತು ಭರವಸೆಯ ವಾತಾವರಣದಲ್ಲಿ ನಡೆದ ಈ ಹೋಮದಲ್ಲಿ ನೂರಾರು ಮಂದಿ...

ಪವರ್‌ ಶೇರಿಂಗ್‌ ಬಗ್ಗೆ K.N. ರಾಜಣ್ಣ ಬಿಗ್‌ ಅಪ್‌ಡೇಟ್‌

ನವೆಂಬರ್‌ 14ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂಬ ವದಂತಿಗಳು ಹೆಚ್ಚಾಗ್ತಿದೆ. ಇದೇ ವಿಚಾರವಾಗಿ ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣ ನಿಂತ ನೀರಲ್ಲ. ಯಾವಾಗಲೂ ಚಲನಾಶೀಲತೆಯಿಂದ ಕೂಡಿರುತ್ತದೆ. ಬದಲಾವಣೆ ಆಗೋದಿಲ್ಲ ಅಂತಿಲ್ಲ. ಆದ್ರೆ ನಮ್ಮ ರಾಜ್ಯದಲ್ಲಿ ಬದಲಾವಣೆಗಳು ಸಾಧ್ಯತೆ ಇಲ್ಲ ಎಂದು, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ರು. ನಾನು ಹೈಕಮಾಂಡ್ ಮುಖಂಡರಿಗೆ...

ಮುಸಲ್ಮಾನರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಧರ್ಮಾಂಧತೆಯೇ ಕಾರಣ: ಪ್ರತಾಪ್ ಸಿಂಹ

Political News: ದೆಹಲಿಯಲ್ಲಿ ನಡೆದಿರುವ ಸ್ಪೋಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮುಸಲ್ಮಾನರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಬಡತನ, ನಿರುದ್ಯೋಗವಲ್ಲ, ಅವರ ಮನಸ್ಥಿತಿ ಮತ್ತು ಧರ್ಮಾಂಧತೆಯೇ ಕಾರಣ ಎಂದಿದ್ದಾರೆ. ಭಾರತದಲ್ಲಿ ಮುಸ್ಲಿಂಮರ ಪರಿಸ್ಥಿತಿ ಸರಿ ಇಲ್ಲಾ. ಬಡತನದಿಂದ ಜೀವನ ಮಾಡಬೇಕು. ಸಣ್ಣ ಸಣ್ಣ ದುಡಿಮೆ ಮಾಡಬೇಕು. ಇದೇ ಬಡತನದಿಂದಾಗಿ ಅವರು ಭಯೋತ್ಪಾದನೆಗೆ ಆಕರ್ಷಿತರಾಗುತ್ತಿದ್ದಾರೆ...

ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ ‘ದೇಶ ಮೊದಲು’, ಉಳಿದದ್ದೆಲ್ಲವೂ ನಂತರ: ಸಿಎಂಗೆ ವಿಜಯೇಂದ್ರ ಟಾಂಗ್..?

Political News: ದೆಹಲಿಯಲ್ಲಿ ನಡೆದ ಸ್ಪೋಟದ ಬಗ್ಗೆ ಸಿಎಂ ಸಿದ್ದರಾಮಯ್ಯ, ಚುನಾವಣೆ ಸಮಯದಲ್ಲೇ ಯಾಕೆ ದಾಳಿಯಾಗುತ್ತದೆ ಎಂದು ಪ್ರಶ್ನಿಸಿದ್ದರು. ಅಲ್ಲದೇ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ 'ದೇಶ ಮೊದಲು', ಉಳಿದದ್ದೆಲ್ಲವೂ ನಂತರ ಎಂದಿದ್ದಾರೆ. ದೆಹಲಿಯ...

ತಿಥಿ ಗಡ್ಡಪ್ಪ ಖ್ಯಾತಿಯ ಚನ್ನೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

Political news: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನರಾಗಿದ್ದಾರೆ. ಗಡ್ಡಪ್ಪ ಎಂದೇ ಪ್ರಖ್ಯಾತರಾಗಿದ್ದ 89 ವರ್ಷದ ಚನ್ನೇಗೌಡ, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇವರ ನಿಧನಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ 'ತಿಥಿ' ಚಲನಚಿತ್ರದಲ್ಲಿ ಗಡ್ಡಪ್ಪನ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದ ಮಂಡ್ಯ ಜಿಲ್ಲೆಯ...

Political News: ನನಗೆ ಜೀವ ಬೆದರಿಕೆ ಇತ್ತು. ಆದರೆ ನಾನು ಹೆದರಲಿಲ್ಲ: ಸಿಎಂ ಸಿದ್ದರಾಮಯ್ಯ

Political News: ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಇಷ್ಟು ಮಾಡಲಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗೂ ನಾನು ಕೆಲಸ ಮಾಡಿದ್ದೇನೆ. ಮೊದಲ...

ಬಿಹಾರ ಚುನಾವಣೆ ಬೆನ್ನಲ್ಲೇ ದಿಲ್ಲಿಗೆ ಸಿದ್ದು ಆಪ್ತ

ಬಿಹಾರ ಎಲೆಕ್ಷನ್‌ ಮುಗಿಯುತ್ತಿದ್ದಂತೆ ಸಿದ್ದು ಅತ್ಯಾಪ್ತ ಸಚಿವ ಸತೀಶ್‌ ಜಾರಕಿಹೊಳಿ, ದಿಲ್ಲಿಗೆ ದೌಡಾಯಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು, ಭೇಟಿಯಾಗಿದ್ದು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತು ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಸಚಿವರು ಮತ್ತು ಶಾಸಕರು...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img