ಕಾಂಗ್ರೆಸ್ ಈಗ ಮನೆಯೊಂದು ಮೂರು ಬಾಗಿಲು. ಅಲ್ಲ, ಅಲ್ಲ ಸಿಎಂ ಖುರ್ಚಿ ಒಂದು ಕಾಂಪಿಟೇಷನ್ ಅಲ್ಲಿ ಇರೋವ್ರು ಮೂವರು. ಕಾಂಗ್ರೆಸ್ ಪಾಳಯದಲ್ಲಿ ಇಷ್ಟು ದಿನ ನಡೆಯುತ್ತಿದ್ದ ಚರ್ಚೆ ಎಂದರೆ ನವೆಂಬರ್ ಕ್ರಾಂತಿ. ಈಗ ಹೊಸ ಚರ್ಚೆಗೆ ಕಾರಣವಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಆ ಒಂದು ಹೇಳಿಕೆ. ಬೆಳಗಾವಿ ಜಿಲ್ಲೆಯಲ್ಲಿ...
ಬಿಹಾರದಲ್ಲಿ ಚುನಾವಣೆ ಕಣ ರಂಗೇರಿದೆ. ಇತ್ತ ಚುನಾವಣೆಗೂ ಮುನ್ನವೇ ಸಿಎಂ ಮತ್ತು ಡಿಸಿಎಂ ಅಭ್ಯರ್ಥಿಗಳನ್ನು ಮಹಾಘಟಬಂಧನ್ ಘೋಷಣೆ ಮಾಡಿದ್ದಾರೆ. ಬಿಹಾರದ ಮುಂಬರುವ ವಿಧಾನಸಭಾ ಚುನಾವಣೆಗೆ ಗುರುವಾರ ಪಾಟ್ನಾದ ಹೋಟೆಲ್ ಮೌರ್ಯದಲ್ಲಿ ನಡೆದ ಬಹುನಿರೀಕ್ಷಿತ ಪತ್ರಿಕಾಗೋಷ್ಠಿಯಲ್ಲಿ ಮಹಾಮೈತ್ರಿಕೂಟವು ದೊಡ್ಡ ಸಂದೇಶ ನೀಡಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಸದ್ಯ ಬಿರುಸುಗೊಂಡಿವೆ.
ಆರ್ಜೆಡಿ ನಾಯಕ ತೇಜಸ್ವಿ...
ತಮ್ಮ ವಿರುದ್ಧದ ಪೋಕ್ಸೋ ಕೇಸ್ ರದ್ದು ಮಾಡುವಂತೆ ಕೋರಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು. ಇಂದು ವಿಚಾರಣೆ ನಡೆಸಿದಂತಹ ಹೈಕೋರ್ಟ್ ಪೀಠ ಆದೇಶ ಕಾಯ್ದಿರಿಸಿದೆ. ನ್ಯಾಯಮೂರ್ತಿ ಎಂಐ ಅರುಣ್ ಪೀಠದಲ್ಲಿ ವಿಚಾರಣೆ ನಡೆದಿದ್ದು ಆದೇಶ ಕಾಯ್ದಿರಿಸಲಾಗಿದೆ.
ಸಂತ್ರಸ್ತೆಯ ಹೇಳಿಕೆ ಬಿಟ್ಟು ಉಳಿದ ಸಾಕ್ಷ್ಯಗಳನ್ನು ಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಮನೆಯಲ್ಲಿದ್ದ ಸಾಕ್ಷಿಗಳ ಹೇಳಿಕೆ,...
ನವೆಂಬರ್ ಕ್ರಾಂತಿ ಇಲ್ಲ.. ವಾಂತಿ ಇಲ್ಲ.. ಭ್ರಾಂತಿಯೂ ಇಲ್ಲ. ನೀವೂ ಆರಾಮಾಗಿ ಇರಿ. ನಾವೂ ಆರಾಮಾಗಿ ಇದ್ದೇವೆ. ನೀವು ಅದರ ಬಗ್ಗೆ ಟೆನ್ಶನ್ ತಗೋಬೇಡಿ. ಹೀಗಂತ ಮಾಧ್ಯಮಗಳಿಗೆ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ. ಯತೀಂದ್ರ ಅವ್ರು, ಮುಖ್ಯಮಂತ್ರಿ ರೀತಿಯ ಪ್ರಗತಿಪರ ಚಿಂತಕರು ಅಂತ ಹೇಳಿದ್ದಾರೆ. ನಾವೂ ಅದನ್ನೇ ಹೇಳುತ್ತೇವೆ. ಅದರಲ್ಲಿ ತಪ್ಪೇನಿದೆ. ಅದರಲ್ಲಿ...
ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ, ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಯತೀಂದ್ರ ಮೂಲಕ ಸಿದ್ದರಾಮಯ್ಯ ಉತ್ತರಾಧಿಕಾರಿಯ ದಾಳ ಉರುಳಿಸಿದ್ದಾರಾ ಎಂಬ ಕುತೂಹಲವೂ ಕೆರಳಿಸಿದೆ. ಅಷ್ಟಕ್ಕೂ ಈ ಬಾಣ ಯಾರಿಗೆ ತಲುಪಲಿದೆ ಎಂಬುವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ಸತೀಶ್ ಜಾರಕಿಹೊಳಿ ಹೆಸರನ್ನು ಸಿದ್ದರಾಮಯ್ಯ ಪರೋಕ್ಷವಾಗಿ ಮುನ್ನಲೆಗೆ ತಂದಿದ್ದಾರೆಂಬ ಚರ್ಚೆ, ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ....
ಸಿದ್ದರಾಮಯ್ಯ ಉತ್ತರಾಧಿಕಾರಿ ಬಗ್ಗೆ ಪುತ್ರ ಯತೀಂದ್ರ ಹೇಳಿಕೆ, ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಬೆಳಗ್ಗೆಯಷ್ಟೇ ತುಂಬಾ ನಾಜೂಕಾಗಿ ಉತ್ತರಿಸಿದ್ದ ಸತೀಶ್ ಜಾರಕಿಹೊಳಿ ಸಂಜೆಯಾಗುವಷ್ಟರಲ್ಲಿ ರೆಬೆಲ್ ಆಗಿದ್ದಾರೆ. ಡೈರೆಕ್ಟ್ ಆಗಿ ಅಖಾಡಕ್ಕಿಳಿಯುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಕಿತ್ತೂರಿನಲ್ಲಿ ಜನರ ಜೊತೆ ಸೇರಿ ಮಿರ್ಚಿ ತಿನ್ನುತ್ತಾ, ಬಹಿರಂಗವಾಗಿ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.
ಕಾಂಗ್ರೆಸ್ನಲ್ಲಿ ಪರಂಪರೆ...
ಸಿದ್ದರಾಮಯ್ಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಗೊಂದಲಗಳ ಮಧ್ಯೆಯೇ, ಉಪಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವಿಚಾರವಾಗಿ ಮಾಜಿ ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಲು ದೆಹಲಿ ಮಟ್ಟದಲ್ಲಿ ಪ್ಲಾನ್ ಮಾಡಲಾಗಿದೆಯಂತೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ತಂತ್ರ ರೂಪಿಸಲಾಗಿದೆಯಂತೆ. ಹೀಗಂತ ಶ್ರೀರಾಮುಲು ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ...
ರಾಜ್ಯ ರಾಜಕೀಯದ ನವೆಂಬರ್ ಕ್ರಾಂತಿ ಒಂದೆಡೆಯಾದ್ರೆ, ಮತ್ತೊಂದೆಡೆ ಆರ್ಎಸ್ಎಸ್ ಕಿಚ್ಚು ಧಗಧಗಿಸ್ತಿದೆ. ನವೆಂಬರ್ 2ರಂದು RSS ಪಥಸಂಚಲನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಾಳೆ ನಡೆಯುತ್ತಿದೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ನವೆಂಬರ್ 2ರಂದು ತಮಗೂ ಮೆರವಣಿಗೆ ಮತ್ತು ಪಥಸಂಚಲನಕ್ಕೆ ಅನುಮತಿ ನೀಡುವಂತೆ, ಇತರೆ 5...
ಸಿಎಂ ಸಿದ್ದರಾಮಯ್ಯ ಅವರು ತೇಜಸ್ವಿ ಸೂರ್ಯ ನನಗೆ ಅಮಾವಾಸ್ಯೆಯಂತೆ ಕಾಣ್ತಾರೆ ಎಂದು ಹೇಳಿದ ಹೇಳಿಕೆಗೆ, ಯುವ ಸಂಸದ ತೇಜಸ್ವಿ ಸೂರ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪದೇಪದೇ ವೈಯಕ್ತಿಕ ಟೀಕೆ ಮಾಡುವುದು ಅವರಿಗೆ ಶೋಭೆ ತರದು ಎಂದು ಹೇಳಿದ ತೇಜಸ್ವಿ, ಅವರು ಹಿರಿಯರು, ಆದರೆ ಅವರಿಗೆ ಅಮಾವಾಸ್ಯೆಗೂ ಹುಣ್ಣಿಮೆಯೂ ವ್ಯತ್ಯಾಸ ಗೊತ್ತಿಲ್ಲ ಅನಿಸುತ್ತೆ...
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಇದರ ಭಾಗವಾಗೇ ನವೆಂಬರ್ 19ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರ್ತಿದ್ದಾರೆ ಎನ್ನಲಾಗ್ತಿದೆ. ನವೆಂಬರ್ 15ರಿಂದ 20ರೊಳಗೆ ದೊಡ್ಡ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನ ಕೊಡುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಡಿ.ಕೆ. ಶಿವಕುಮಾರ್ ಅತಿ ಹೆಚ್ಚು ಆಸಕ್ತಿ ವಹಿಸಿ,...