Monday, April 14, 2025

Latest Posts

Cauvery Water : ಕಾವೇರಿ ಕಿಚ್ಚು ಕರ್ನಾಟಕ ಬಂದ್: ರಾಜ್ಯಾದ್ಯಂತ ಎಲ್ಲೆಲ್ಲಿ ಏನೇನಾಯ್ತು..?!

- Advertisement -

State News : ಕಾವೇರಿ ಕಿಚ್ಚಿಗೆ ಇಂದು ರಾಜ್ಯ ಸ್ತಬ್ದವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕನ್ನಡಪರ, ರೈತ ಸಂಘಟನೆಗಳು ಕರ್ನಾಟಕ ಬಂದ್​​ಗೆ ಕರೆ ನೀಡಿವೆ. ಈ ಬಂದ್​ಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ಬೆಂಬಲ ವ್ಯಕ್ತಪಡಿಸಿವೆ. ಅಲ್ಲದೇ ಬೆಂಗಳೂರಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಈಗಾಗಲೆ ಪೊಲೀಸರು ಬಂದೋಬಸ್ತ್​​ಗೆ ಫೀಲ್ಡ್​​ಗೆ ಇಳಿದಿದ್ದಾರೆ. ರಾಜ್ಯದ ಅನೇಕ ಕಡೆ ಅನೇಕ ರೀತಿಯ ಬಂದ್ ಗಳು ನಡೆದಿವೆ . ಹೋರಾಟಗಾರರ ಆಕ್ರೋಶ ಹೇಗಿತ್ತು ನೋಡೋಣ….

ಹುಬ್ಬಳ್ಳಿ ಹೊಸುರು ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರ ಪ್ರತಿಭಟನೆ:
ಹುಬ್ಬಳ್ಳಿ: ನಗರದಹೊಸುರ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾವೇರಿ ನಮ್ಮದು, ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಹಾಕಿದ್ದಾರೆ. ಅಲ್ಲದೆ ಹೊಸುರ ವೃತ್ತದಲ್ಲಿ ಬಿಆರ್​ಟಿಎಸ್​ ಚಿಗರಿ ಬಸ್ ತಡೆದು ಪ್ರತಿಭಟನೆ ಮಾಡಿದರು.

ಚಿತ್ರದುರ್ಗದಲ್ಲಿ ಸಂಸದರ ಅಣಕು ಶವಯಾತ್ರೆ :
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನಾಕಾರರು ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ ಸಂಸದರ ಅಣಕು ಶವಯಾತ್ರೆ ನಡೆಸಲು ಯತ್ನಿಸಿದರು. ಈ ವೇಳೆ ತಡೆದ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಸಿಎಂ ಫೋಟೋ ಮೇಲೆ ರಕ್ತ ಚೆಲ್ಲಿ ಆಕ್ರೋಶ :
ಚಿತ್ರದುರ್ಗ: ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಸಿಎಂ ಸಿದ್ಧರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ ಚಿತ್ರದ ಮೇಲೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಕರುನಾಡ ವಿಜಯಸೇನೆ ಜಿಲ್ಲಾದ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿ ಹಲವರನ್ನು ಪೊಲೀಸರ ವಶಪಡಿಸಿಕೊಂಡರು.

ಗದಗ: ಜಿಲ್ಲೆಯಲ್ಲೂ ಕಾವೇರಿ ಕಿಚ್ಚು ಜೋರಾಗಿದೆ. ರಾಜ್ಯದ 28 ಸಂಸದರಿಗೆ ಶೃದ್ಧಾಂಜಲಿ ಅರ್ಪಿಸಿ ಜಯ ಕರ್ನಾಟಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೀವಂತ ಇದ್ದರೂ ರಾಜ್ಯದ ಪಾಲಿಗೆ ಸತ್ತು ಹೋಗಿದ್ದಾರೆ ಅಂತ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

28 ಸಂಸದರ ವಿರುದ್ಧ ಪ್ರತಿಭಟನೆ :
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಖಾಲಿ ಕೊಡ, ಸಂಸದರ ಭಾವಚಿತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ 28 ಸಂಸದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಸದರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ತಡೆದು ಪೊರಕೆ ಚಳುವಳಿ:
ಬೆಂಗಳೂರು: ರಾಜಾಜಿನಗರ ಲಿಂಕ್ ರೋಡ್ ಸರ್ಕಲ್​​​​ನಲ್ಲಿ ಹೋರಾಟಗಾರರು ರಸ್ತೆ ತಡೆದು ಪೊರಕೆ ಚಳುವಳಿ ನಡೆಸಿದರು. ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಚಪ್ಪಲಿ ಸೇವೆ ಮಾಡಿದರು.

Khillari Ox : ಬೆಳಗಾವಿ : ಧಾಖಲೆ ಮೊತ್ತಕ್ಕೆ ಮರಾಟವಾದ ಖಿಲ್ಲಾರಿ ಎತ್ತು

KAVERI WATER: ಮೊದಲೇ ವಾದ ಮಾಡಿದ್ದರೆ ಇಷ್ಟೊಂದು ನೀರು ಹಾಳಾಗುತ್ತಿರಲಿಲ್ಲ ; ಬೊಮ್ಮಾಯಿ..!

Bommai: ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ : ಬೊಮ್ಮಾಯಿ ಹೇಳಿಕೆ

- Advertisement -

Latest Posts

Don't Miss