Saturday, February 8, 2025

Latest Posts

Cauvery Water : ಉಕ್ಕಿ ಹರಿದ ಕಾವೇರಿ ಕಾವು..! ರಾಜಧಾನಿ ಸ್ತಬ್ದ

- Advertisement -

Banglore News : ಕಾವೇರಿ ಕಿಚ್ಚು ಕಾವೇರಿದೆ. ರಾಜಧಾನಿ ಬೆಂಗಳೂರು ಇಂದು (ಸೆ.26) ಕಾವೇರಿ ರಣಕಹಳೆಗೆ ಸಾಕ್ಷಿಯಾಗಿದೆ.

ನೀರು ಉಳಿಸಿಕೊಳ್ಳಲು ಒಕ್ಕೊರಲ ಹೋರಾಟಕ್ಕೆ ಕರೆ ನೀಡಲಾಗಿದ್ದು, ಇವತ್ತು 97ಕ್ಕೂ ಹೆಚ್ಚು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿದ್ದು ಅನೇಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿಗೆ ಹರಿಯುತ್ತಿರುವ ನೀರು ಉಳಿಸಿಕೊಳ್ಳಲು ರೈತ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು ಬೀದಿಗಿಳಿದಿದ್ದಾರೆ. ನಾಡಿನಾದ್ಯಂತ ಕಾವೇರಿಗಾಗಿ ಹೋರಾಟ ತೀವ್ರಗೊಂಡಿದ್ದು, ಇಡೀ ಬೆಂಗಳೂರು ಸ್ತಬ್ಧವಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬೆಂಗಳೂರು ಬಂದ್ ಆಗಲಿದೆ.

97ಕ್ಕೂ ಹೆಚ್ಚು ಸಂಘಟನೆಗಳು ಬೆಳಗ್ಗೆ ಟೌನ್​ಹಾಲ್​ನಿಂದ ಫ್ರೀಡಂಪಾರ್ಕ್​ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು.

ಮೋದಿ ದೇಶ ದಿವಾಳಿ ಮಾಡಿದ್ದು ಸತ್ಯ ; ಸಂತೋಷ್ ಲಾಡ್

Cauvery Water : ಬೆಂಗಳೂರು ಬಂದ್ : ಏನೇನು ಇರುತ್ತೆ ಏನೇನು ಇರಲ್ಲ..?!

Jeeni Millet : ಪ್ರತಿಭಾ ಕಾರಂಜಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜೀನಿ ಕಂಪನಿ ವತಿಯಿಂದ ಊಟದ ವ್ಯವಸ್ಥೆ

- Advertisement -

Latest Posts

Don't Miss