ಹುಬ್ಬಳ್ಳಿಯ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ ಹೊಸ ಜನಾದೇಶ ಪಡೆಯಬೇಕು ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಕರ್ನಾಟಕದ ರೈತರನ್ನು ಬಲಿಕೊಟ್ಟು ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ. ವಿಧಾನಸಭೆಯಿಂದ ಕಾಂಗ್ರೆಸ್ ಸರ್ಕಾರವನ್ನು ವಿಸರ್ಜನೆ ಮಾಡಬೇಕು. ನಮ್ಮಲ್ಲೆ ಬರಗಾಲ ಆವರಿಸಿದೆ, ಕುಡಿಯೋಕು ನೀರಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯ ಇರುವಾಗ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ.
ರೈತರು ಅತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ತಂದಿಟ್ಟಿದೆ ಕಾವೇರಿ ವಿಚಾರವಾಗಿ ನ್ಯಾಯಲಯದಲ್ಲಿ ವಾದ ಮಾಡದೆ ಕಾವೇರಿ ಭಾಗದ ರೈತರನ್ನು ಬಲಿ ನೀಡುತ್ತಿದೆ. ಇದಕ್ಕೆಲ್ಲ ಕಾರಣರಾದ ಡಿಕೆ ಶಿವಕುಮಾರ್ ಅವರು ಕರ್ನಾಟಕ ರೈತರ ಮಾರಣ ಹೋಮ ಮಾಡುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟು ರೈತರನ್ನು ಕಷ್ಟದ ಕೂಪಕ್ಕೆ ತಳ್ಳುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.
.
Pramod muthalik: ಅಂಜುಮನ್ ಸಂಸ್ಥೆಯವರ ವಿರುದ್ದ ಹರಿಹಾಯ್ದ ಮುತಾಲಿಕ್..!
Chabbi Ganesha: ಕೆಂಪು ಬಣ್ಣದ ಛಬ್ಬಿ ಗಣೇಶ ಭಕ್ತರ ಇಷ್ಟಾರ್ಥ ಸಿದ್ದಿ. ಇತಿಹಾಸ .!
Hubli:ಎಂಪಿ ಚುನಾವಣೆಗೆ ನಿಲ್ಲಿ ಜನ ನಿಮ್ಮನ್ನ ಲಾಗಾ ಹೊಡೆಸುತ್ತಾರೆ : ಶೆಟ್ಟರ್ ವಿರುದ್ದ ಹರಿಹಾಯ್ದ ಯತ್ನಾಳ್…!