CBSE 10,12 ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ..!

www.karnatakatv.net: ಸಿಬಿಎಸ್ ಇ 10,12 ನೇ ತರಗತಿಯ ಟರ್ಮ್-1 ಪರೀಕ್ಷೆಯು ನವೆಂಬರ್- ಡಿಸೆಂಬರ್ ತಿಳಗಳಲ್ಲಿ ನಡೆಯಲಿದ್ದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಾತುರದಿಂದ ಕಾಯುತ್ತಿದ್ದ ಸಿಬಿಎಸ್ ಇ 10, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಿಬಿ ಎಸ್ ಇ 10,12 ನೇ ತರಗತಿಯ ಪರೀಕ್ಷೆಯು ವರ್ಷದಲ್ಲಿ 2 ಬಾರಿ ನಡೆಯಲಿದೆ ಹಾಗೇ ಈ ಪರೀಕ್ಷೆಯಲ್ಲಿ ಶೇಕಡಾ 50 ರಷ್ಟು ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

” ನವೆಂಬರ್‌ನಲ್ಲಿ 10 ಹಾಗೂ 12 ತರಗತಿ ವಿದ್ಯಾರ್ಥಿಗಳಿಗೆ ನಡೆಯಲಿರುವ ಟರ್ಮ್-1ರ ಪರೀಕ್ಷೆಯ ನಕಲಿ ಡೇಟ್‌ಶೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಬೋರ್ಡ್ ಯಾವುದೇ ಡೇಟ್‌ಶೀಟ್ ಅನ್ನು ಬಿಡುಗಡೆ ಮಾಡಿಲ್ಲ ಎಂದು ನಾವು ಈ ಮೂಲಕ ನಿಮಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ,” ಎಂದು ತಿಳಿಸಿದೆ. ವಿದ್ಯಾರ್ಥಿಗಳು ಈ ಡೇಟ್‌ಶೀಟ್ ಅನ್ನು ವೆಬ್‌ಸೈಟ್ cbse.nic.in ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.

About The Author