ಬೆಂಗಳೂರು : ರಾಜ್ಯವನ್ನೇ ಬೆಚ್ಚಿಬೀಳಿಸಿರುವ ರಾಬರಿ ಪ್ರಕರಣ ಬೆಂಗಳೂರು ನಗರ ಪೊಲೀಸರ ತಲೆಕೆಡಿಸಿದೆ. ತಿರುಪತಿಯಲ್ಲಿ ನಡೆದ ಬಹು ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೃಹತ್ ಕಾರ್ಯಾಚರಣೆಯಲ್ಲಿ ಮುಂದಾಗಿದ್ದಾರೆ. ವೆಬ್ ಸೀರೀಸ್ ರೀತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಹಗಲು ದರೋಡೆ ಪ್ರಕರಣದ ಆರೇಳು ಆರೋಪಿಗಳಲ್ಲಿ ಇಬ್ಬರನ್ನು ತಿರುಪತಿಯಲ್ಲಿ CCB ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರು ಹತ್ತಿರ ರಾಬರಿ ಗ್ಯಾಂಗ್ ಸಂಪೂರ್ಣವಾಗಿ ಲಾಕ್ ಆಗಿದ್ದು, ಆರೋಪಿಗಳು ದರೋಡೆಗಾಗಿ ಬಳಸಿದ್ದ ಇನೋವಾ ಕಾರು ಕೂಡ ಸೀಜ್ ಮಾಡಲಾಗಿದೆ. ಕಾರು ಪತ್ತೆಯಾಗುತ್ತಿದ್ದಂತೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರು ಬಾಣಸವಾಡಿ ಮತ್ತು ಕಲ್ಯಾಣನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.
ಸಿಸಿಟಿವಿ ದೃಶ್ಯಗಳು ಮತ್ತು ಮೊಬೈಲ್ ಲೊಕೇಶನ್ ಆಧಾರಿತವಾಗಿ ಪೊಲೀಸರು ಗ್ಯಾಂಗ್ ಸದಸ್ಯರನ್ನೆಲ್ಲಾ ಟ್ರ್ಯಾಕ್ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಬರಿ ಗ್ಯಾಂಗ್ ಹಿಂದಿ ಮಾತನಾಡಿ ದಾರಿ ತಪ್ಪಿಸುವ ಯತ್ನ ಮಾಡುತ್ತಿತ್ತು. ನಂಬರ್ ಪ್ಲೇಟ್ ಬದಲಿಸಿ ಕಾರಿನಲ್ಲಿ ಎಸ್ಕೇಪ್ ಆಗೋಕೆ ಯತ್ನಿಸಿತ್ತು. ಸದ್ಯ ಹೋಟೆಲ್, ಲಾಡ್ಜ್, ದೇಗುಲ ಬಳಿ ಮಫ್ತಿಯಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಹಣ ಬೇರೆ ಕಡೆ ಇರಿಸಿ ಆರೋಪಿಗಳು ತಿರುಪತಿಯಲ್ಲಿ ಇರುವ ಶಂಕೆ ತನಿಖೆ ವೇಳೆ ವ್ಯಕ್ತವಾಗಿದೆ.
ಪೊಲೀಸರು ಮಾಹಿತಿ ಪ್ರಕಾರ, CMS ವಾಹನದಲ್ಲಿ ಇದ್ದ ಹಣವನ್ನು ಖದೀಮರು ಯುಪಿ ನೋಂದಣಿಯ ಕಾರಿನ ನಂಬರ್ ಪ್ಲೇಟ್ ಹಾಕಿಕೊಂಡು ಕಾರಿನಲ್ಲಿ ಪರಾರಿಯಾಗಿಸಲು ಯತ್ನಿಸಿದ್ದರು. ಆರೋಪಿಗಳು ಮಾರ್ಗದ ನಡುವೆ ಕಾರು ಬದಲಾಯಿಸಿ ತಿರುಪತಿಗೆ ಪ್ರಯಾಣ ಬೆಳೆಸಿಕೊಂಡಿದ್ದಾರೆ. ಈಗ ಗ್ಯಾಂಗ್ ಸದಸ್ಯರು ಕ್ರಮೇಣ ಲಾಕ್ ಆಗುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮತ್ತು ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೆ ನಗರದಲ್ಲಿ ನೂರಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಲಾಗಿದೆ. CMS ವಾಹನದ ಮೊದಲ ಪಾಯಿಂಟ್ ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು, HDFC ಬ್ಯಾಂಕ್ನಿಂದ ಹಣ ತುಂಬಿ ವಾಹನ ಹೊಡುವ ವೇಳೆ ಆರೋಪಿಗಳಿದ್ದ ಇನ್ನೋವಾ ಕಾರು ಅಲ್ಲಿ ಕಂಡಬಂದಿಲ್ಲ. ಸ್ವಲ್ಪ ದೂರದಿಂದ ಕಾರಿನಲ್ಲಿ ಆರೋಪಿಗಳು ಫಾಲೋ ಮಾಡಿದ್ದು, HDFC ಬ್ಯಾಂಕ್ ಬಳಿಯಿಂದ ಬೈಕ್ನಲ್ಲಿ ಫಾಲೋ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ

