www.karnatakatv.net : ರಾಜ್ಯ ರಾಜಕಾರಣದಲ್ಲಿ ಸಿಡಿ ಸದ್ದು.. ಸ್ವಾಮೀಜಿಗಳಿಗೆ ಯೋಗೀಶ್ವರ್ ಸಿಡಿ ತೋರಿಸಿದ್ರಾ..? ರಾಜ್ಯದಲ್ಲಿ ಒಂದೆಡೆ ಕೋವಿಡ್ ಎರಡನೆ ಅಲೆ ತೀವ್ರವಾಗಿ ಜನರನ್ನ ಕಾಡ್ತಿದ್ರೆ, ಮತ್ತೊಂದೆಡೆ ರಾಜಕಾರಣಿಗಳನ್ನ ಸಿಡಿ ಕಾಡೋಕೆ ಶುರು ಮಾಡಿದೆ.. ರಮೇಶ್ ಜಾರಕಿಹೊಳಿ ಸಿಡಿ ಬೆನ್ನಲ್ಲೇ ಮತ್ತೊಬ್ಬರ ಸಿಡಿ ಭಾರೀ ಚರ್ಚೆ ಹುಟ್ಟುಹಾಕಿದೆ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಬೆಳವಣಿಗೆ ಬೆನ್ನಲ್ಲೇ ಸಚಿವ ಸಿಪಿ ಯೋಗೀಶ್ವರ್ ಮಠಾಧೀಶರಿಗೆ ಅಸಹ್ಯ ಸಿಡಿ ತೋರಿಸ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.. ಸಿಡಿ ತೋರಿಸಲು ಹೋದ ಸಚಿವ ಯೋಗೀಶ್ವರ್‌ಗೆ ಸ್ವಾಮೀಜಿ ಉಗಿದು ಕಳಿಸಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ..
ಡಿಕೆಶಿ 30 ವರ್ಷದ ಹಿಂದೆಯೇ ಸಿಡಿ ತೋರಿಸಿದ್ರು..! ಕನಕಪುರ ಶಾಸಕನಿಗೆ ಚನ್ನಪಟ್ಟಣ ಮಾಜಿ ಶಾಸಕ ತಿರುಗೇಟು.. ಇನ್ನು ಡಿಕೆ ಶಿವಕುಮಾರ್ ಈ ಆರೋಪದ ಮಾಡಿದ ಬೆನ್ನಲ್ಲೇ ಸಚಿವ ಸಿಪಿ ಯೋಗೀಶ್ವರ್ 30 ವರ್ಷದ ಹಿಂದಿನ ಡಿಕೆಶಿ ಹಳೆ ಸ್ಟೋರಿ ನೆನಪಿಸಿದ್ದಾರೆ.. ಡಿಕೆಶಿ ಶಾಸಕರಾಗುವ ಮುನ್ನ ಕನಕಪುರದಲ್ಲಿ ಕದ್ದು ಮುಚ್ಚಿ ಅಶ್ಲೀಲ ಸಿನಿಮಾ ತೋರಿಸಿ ದುಡ್ ಮಾಡಿದ್ರು ಅಂತ ಕಾಂಗ್ರೆಸ್ ನಾಯಕ ಮೂರ್ತಿ ಈ ಹಿಂದೆ ವೀಡಿಯೋದಲ್ಲಿ ಹೇಳಿದ್ರಂತೆ.. ಅದನ್ನ ಇದೀಗ ಸಿಪಿ ಯೋಗೀಶ್ವರ್ ನೆನಪಿಸಿದ್ದಾರೆ.. ಸಿಡಿ ಬಿಸಿನೆಸ್ ಮಾಡಿದವರಿಗೆ ಬೇರೆಯವರು ಹಾಗೆ ಮಾಡ್ತಾರೆ ಅನ್ನುವ ಹುಳುಕು ಇರುತ್ತೆ ಅದನ್ನೇ ಡಿಕೆ ಶಿವಕುಮಾರ್ ಮಾಡ್ತಿದ್ದಾರೆ ಅಂತ ತಿರುಗೇಟು ನೀಡಿದ್ದಾರೆ..
ಅಷ್ಟಕ್ಕೂ ಯಾರದು ಆ ಸಿಡಿ..? ಇಷ್ಟೊಂದು ಸುದ್ದಿ ಮಾಡ್ತಿರುವ ಆ ಸಿಡಿ ಯಾರದ್ದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.. ರಾಜಕಾರಣಿಗಳ ನಡುವಿನ ಪಿಸುಮಾತಿನ ಪ್ರಕಾರ ರಾಜ್ಯದ ಪ್ರಭಾವಿ ವ್ಯಕ್ತಿಯ ಸಿಡಿ ಇದಾಗಿದ್ದು ಇದನ್ನೇ ಮುಂದಿಟ್ಟುಕೊAಡು ಅವರ ಸ್ಥಾನಕ್ಕೆ ಕುತ್ತು ತರುವ ಕೆಲಸ ಕೂಡ ನಡೀತಿದೆ ಅಂತ ಹೇಳಲಾಗ್ತಿದೆ.. ಈ ಸಿಡಿ ಗಲಾಟೆ ಹಲವು ವರ್ಷಗಳಿಂದ ನಡೀತಿದ್ದು ರಿಲೀಸ್ ಆಗೋದು ಡೌಟ್ ಅಂತ ಹೇಳಲಾಗ್ತಿದೆ. ಯಾಕಂದ್ರೆ, ಆ ಸಿಡಿಯಲ್ಲಿರುವ ವ್ಯಕ್ತಿ ಬಗ್ಗೆ ಎಲ್ಲರಿಗೂ ಇರುವ ಕನಿಕರ ಅನ್ನೋದು ಕೆಲವರ ಮಾತು..