ಬೀದಿ ಬದಿ ವ್ಯಾಪಾರಿಗಳ “ಸ್ವ-ನಿಧಿ ಮಹೋತ್ಸವ” ಆಚರಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ “ಸ್ವಾತಂತ್ರ್ಯ ಅಮೃತಮಹೋತ್ಸವ”ದ ಆಚರಣೆಯ ಸಲುವಾಗಿ ಪಾಲಿಕೆಯ ಕೇಂದ್ರ ಕಛೇರಿಯ ಆವರಣದಲ್ಲಿರುವ ಡಾll ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಇಂದು ಬೀದಿ ಬದಿ ವ್ಯಾಪಾರಿಗಳ “ಸ್ವ-ನಿಧಿ ಮಹೋತ್ಸವ” ಮಾನ್ಯ ಮುಖ್ಯ ಆಯುಕ್ತರಾದ ‘ತುಷಾರ್ ಗಿರಿ ನಾಥ್’ರವರು ಚಾಲನೆ ನೀಡಿದರು‌.

ಈ ವೇಳೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಡಾ. ರಾಮ್ ಪ್ರಸಾತ್ ಮನೋಹರ್, ಉಪ ಆಯುಕ್ತರಾದ ಮುರಳೀಧರ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಅಂಶಗಳು

1. ಬೀದಿ ಬದಿ ವ್ಯಾಪಾರಿಗಳ ಕುಟುಂಬದವರಿಂದ ಕಲೆ, ಜಾನಪದ, ನೃತ್ಯ, ಹಾಡು, ರಂಗೋಲಿ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

2. ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಗುವುದು.

3. ಬೀದಿ ಬದಿ ವ್ಯಾಪಾರಿಗಳ ಸ್ವ-ನಿಧಿ ಯೋಜನೆಯನ್ನು ಸದುಪಯೋಗಮಾಡಿಕೊಂಡಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪುರಸ್ಕರಿಸಲಾಗುವುದು.

4. ಬೀದಿ ಬದಿ ವ್ಯಾಪಾರಿಗಳ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಕ್ರಿಯಾ ಶೀಲವಾಗಿ ಪಟ್ಟಣ ಮಾರಾಟ ಸಮಿತಿಯ ಸದಸ್ಯರನ್ನು ಗುರುತಿಸಿ ತೊಡಗಿಸಿಕೊಂಡಿರುವ ಪುರಸ್ಕರಿಸಲಾಗುವುದು.

5. ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಚಟುವಟಿಕೆಯನ್ನು ಉತ್ತಮವಾಗಿ ಆನ್ ಲೈನ್ “ಮೇ ಭಿ ಡಿಜಿಟಲ್ ಹೂ” ಅಡಿಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಿಗಳನ್ನು ಗುರುತಿಸಿ ಗೌರವಿಸಲಾಗುವುದು.

6. ಬೀದಿ ಬದಿ ವ್ಯಾಪಾರಿಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ತಮ್ಮ ಜೀವನಮಟ್ಟವನ್ನು ಉತ್ತಮ ಪಡಿಸಿಕೊಂಡಿರುವ ವ್ಯಾಪಾರಿಗಳಿಂದ ತಮ್ಮ ಯಶೋಗಾಥೆಯನ್ನು ವಿವರಿಸಲು ಅವಕಾಶ ಕಲ್ಪಸಲಾಗುವುದು.

7. ಮಹೋತ್ಸವದಲ್ಲಿ ಪಿ.ಎಂ ಸ್ವ-ನಿಧಿ ಯೋಜನೆಯಡಿ ಸಾಲ ಮಂಜೂರಾಗಿ ಸಾಲ ಬಿಡುಗಡೆಯಾಗದಿರುವ ಬೀದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್ ಅಧಿಕಾರಿಗಳಿಂದ ಸಾಲದ ಹಣ ಬಿಡುಗಡೆ ಮಾಡಲು ಸಾಲ ಮೇಳದ ಆಯೋಜನೆ.

8. ಈ ಮಹೋತ್ಸವದಲ್ಲಿ ಬೀದಿ ವ್ಯಾಪಾರಿಗಳಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥ ಮಾರಾಟ ಮಾಡಲು ಮಳಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

9. ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ತರಬೇತಿ ಹಾಗೂ ಆಹಾರ ಗುಣಮಟ್ಟದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.

10. ಬೀದಿ ವ್ಯಾಪಾರಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿ “ಸ್ವ-ನಿಧಿ ಸೆ ಸಮೃದ್ಧಿ” ಯೋಜನೆಗೆ ಒಳಪಡಿಸಲಾಗುವುದು.

About The Author