www.karnatakatv.net : ರಾಯಚೂರು : ಪ್ರತೀ ವರ್ಷದಂತೆ ಈ ವರ್ಷವೂ ರಾಯಚೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. NGO ಕಾಲೋನಿ ನಿವಾಸಿಯಾದ ಪ್ರಹ್ಲಾದ್ ರಾವ್ ಕುಲಕರ್ಣಿಯವರ ಮನೆಯಲ್ಲಿ ಇದೇ ವರ್ಷ ಮಕ್ಕಳ ಮದುವೆಯಾದ ಕಾರಣ ವಿಶೇಷವಾದ ಪೂಜೆಯನ್ನ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಲಾಗುತ್ತಿದ್ದ ವರಮಹಾಲಕ್ಷ್ಮಿ ಹಬ್ಬವನ್ನು ಈ ಬಾರಿ ಭಕ್ತಿ ಭಾವದಿಂದ ಮನೆಯಲ್ಲೇ ಆಚರಿಸಿದ್ದು ವಿಶೇಷವಾಗಿತ್ತು. ಲಕ್ಷ್ಮೀ ಮಾತೆ ಶುದ್ಧತೆಯ ಸಂಕೇತವಾಗಿರುವುದರಿಂದ ಬ್ರಾಹ್ಮೀ ಮಹೂರ್ತದಲ್ಲಿ ಎದ್ದು, ಮನೆಯನ್ನು ಶುಚುಗೊಳಿಸಿ ರಂಗೋಲಿ ಬಿಡಿಸಿ ಪೂಜೆ ನಿಮಿತ್ತ ಪಾರ್ವತೀ ಪರಮೇಶ್ವರ, ರಾಧಾ ಕೃಷ್ಣರನ್ನು ಸಿಂಗರಿಸಿ ವಿಧ ವಿಧಧ ದಂಪತಿ ಬೊಂಬೆಗಳನ್ನಿಟ್ಟು ಮಡಿಯಿಂದ ವೃತವನ್ನ ಕೈಗೊಳ್ಳಲಾಯಿತು..
12 ಎಳೆಗಳ ಅರಿಶಿಣ ದಾರ, 12 ಎಳೆಗಳ ಗೆಜ್ಜೆ ವಸ್ತ್ರ, ಹೂವು, ಪತ್ರೆ, ಹಾಗೂ ಅಕ್ಷತೆಗಳಿಂದ ಲಕ್ಷ್ಮಿಯನ್ನ ಪೂಜಿಸಲಾಯಿತು.. ಅಂಗ ಪೂಜೆ, ಗ್ರಂಥಿ ಪೂಜೆ, ಕುಸುಮ ಪೂಜೆ, ಪತ್ರ ಪೂಜೆ, ಅಷ್ಟೋತ್ತರ ಶತನಾಮ ಪೂಜೆ ಹಾಗೂ ಪಂಚಾಮೃತ ಅಭಿಷೇಕ ಮಾಡಲಾಯಿತು..
ಅಷ್ಟೇ ಅಲ್ಲ ಮದುವೆಯಾದ ಬಳಿಕ ಇದೇ ಮೊದಲ ವೃತವಾದ್ದರಿಂದ ಹೊಸದಾಗಿ ಮದುವೆಯಾದ ಅಷ್ಟ ಲಕ್ಷ್ಮಿಯರು ಅಂದರೆ ಅಕ್ಕಪಕ್ಕದ ಮನೆಯ ಸುಮಂಗಲೆಯರನ್ನ ಕರೆದು, 12 ಭಕ್ಷಗಳನ್ನ ದಕ್ಷಿಣೆ ತಾಂಬೂಲಗಳೊಡನೆ ಬಾಗೀನವಾಗಿ ನೀಡಲಾಯಿತು..
ಲಾಕ್ ಡೌನ್ ಸಮಯದಲ್ಲಿ ಮದುವೆಯಾಗಿದ್ದರಿಂದ ಸಂಕ್ಷಯರೀತಿಯಲ್ಲಿ ಮದುವೆ ಮಾಡಿಕೊಂಡಿದ್ದು, ವರಮಹಾಲಕ್ಷ್ಮಿ ವೃತವನ್ನ ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಿರುವುದಾಗಿ ಕುಟುಂಬದವರು ತಿಳಿಸಿದರು.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು