www.karnatakatv.net: ಇಟಲಿಯಲ್ಲಿ ನಡೆಯಲಿರುವ ಜಾಗತಿಕ ಶಾಂತಿ ಸಮಾವೇಶದಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅನುಮತಿ ನೀಡಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಅಕ್ಟೋಬರ್ನಲ್ಲಿ ಇಟಲಿಯಲ್ಲಿ ನಡೆಯಲಿರೋ ಈ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ಪೋಪ್ ಫ್ರಾನ್ಸಿಸ್ ಭಾಗವಹಿಸಲಿದ್ದಾರೆ. ಈ ಸಮ್ಮೇಳನ ನೋಬಲ್ ಪ್ರಶಸ್ತಿ ಪುರಸ್ಕೃತ ಮದರ್ ತೆರೇಸಾರನ್ನು ಕೇಂದ್ರೀಕರಿಸಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ನಿಯೋಗದೊಂದಿಗೆ ಬರಬಾರದು ಅಂತ ಇಟಲಿ ಸರ್ಕಾರ ಮಮತಾ ಬ್ಯಾನರ್ಜಿಯವರಿಗೆ ಮನವಿ ಮಾಡಿತ್ತು. ಆದ್ರೀಗ
ಮಮತಾ ಬ್ಯಾನರ್ಜಿ ಇಟಲಿಗೆ ತೆರಳೋದಕ್ಕೆ ಕೇಂದ್ರ ಸರ್ಕಾರ ಅವಕಾಶವನ್ನೇ ನೀಡಿಲ್ಲ. ಇನ್ನು ರಾಜಕೀಯ ಆಯಾಮದ ಹಿನ್ನೆಲೆಯಲ್ಲಿ ದೀದಿಗೆ ಅನುಮತಿ ನಿರಾಕರಿಸಲಾಗಿದೆ ಮತ್ತು ಯಾವುದೇ ರಾಜ್ಯದ ಮುಖ್ಯಮಂತ್ರಿಗಳ ಪಾಲ್ಗೊಳ್ಳುವಿಕೆಗೆ ತಕ್ಕದಾದ ಕಾರ್ಯಕ್ರಮ ಇದಲ್ಲ ಅಂತ ಕೇಂದ್ರ ಪ್ರತಿಪಾದಿಸಿದೆ.