ಗುಂಡು ಇಲ್ಲ, ಬಾಂಬ್ ಕೂಡ ಇಲ್ಲ. ಆದರೆ ಪರಿಣಾಮ ಮಾತ್ರ ಯುದ್ಧದಷ್ಟೇ ಗಂಭೀರ. ಇಂದು ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯ ಎಫೆಕ್ಟ್ ಆಗಿದೆ. ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಜವಳಿ ಉದ್ಯಮಗಳ ಮೇಲೆ ಪರಿಣಾಮಕಾರಿ ಆರ್ಥಿಕ ದಾಳಿ ಆರಂಭಿಸಿದೆ. ಈ ಮೂಲಕ ಭಾರತದ ಜವಳಿ ಉದ್ಯಮಕ್ಕೆ ಉತ್ತೇಜನ ನೀಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ನಲ್ಲಿ ಈ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಇದರ ಮುಖ್ಯ ಉದ್ದೇಶ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಉತ್ಪಾದನೆಯನ್ನು ಉತ್ತೇಜಿಸುವುದು. ಜೊತೆಗೆ ಗ್ರಾಮೀಣ ನೇಕಾರರು ಮತ್ತು ಕುಶಲಕರ್ಮಿಗಳನ್ನು ಜಾಗತಿಕ ಮೌಲ್ಯ ಸರಪಳಿಗೆ ಕೊಂಡೊಯ್ಯುವುದಾಗಿದೆ. ಈ ಯೋಜನೆಯು ಕೇವಲ ಕಲ್ಯಾಣಾತ್ಮಕವಲ್ಲ. ಇದು ಸ್ಪಷ್ಟವಾಗಿ ಜಾಗತಿಕ ಜವಳಿ ಸ್ಪರ್ಧೆಗೆ ತಕ್ಕ ತಂತ್ರಾತ್ಮಕ ಹೆಜ್ಜೆ ಎನ್ನಲಾಗಿದೆ.
ಬಜೆಟ್ನಲ್ಲಿ ಜವಳಿ ಸಚಿವಾಲಯಕ್ಕೆ ₹5,272 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.19 ಹೆಚ್ಚಳ. ಜೊತೆಗೆ, ‘ಐದು ವರ್ಷಗಳ ‘ಕಾಟನ್ ಮಿಷನ್’ ಮೂಲಕ ಹತ್ತಿ ಉತ್ಪಾದನೆ ಹೆಚ್ಚಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ. ಇದರರ್ಥ, ಭಾರತವು ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧ ಉಡುಪುಗಳವರೆಗೆ ಸಂಪೂರ್ಣ ಜವಳಿ ಸರಪಣಿಯನ್ನು ದೇಶದೊಳಗೆ ಬಲಪಡಿಸಲು ಮುಂದಾಗಿದೆ. ಲುಧಿಯಾನಾ ಮುಂತಾದ ಭಾರತೀಯ ಹಬ್ಗಳಿಗೆ ಸ್ಥಳಾಂತರಿಸುತ್ತಿವೆ. ‘ಗಾಂಧಿ ಗ್ರಾಮ ಸ್ವರಾಜ್’ ಯೋಜನೆ ಈ ಪ್ರವೃತ್ತಿಯನ್ನು ಶಾಶ್ವತಗೊಳಿಸುವ ಶಕ್ತಿ ಹೊಂದಿದೆ.
ಈ ಯೋಜನೆಯಿಂದ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೇಕೆ ಆತಂಕ ತಂದಿವೆ ಎಂಬುದಕ್ಕೆ ಸ್ಪಷ್ಟ ಕಾರಣಗಳಿವೆ. ಈವರೆಗೆ ‘ಅಲ್ಪ ಅಭಿವೃದ್ಧಿ ಹೊಂದಿದ ದೇಶದ ಸ್ಥಾನಮಾನದಡಿ ಶೂನ್ಯ ಸುಂಕದ ಲಾಭ ಪಡೆದಿದ್ದ ಬಾಂಗ್ಲಾದೇಶಕ್ಕೆ ಇದು ನೇರ ಹೊಡೆತ. 2026ರಲ್ಲಿ ಬಾಂಗ್ಲಾದೇಶ LDC ಪಟ್ಟಿಯಿಂದ ಹೊರಬರಲಿದೆ. ಇದರೊಂದಿಗೆ ಅದರ ವಿಶೇಷ ವಾಣಿಜ್ಯ ರಿಯಾಯಿತಿಗಳು ಕೊನೆಗೊಳ್ಳುತ್ತವೆ. ಅದೇ ಸಮಯದಲ್ಲಿ, ಭಾರತದ ಹೊಸ ಈ ಜವಳಿ ಯೋಜನೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿವೆ.
ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಕಚ್ಚಾ ವಸ್ತುಗಳ ಅವಲಂಬನೆ. ಬಾಂಗ್ಲಾದೇಶ ತನ್ನ ಜವಳಿ ಉದ್ಯಮಕ್ಕೆ ಅಗತ್ಯವಾದ ನೂಲಿನ ಸುಮಾರು 82% ಅನ್ನು ಭಾರತದಿಂದಲೇ ಆಮದು ಮಾಡಿಕೊಳ್ಳುತ್ತದೆ. ಭಾರತವು ಈ ಯೋಜನೆ ಮೂಲಕ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಹೆಚ್ಚು ಒತ್ತು ನೀಡಿದರೆ, ಬಾಂಗ್ಲಾದೇಶಕ್ಕೆ ನೂಲಿನ ಲಭ್ಯತೆ ಕಡಿಮೆಯಾಗಬಹುದು ಅಥವಾ ವೆಚ್ಚ ಹೆಚ್ಚಾಗಬಹುದು. ಈ ಬಿಕ್ಕಟ್ಟನ್ನು ಬಾಂಗ್ಲಾ ಎದುರಿಸಲಿದೆ.
ಇನ್ನು, ಪಾಕಿಸ್ತಾನದ ಸ್ಥಿತಿಯೂ ಉತ್ತಮವಲ್ಲ. ಇಂಧನ ಬಿಕ್ಕಟ್ಟು ಮತ್ತು ಆರ್ಥಿಕ ಅಸ್ಥಿರತೆಯಿಂದ ಬಳಲುತ್ತಿರುವ ಪಾಕಿಸ್ತಾನ, ಭಾರತದ ಗ್ರಾಮೀಣ ಕ್ಲಸ್ಟರ್ ಆಧಾರಿತ ಆಧುನೀಕರಣ ಮತ್ತು ಸುಂಕ ರಹಿತ ಮಾರುಕಟ್ಟೆ ಪ್ರವೇಶದ ಮುಂದೆ, ಬೆಲೆ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ವರದಿ : ಲಾವಣ್ಯ ಅನಿಗೋಳ




