Political News: ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ಧಸಿರಿ ಕಾರ್ಖಾನೆಯಲ್ಲಿ ಕಬ್ಬಿನ ರಸದಿಂದ ಎಥಿನಾಲ್ ತಯಾರಿಕೆಯಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ, ಕಾರ್ಖಾನೆಯನ್ನು ಬಂದ್ ಮಾಡಿಸಿದ್ದು. ಹೀಗಾಗಿ ಯತ್ನಾಳ್ ಮತ್ತು ರಾಜ್ಯ ಸರ್ಕಾರದ ನಡುವೆ ಈ ಬಗ್ಗೆ ಗುದ್ದಾಟ ನಡೆಯುತ್ತಲೇ ಇತ್ತು.
ಆದ್ರೆ ಕೇಂದ್ರ ಸರ್ಕಾರ ಮಹತ್ವದ ಆದೇಶ ನೀಡಿದ್ದು, ಕಬ್ಬಿನ ರಸದಿಂದ ಎಥಿನಾಲ್ ಉತ್ಪಾದಿಸಲು, ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಸಿದ್ಧಸಿರಿ ಕಾರ್ಖಾನೆ ಪುನರಾರಂಭವಾಗಲಿದೆ. ಸಕ್ಕರೆ ಕೊರತೆಯಿಂದ ಎಥಿನಾಲ್ ಉತ್ಪಾದನೆಗೆ ತಡೆಯೊಡ್ಡಲಾಗಿದ್ದು, ಕಬ್ಬಿನ ರಸ ಬಳಸಿ, ಎಥಿನಾಲ್ ತಯಾರಿಸಬಹುದು ಎಂದು ಆದೇಶ ನೀಡಲಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಈ ಸಿದ್ಧಸಿರಿ ಕಾರ್ಖಾನೆ ಇದ್ದು, ನಾಲ್ಕು ತಿಂಗಳ ಹಿಂದೆ ಹೆಚ್ಚು ಕಬ್ಬು ಬಳಸಿ, ಅದಪ ತ್ಯಾಜ ನೀರಿಗೆ ಹೋಗಿರುವ ಕಾರಣ, ಕಾರ್ಖಾನೆ ಮುಚ್ಚಿಸಲಾಗಿತ್ತು. ಹೀಗಾಗಿ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಈ ಬಗ್ಗೆ ವಾಗ್ದಾಳಿ ನಡೆಸುತ್ತಲೇ ಇದ್ದರು. ಅಲ್ಲದೇ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರತಿಭಟನಾ ಮೆರವಣಿಗೆಯೂ ನಡೆಸಿದ್ದರು. ಇದೀಗ ಯತ್ನಾಳ್ ಪರ ಆದೇಶ ಬಂದಿದೆ.