ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಔಷಧ ಸೇವಿಸಿ 11 ಮಕ್ಕಳು ಸಾವನ್ನಪ್ಪಿರುವ ವಿಚಾರ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಆರೋಪವನ್ನು ತಿರಸ್ಕರಿಸಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ, ಕೆಮ್ಮಿನ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಈ ಘಟನೆ ಕುರಿತು ತನಿಖೆ ಆರಂಭವಾಗಿದೆ ಎಂದು ತಿಳಿಸಿವೆ.
ಜೊತೆಗೆ 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡಬಾರದೆಂದು ಆದೇಶ ಹೊರಡಿಸಿದೆ. ಕೆಮ್ಮಿನ ಔಷಧದಿಂದ ಮಕ್ಕಳಲ್ಲಿ ಯಾವುದೇ ಬದಲಾವಣೆ ಕಂಡು ಬಂದರೂ, ಖಾಸಗಿ ವೈದ್ಯರು ತಕ್ಷಣವೇ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕೆಂದು ಆದೇಶಿಸಿದೆ.
ಕಳೆದ 15 ದಿನದಲ್ಲಿ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಮಕ್ಕಳ ಸಾವಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಕೆಮ್ಮಿನ ಔಷಧ ಸೇವನೆಯಿಂದ ಉಂಟಾದ, ಕಿಡ್ನಿ ವೈಫಲ್ಯ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ ಮಧ್ಯಪ್ರದೇಶ ಆರೋಗ್ಯ ಇಲಾಖೆಯ ಔಷಧ ಪರೀಕ್ಷೆ ವೇಳೆ, ಯಾವುದೇ ವಿಷಪೂರಿತ ಅಂಶ ಪತ್ತೆಯಾಗಿಲ್ಲ. ಹೀಗಾಗಿ ಔಷಧದ ನಿಷೇಧದ ಪ್ರಶ್ನೆಯೇ ಇಲ್ಲ. ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು, ಸ್ಪಷ್ಟನೆ ನೀಡಿವೆ.
ರಾಜಸ್ಥಾನದ ಸಿಕಾರ್ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ, ತಲಾ ಓರ್ವ ಮಗು ಸಾವನ್ನಪ್ಪಿವೆ. ಇಲ್ಲೂ ಕೂಡ ಕೆಮ್ಮಿನ ಔಷಧವೇ ಕಾರಣ ಎಂಬ ಆರೋಪವಿದೆ. ಅಲ್ಲಿನ ಸರ್ಕಾರ ಕೂಡ ವೈದ್ಯರಿಗೆ ಕ್ಲೀನ್‌ಚಿಟ್ ನೀಡಿದೆ. ಜೊತೆಗೆ ರಾಜಸ್ಥಾನ ಔಷಧ ನಿಯಂತ್ರಣ ಮಂಡಳಿಯು, ಈ ಔಷಧಗಳ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದೆ. ಎರಡೂ ಪ್ರಕರಣಗಳಲ್ಲಿಯೂ ಪೋಷಕರು ವೈದ್ಯರ ಸೂಚನೆಯಿಲ್ಲದೆ, ಔಷಧ ನೀಡಿದ್ದೇ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇನ್ನು, ಮಕ್ಕಳ ಸಾವಿನ ಬೆನ್ನಲ್ಲೇ ತಮಿಳುನಾಡು ಸರ್ಕರ ಕೋಲ್ಡ್ರಿಫ್ ಸಿರಪ್ ಮೇಲೆ ನಿಷೇಧ ಹೇರಿದೆ. ತಮಿಳುನಾಡು ಔಷಧ ನಿಯಂತ್ರಣ ಮಂಡಳಿಯು ಕ್ರಮ ಕೈಗೊಂಡಿದೆ.