ಬೆಂಗಳೂರು: ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬಿತುಪಡಿಸಲು ತುದಿಗಾಲಲ್ಲಿ ನಿಂತಿದೆ. ಏನೇ ಆಗಲಿ ಬಹುಮತ ನಮಗೇ ಅಂತ ವಿಶ್ವಾಸದಿಂದ ಬೀಗುತ್ತಿರುವ ಬಿಜೆಪಿ ನಂಬರ್ ಗೇಮ್ ನಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ಸೋಮವಾರ ಬಹುಮತ ಸಾಬೀತುಪಡಿಸಲು ಸದನವನ್ನು ಕರೆಯಲಾಗಿದ್ದು ಬಿಜೆಪಿ ತನ್ನ ಬಲಾಬಲ ಪ್ರದರ್ಶಿಸಲು ಸಿದ್ಧವಾಗಿದೆ. ಇನ್ನು ಬಹುಮತ ಸಾಬೀತಿಗೆ ಒಂದು ವಾರ ಗಡುವಿದ್ದರೂ ಸಹ ತಡ ಮಾಡದೇ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಲು ಸಿಎಂ ಬಿಎಸ್ವೈ ಉತ್ಸುಕರಾಗಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನೂರಕ್ಕೆ ನೂರರಷ್ಟು ಬಹುಮತ ಸಾಬೀತುಪಡಿಸುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನು ಸಿಎಂ ಬಿ.ಎಸ್ ಯಡ್ಯೂರಪ್ಪ ಒಬ್ಬ ಹೋರಾಟಗಾರರು, ಸ್ವಪ್ರಯತ್ನದಿಂದ ರೈತನಾಯಕರಾಗಿ ಹೊರಹೊಮ್ಮಿದಂತಹವರಾಗಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ರೈತರ ಪರವಾದ ನಿರ್ಣಯ ಕೈಗೊಂಡಿರೋದೇ ಇದಕ್ಕೆ ಸಾಕ್ಷಿಯಾಗಿದೆ ಅಂತ ಪ್ರಹ್ಲಾದ್ ಜೋಶಿ ಹೇಳಿದ್ರು. ಇನ್ನು ಬಡವರು, ಕೂಲಿಕಾರ್ಮಿಕರು ಮತ್ತು ನೇಕಾರರಿಗೆ ಆದ್ಯತೆ ನೀಡಿದ್ದಾರೆ ಅಂತ ಜೋಶಿ ಹೇಳಿದ್ರು. ಇನ್ನು ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸೋ ಮೂಲಕ ಉತ್ತಮ ಆಡಳಿತ ನೀಡಲಿದೆ ಅಂತ ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ರು.
ಅಧಿಕಾರ ವಹಿಸಿಕೊಂಡ ಕೂಡಲೇ ಸಿಎಂ ಯಡ್ಯೂರಪ್ಪ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2 ಕಂತುಗಳಲ್ಲಿ 4 ಸಾವಿರ ರೂಪಾಯಿ ನೀಡುವ ನಿರ್ಧಾರ ಕೈಗೊಂಡಿದ್ದರಲ್ಲದೆ, ನೇಕಾರ ಸಮುದಾಯದ ಸುಮಾರು 100 ಕೋಟಿ ರೂಪಾಯಿ ಸಾಲ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ರು.