- Advertisement -
ನೆಲಮಂಗಲ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾಗಿರೋ ಸದಾನಂದಗೌಡ ಮಾರಮ್ಮ ದೇವಿಗೆ 11 ರೂಪಾಯಿ ಹರಕೆ ತೀರಿಸಿದ್ದಾರೆ.
ಬೆಂಗಳೂರು ಹೊರವಲಯದ ತಾವರೆಕೆರೆಯ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೇವಿಗೆ ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ರು. ತಾವು ಗೆದ್ದರೆ 11 ರೂಪಾಯಿ ಕಾಣಿಕೆ ನೀಡೋದಾಗಿ ಹರಕೆ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದ್ದ ಡಿವಿಎಸ್ ಅದರಂತೆ ಇಂದು ದೇವಾಲಯಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ಇನ್ನು ನೆಲಮಂಗಲ ತಾಲೂಕಿನ ತಾವರೆಕೆರೆಯಲ್ಲಿರೋ ಶಕ್ತಿ ದೇವತೆ ಮಾರಮ್ಮ ದೇವಿಯ ದರ್ಶನ ಪಡೆದು 11 ರೂಪಾಯಿ ಹರಕೆ ಕಟ್ಟಿ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಇದೆ.
ಸ್ವಂತ ಮಗಳ ಮದುವೆಗೆ ಐಎಸ್ ಅಧಿಕಾರಿ ಒಂದೇ ದಿನ ರಜೆ…!! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -