ರೈತರ ಬಗ್ಗೆ ಭಾವನಾತ್ಮಕ ಸಂಬಂಧವಲ್ಲ, ರಕ್ತಸಂಬಂಧವಿದೆ: ಚಾಲೆಂಜಿಂಗ್ ಸ್ಟಾರ್ ದರ್ಶನ್….!

ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೃಷಿ ಇಲಾಖೆಯ ರಾಯಭಾರಿಯಾಗಿ ಪದಗ್ರಹಣ ಕಾರ್ಯಕ್ರಮವನ್ನು ಇಂದು ವಿಧಾನಸೌಧದಲ್ಲಿ ಆಯೋಜಿಸಲಾಗಿತ್ತು. ಈ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸನ್ಮಾನ ಮಾಡುವ ಮೂಲಕ ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ದಚ್ಚು, ಎಲ್ಲರೂ ರೈತರದ್ದು ನಮ್ಮದು ಭಾವನಾತ್ಮಕ ಸಂಬಂಧ ಎನ್ನುತ್ತಾರೆ. ಆದರೆ ಅದು ಕೇವಲ ಭಾವನಾತ್ಮಕವಲ್ಲ, ಬ್ಲಡ್ ರಿಲೇಶನ್ ಆಗಿದೆ. ಅವರು ಆಹಾರ ನೀಡಿದರೇನೆ ನಮ್ಮ ಮೈಯ್ಯಲ್ಲಿ ರಕ್ತ. ಇಲ್ಲವಾದರೆ ನಮ್ಮ ಮೈಯ್ಯಲ್ಲಿ ರಕ್ತ ಇರುವುದಿಲ್ಲ ಎಂದರು.

ನಾನು ಬಹಳ ದೊಡ್ಡದೇನು ಮಾಡುತ್ತಿಲ್ಲ. ಸರ್ಕಾರದಿಂದ ರೈತರಿಗೆ ಏನೇನು ಸವಲತ್ತುಗಳಿರುತ್ತವೆಯೋ ಅದನ್ನು ಜಾಹೀರಾತು ಮೂಲಕ ರೈತರಿಗೆ ತಲುಪಿಸುವ ಕಾರ್ಯ ಅಷ್ಟನ್ನೇ ಮಾಡುತ್ತಿದ್ದೇವೆ ಅಷ್ಟೇ ಎಂದರು.

ಈ ವೇಳೆ‌ ಕೃಷಿ ಸಚಿವ ಬಿಸಿ ಪಾಟೀಲ್ ಅವರ ಬಗ್ಗೆ ಮಾತನಾಡಿದ ಡಿಬಾಸ್, ಬಿಸಿ ಪಾಟೀಲ್ ಅವರು ಮೊದಲಿಗೆ ಪೊಲೀಸ್ ನೌಕರರಾಗಿದ್ದರು. ಆ ನಂತರ ನಟರಾದರು. ಈಗ ಸಚಿವರಾಗಿ ಜೀವನವೆಲ್ಲಾ ಜನರ ಸೇವೆಯ ದಾರಿಯನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

About The Author