ಗಾಂಧಿನಗರದ ಗಲ್ಲಿ-ಗಲ್ಲಿಯಲ್ಲಿ ಅಬ್ಬರಿಸಿ ಕೇಕೇ ಹಾಕಿದ್ದ ದರ್ಶನ್ ನಟನೆಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ತೆಲುಗು ನೆಲದಲ್ಲಿಯೂ ಧೂಳ್ ಎಬ್ಬಿಸ್ತಿದೆ. ತೆಲುಗಿನಲ್ಲಿ ರಿಲೀಸ್ ಆಗಿರುವ ರಾಬರ್ಟ್ ಟೀಸರ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ತಿದ್ದು, ಇದೀಗ ಮತ್ತೊಂದು ಸಿಹಿಸುದ್ದಿ ದಾಸನ ರಾಬರ್ಟ್ ಅಂಗಳದಿಂದ ಹೊರ ಬಂದಿದೆ. ರಾಬರ್ಟ್ ತೆಲಗು ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆಯಂತೆ.
ರಾಬರ್ಟ್ ಚಿತ್ರವನ್ನು ತೆಲುಗಿನ ಹಿರಿಯ ನಿರ್ದೇಶಕ ಚಂಚಲವಾಡ ಶ್ರೀನಿವಾಸ್ ರಾವ್ ವಿತರಣೆ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಮೂವೀಸ್ ಮೂಲಕ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ರಾಬರ್ಟ್ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ.

ರಾಬರ್ಟ್ ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಬಟ್ ನಿಖರವಾಗಿ ಎಷ್ಟು ಹಣ ಎಂದು ಬಹಿರಂಗವಾಗಿಲ್ಲ. ದಾಸನ ರಾಬರ್ಟ್ ಚಿತ್ರಕ್ಕೆ ತೆಲುಗಿನಲ್ಲಿ ಹೆಚ್ಚು ಬೇಡಿಕೆಯಿದ್ದು, ದಾಖಲೆಯ ಹಣ ನೀಡಿದ್ದಾರೆ ಎನ್ನಲಾಗ್ತಿದೆ.

ಇನ್ನೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ರಾಬರ್ಟ್ ಸಿನಿಮಾವನ್ನು 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಕಾಯ್ದಿರಿಸಲಾಗಿದೆ. ಒಟ್ನಲ್ಲಿ ರಾಬರ್ಟ್ ಸಿನಿಮಾಕ್ಕೆ ನೆರೆ ರಾಜ್ಯಗಳಲ್ಲಿ ದೊಡ್ಡ ಓಪನಿಂಗ್ ಸಿಗುವ ನಿರೀಕ್ಷೆಯಲ್ಲಿದೆ ಸಿನಿಮಾ ತಂಡ. ಅಂದಹಾಗೇ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗ್ತಿದೆ.
