- Advertisement -
ಹಾಸನ: ಗ್ರಾಹಕರ ಸೋಗಿನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸರಗಳ್ಳರು, ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ಅರಕಲಗೂಡು ತಾಲ್ಲೂಕಿನ ಸಂತೆಮರೂರಿನಲ್ಲಿ ಘಟನೆ ನಡೆದಿದ್ದು, ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ಸಾವಿತ್ರಿಮಣಿ ಎಂಬುವರ ಚಿನ್ನದ ಸರ ಕಿತ್ತುಕೊಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ. ಸಿಗರೇಟ್, ಲೇಸ್, ಜ್ಯೂಸ್ ಖರೀದಿಸಿ ವೃದ್ದೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಂದು ‘ತ್ರಿಬಲ್ ರೈಡಿಂಗ್’ ಟ್ರೇಲರ್ ಬಿಡುಗಡೆ
- Advertisement -