- Advertisement -
ಸಿನಿಮೀಯಾ ರೀತಿಯಲ್ಲಿ ಸರಕಳ್ಳತನ ಮಾಡಿದ ಕದೀಮರು.
ಸಿಸಿ ಟಿವಿಯಲ್ಲಿ ಸೆರಯಾದ ವೀಡಿಯೋ ನೋಡಿದ್ರೆ ಎಂತವರಿಗೂ ಎದೆ ಝಲ್ ಎನ್ನುತ್ತೆ.
ಬೈಕಿನಲ್ಲಿ ಬಂದ ಕದಿಮರು ವೃದ್ದೆಯ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದಾರೆ.
ಹೌದು ಇದು ಹೊಸಪೇಟೆ ನಗರದ ಆಕಾಶವಾಣಿಯ ಮದಕರಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಘಟನೆ ನಡೆದಿದ್ದು, ವಾಯು ವಿಹಾರ ಮುಗಿಸಿಕೊಂಡು ಮನೆಗೆ ತೆರಳುತಿದ್ದ ವೃದ್ದ ದಂಪತಿಗಳನ್ನ ಟಾರ್ಗೆಟ್ ಮಾಡಿದ ಖದೀಮರು ಬೈಕಲ್ಲಿ ಬಂದು ಮಾಂಗಲ್ಯ ಸರ್ ಎಗರಿಸಿದ್ದಾರೆ.
ಶಾರದಾ ಕುರಂದವಾಡ ಮಾಂಗಲ್ಯ ಕಳೆದುಕೊಂಡ ಮಹಿಳೆ ಯಾಗಿದ್ದು,ಕಳ್ಳರು ಮಾಂಗಲ್ಯ ಸರ ಕಿತ್ತುಕೊಂಡು ಹೋದ ರಭಸಕ್ಕೆ ವೃದ್ದೆ ನೆಲಕ್ಕುರುಳಿದ್ದು,ಸಿಸಿ ಟೀವಿಯಾ ಈ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ , ಇನ್ನು ಕಳ್ಳರ ಈ ಹೇಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕ ಆಗಮಿಸಿದ ಹೊಸಪೇಟೆ ಪಟ್ಟಣದ ಪೋಲಿಸ್ ಅಧಿಕಾರಿಗಳು ತನಿಕೆ ಚುರುಕುಗೊಳಿಸಿದ್ದಾರೆ.
- Advertisement -