Monday, August 4, 2025

Latest Posts

ಸಂಸದೆಯನ್ನೂ ಬಿಡದ ಸರಗಳ್ಳರು – VVIP ಪ್ರದೇಶವೂ ಸೇಫ್ ಅಲ್ಲ!

- Advertisement -

ರಾಷ್ಟ್ರ ರಾಜಧಾನಿ ದೆಹಲಿ ಅತ್ಯಂತ ಭದ್ರತೆಗೆ ಹೆಸರುವಾಸಿಯಾಗಿದೆ. ಆದರೆ ಅದೇ ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ, ಕಾಂಗ್ರೆಸ್ ಸಂಸದೆಯ ಚಿನ್ನದ ಸರ ಕಳ್ಳತನವಾಗಿದೆ. ಇದು ಮಹಿಳಾ ಸುರಕ್ಷತೆ, ರಾಜಕೀಯ ನಾಯಕರ ಭದ್ರತೆ, ಹಾಗೂ ದೆಹಲಿ ಪೋಲಿಸ್‌ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಆಗಸ್ಟ್ 4ರಂದು ಬೆಳಗ್ಗೆ ಸುಮಾರು 6.15ಕ್ಕೆ ಈ ಸರಗಳ್ಳತನ ನಡೆದಿದೆ. ತಮಿಳುನಾಡು ಮೂಲದ ಸಂಸದೆ ಆರ್. ಸುಧಾ ಅವರು ತಮ್ಮ ದಿನಚರಿಯಂತೆ ಜಾಗಿಂಗ್‌ಗೆ ಹೋಗಿದ್ದರು. ಆಗ ಬೈಕ್‌ನಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಹೆಲ್ಮೆಟ್ ಧರಿಸಿಕೊಂಡು ಯಾರಿಗೂ ಅನುಮಾನವೂ ಬರದ ಹಾಗೆ, ಅವರ ಕುತ್ತಿಗೆಯಲ್ಲಿ ಹಾಕಿದ್ದ 32 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆಯಿಂದ ಸಂಸದೆ ಸುಧಾ ಅವರಿಗೆ ಸಣ್ಣಗಾಯಗಳಾಗಿವೆ. ಜೊತೆ ಅವರ ಹಾಕಿದ್ದ ಬಟ್ಟೆ ಕೂಡ ಹರಿದಿದೆ.

2024ರ ಅಫಿಡವಿಟ್‌ನಲ್ಲಿ ಸುಧಾ ಅವರು ತಮ್ಮ ಬಳಿ 480 ಗ್ರಾಂ ಚಿನ್ನ ಹಾಗೂ 37 ಲಕ್ಷ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿರೋದಾಗಿ ಹೇಳಿದ್ದಾರೆ. ಅವರ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ, ಯಾವುದೇ ಪ್ರಕರಣದಲ್ಲಿ ಅವರು ತಪ್ಪಿತಸ್ಥರೆಂದು ಎಂದು ದಾಖಲಿಸಲಾಗಿದೆ.

ಸಂಸದೆ ಸುಧಾ ಈ ಕುರಿತು ಮಾತನಾಡಿ, ಈ ಘಟನೆ ತುಂಬಾ ಆಘಾತಕಾರಿಯಾಗಿದೆ. ದೇಶದ ರಾಜಧಾನಿಯ ಈ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲದಿದ್ದರೆ, ದೇಶದ ಉಳಿದ ಭಾಗಗಳಲ್ಲಿ ನಾವು ಸುರಕ್ಷತೆಯನ್ನು ಎಲ್ಲಿ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯ ಬಗ್ಗೆ ಸುಧಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರನ್ನು ಸಂಪರ್ಕಿಸಿ ಅಪರಾಧಿಯನ್ನು ಶೀಘ್ರದಲ್ಲೇ ಬಂಧಿಸುವಂತೆ ಮನವಿ ಮಾಡಿದ್ದಾರೆ.

ಅನೇಕ ವಿದೇಶಿ ರಾಯಭಾರ ಕಚೇರಿಗಳು, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ವಿವಿಐಪಿ ಸಂಸ್ಥೆಗಳು ಇಲ್ಲಿವೆ. ಈ ಘಟನೆಯು ರಾಜಧಾನಿ ದೆಹಲಿಯ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಹುಡುಕಲಾಗುತ್ತಿದೆ.

- Advertisement -

Latest Posts

Don't Miss