State News:
Mysoor: ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಟೀಕೆ ವಿಚಾರವಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್ ವಾಗ್ದಾಳಿ ನಡೆಸಿದರು. ಛಲವಾದಿ ನಾರಾಯಣಸ್ವಾಮಿ ಬಿಜೆಪಿಯ ನಾಯಿಮರಿ.ಮೈಸೂರಿನಲ್ಲೊಂದು, ಬೆಂಗಳೂರಿನಲ್ಲೊಂದು ನಾಯಿಮರಿ ಇದೆ. ಎಂದು ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್ ವ್ಯಂಗ್ಯವಾಡಿದರು. ಆತ ಕೋಲಾರ ಪಂಗ್ಚರ್ ಹಾಕೊಂಡು ನಿಂತಿದ್ದ. ಪಾರ್ಟಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಬಿಜೆಪಿ ಗೆ ಹೋಗಿರೋದು.ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಂಬೇಡ್ಕರ್ ನಿಗಮಕ್ಕ್ಕೆ ಅಧ್ಯಕ್ಷ ಆಗಬೇಕು ಎಂದುಕೊಂಡಿದ್ದ.ಆದರೆ ಅದು ಸಾಧ್ಯವಾಗದ ಹಿನ್ನೆಲೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸೋಲಿಸಲು ವರುಣಗೆ ಬಂದಿದ್ದರು. ಸಿದ್ದರಾಮಯ್ಯ ಮಾತ್ರ ಟೀಕೆ ಮಾಡೋದೇ ಈತನ ಕೆಲಸವಾಗಿದೆ. ಕಾಂಗ್ರೆಸ್ ನ ಉಳಿದ ಯಾವುದೇ ನಾಯಕರ ವಿರುದ್ಧ ಟೀಕೆ ಮಾಡುತ್ತಿಲ್ಲ. ಇದನ್ನೂ ಓದಿ…“ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ..?!” ಏನಿದು ಟೀಕೆ..?!
ಈತ ಒಬ್ಬ RSS ಜೊತೆಗಿರುವ ನಾಯಿಮರಿ. ಬಿಜೆಪಿಯವರು ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿ ನಾರಾಯಣಸ್ವಾಮಿಯನ್ನ ಬಿಟ್ಟಿದ್ದಾರೆ. ಆತ ಬಿಜೆಪಿಯಲ್ಲಿ ಗರ್ಭಗುಡಿ ತೋರಿಸುತ್ತಾರೆ ಎಂದು ಕೊಂಡಿರಬಹುದು. ವರುಣದ ಚಿಕ್ಕಹಳ್ಳಿ ಪಕ್ಷದಲ್ಲಿದ್ದರೂ ಸಿದ್ದರಾಮಯ್ಯರನ್ನ ಸೋಲಿಸಲು ಹಣ ಹಂಚಲು ಬಂದಿದ್ದರು. ಅಂದು ನನಗೆ ಸಿಕ್ಕಿಬಿದ್ದಿದ್ದರು. ಸಿದ್ದರಾಮಯ್ಯ ಸೋತರೆ ಪರಮೇಶ್ವರ್ ಸಿಎಂ ಆಗ್ತಾರೆ ಎಂದು ಸುಳ್ಳು ಹೇಳಿ ಸಿದ್ದರಾಮಯ್ಯ ಸೋಲಿಸಲು ಬಂದ ವ್ಯಕ್ತಿ ಈತ. ಸದ್ಯ ಬಿಜೆಪಿಯಲ್ಲಿ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಎಂದು ಮೈಸೂರಿನಲ್ಲಿ ಭೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ…ಬಳ್ಳಾರಿ: ಕಾಂಗ್ರೆಸ್ ‘ಜೋಡೋ’ ಯಾತ್ರೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ..!
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಸನ್ನ ಬಾಲಚಂದ್ರ ವರಳೆ..!