ಅಭಿಮಾನಿಗಳ ಪರವಾಗಿ ನವರಸ ನಾಯಕ ಜಗ್ಗೇಶ್ ಕ್ಷಮೆ ಕೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್….!

ನವರಸ ನಾಯಕ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಜಗಳಕ್ಕೆ ಕೊನೆಗೂ ಸುಖಾಂತ್ಯ ಸಿಕ್ಕಿದೆ. ಖಾಸಗಿ ಚಾನಲ್ ಕಾರ್ಯಕ್ರಮವೊಂದರಲ್ಲಿ ದರ್ಶನ್ ಅಭಿಮಾನಿಗಳ ಪರವಾಗಿ ಜಗ್ಗೇಶ್ ಅವರನ್ನು ಕ್ಷಮೆಯಾಚಿಸಿದ್ದಾರೆ.

ಜಗ್ಗೇಶ್ ಅವರು ನಮ್ಮ ಹಿರಿಯರು, ಎಂದಿಗೂ ಅವರು ಮುಂದೆ, ನಾವು ಅವರ ಹಿಂದೆ. ನಮ್ಮ ಸೆಲೆಬ್ರಿಟಿಗಳಿಂದ ಆಗಿರುವ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ.

ಆಡಿಯೋ ರಿಲೀಸ್ ಆದಾಗ ನಾನು ಊರಿನಲ್ಲಿ ಇರಲಿಲ್ಲ ತಿರುಪತಿಯಲ್ಲಿದ್ದೆ. ಮೊದಲಿಗೆ ನಿರ್ಮಾಪಕ ವಿಖ್ಯಾತ ಕರೆ ಮಾಡಿದ್ದ, ಅನೂಪ್ ಎಂಬುವರು ಕರೆ ಮಾಡಿದ್ದರು. ನಾನು ಅಂದು ತಡರಾತ್ರಿ ಮನೆಗೆ ಬಂದೆ ನನಗೆ ವಿಷಯ ಗೊತ್ತಾಗಿದ್ದು ಮಾರನೇಯ ದಿನವಷ್ಟೆ. ಅದನ್ನೂ ನಾನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಹಿರಿಯರು ಏನೋ ಮಾತನಾಡಿದ್ದಾರೆ ಬಿಡು ಎಂದು ಸುಮ್ಮನಾಗಿದ್ದೆ.

ಜಗ್ಗೇಶ್ ಅವರಿಗೆ ಫ್ಯಾನ್ಸ್ ಮುತ್ತಿಗೆ ಹಾಕುವ ದಿನವೂ ನಾನು ಇರಲಿಲ್ಲ. ಜಗ್ಗೇಶ್ ಅವರಿಗೆ ಕರೆ ಮಾಡುವ ಪ್ರಯತ್ನ ಮಾಡಿದೆ, ಅವರು ಕನೆಕ್ಟ್ ಆಗಲಿಲ್ಲ ಎಂದು ದರ್ಶನ್ ಹೇಳಿದ್ದಾರೆ.

About The Author