ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ರಿಯಲ್ ಹೀರೋ ಅನ್ನೋದು ಎಲ್ಲರಿಗೂ ಗೊತ್ತು. ಅಕ್ಕಪಕ್ಕದರು, ಸ್ನೇಹಿತರು, ಬಂಧು-ಬಳಗದವರಿಗೆ ಪ್ರೀತಿ ತೋರಿಸೋ ದಚ್ಚು ನಡೆ-ನುಡಿ ಬಗ್ಗೆ ನಾವೇನು ಬಿಡಿಸಿ ಹೇಳ್ಬೇಕಿಲ್ಲ. ತಮ್ಮನ್ನ ಪ್ರೀತಿ, ಆರಾಧಿಸುವ ಜನರಿಗೆ ಡಿಬಾಸ್ ಎಂತಹ ಪ್ರೀತಿ ತೋರಿಸ್ತಾರೆ ಅನ್ನೋದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಕಿರಿಯರ ಮೇಲೆ ದಾಸನ ಅಭಿಮಾನದ ಗುಣವನ್ನು ಕಿಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಬಿಚ್ಚಿಟ್ಟಿದ್ದಾರೆ.
ಇಂದು ಶಿವರಾಜ್ ಕೆ.ಆರ್.ಪೇಟೆ ಜೇಷ್ಠ ಪುತ್ರ ವಂಶಿಕ್ ಹುಟ್ಟುಹಬ್ಬ. ವಂಶಿಕ್ ಮೂರು ವರ್ಷದ ಮಗುವಾಗಿದ್ದಾಗಿನಿಂದಲ್ಲೂ ದಚ್ಚು ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಇಂದು ಡಿಬಾಸ್ ನಿವಾಸಕ್ಕೆ ತೆರೆಳಿದ ಶಿವರಾಜ್ ಕೆ.ಆರ್.ಪೇಟೆ ಫ್ಯಾಮಿಲಿ ದಚ್ಚು ಮೀಟ್ ಮಾಡಿ, ಅವರ ಜೊತೆ ಕೇಕ್ ಕತ್ತರಿಸಿದ ವಂಶಿಕ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈ ವೇಳೆ ಬರ್ತ್ ಡೇ ಬಾಯ್ ವಂಶಿಕ್ ಗೆ ಡಿಬಾಸ್ ತಾವೇ ತೆಗೆದ ವನ್ಯಜೀವಿ ಫೋಟೋವನ್ನು ಗಿಫ್ಟ್ ಆಗಿ ನೀಡಿದ್ದಾರೆ.


ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶಿವರಾಜ್ ಕೆ.ಆರ್.ಪೇಟೆ, ಕಿರಿಯರ ಮೇಲಿನ ದಚ್ಚು ಪ್ರೀತಿಗೆ ನಾನು ನನ್ನ ಕುಟುಂಬ ಖುಣಿ. ಥ್ಯಾಂಕು ಡಿಬಾಸ್ ಎಂದು ಪೋಸ್ಟ್ ಹಾಕಿದ್ದಾರೆ.
