Tuesday, September 16, 2025

Latest Posts

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ತಾತ್ಕಾಲಿಕ ರಿಲೀಫ್

- Advertisement -

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ, ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಎರಡೂ ಕಡೆ ವಾದ ಆಲಿಸಿದ ಸುಪ್ರಿಂಕೋರ್ಟ್‌, ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. 1 ವಾರದಲ್ಲಿ 3 ಪುಟ ಮೀರದಂತೆ ಲಿಖಿತ ವಾದ ಸಲ್ಲಿವಂತೆ ಸೂಚನೆ ನೀಡಿದೆ. ಕನಿಷ್ಟ 10 ದಿನಗಳ ಬಳಿಕವಷ್ಟೇ ದರ್ಶನ್‌ ಜಾಮೀನು ತೀರ್ಪು ತಿಳಿಯಲಿದೆ.

ಆರೋಪಿಗಳ ಜೊತೆ ದರ್ಶನ್‌ ಫೋಟೋ – ಸುಪ್ರೀಂ ಪ್ರಶ್ನೆ

ದರ್ಶನ್ ಪರ ವಕೀಲ ಸಿದ್ಧಾರ್ಥ್‌ ದವೆ ವಾದ ಮಂಡಿಸಿದ್ರೆ, ಸರ್ಕಾರದ ಪರ ಸಿದ್ಧಾ್ಥ್ ಲೂತ್ರಾ ವಾದ ಮಂಡಿಸಿದ್ದಾರೆ. ನ್ಯಾಯಮೂರ್ತಿ ಪರ್ದಿವಾಲಾ, ನ್ಯಾಯಮೂರ್ತ ಮಹದೇವನ್‌ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಲಾಯ್ತು. ಇನ್ನು, ಆರೋಪಿಗಳ ಜೊತೆ ದರ್ಶನ್‌ ಫೋಟೋ ನೋಡಿ, ನ್ಯಾಯಮೂರ್ತಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ ಫೋಟೋ ತೆಗೆಸಿಕೊಂಡಿದ್ದಾರೆ. ಇವರೆಂತಹ ವ್ಯಕ್ತಿಗಳು ಅಂತ ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದ್ದಾರೆ.

ಹೈಕೋರ್ಟ್‌ ಬಗ್ಗೆ ಸುಪ್ರೀಂ ಅಸಮಾಧಾನ

ಇನ್ನು, ದರ್ಶನ ಪರ ವಕೀಲರ ವಾದ ಮಂಡನೆ ವೇಳೆ, ಸುಪ್ರೀಂ ಪ್ರಶ್ನೆಗಳ ಸುರಿಮಳೆ ಮುಂದುವರೆಸಿತ್ತು.
ಹೈಕೋರ್ಟ್ ನ್ಯಾಯಬದ್ಧವಾಗಿ ವಿವೇಚನೆ ಬಳಸಿಲ್ಲ ಅಂತಾ ಕಳವಳ ವ್ಯಕ್ತಪಡಿಸಿದೆ. ನಿರಪರಾಧಿ ಅನ್ನೋ ರೀತಿ ಜಾಮೀನು ಸಿಕ್ಕಿದೆ. ಟ್ರಯಲ್‌ ಕೋರ್ಟ್‌ಗಳು ತಪ್ಪು ಮಾಡಿದ್ದಾರೆಂದು ನಂಬಬಹುದು. ಆದರೆ ಹೈಕೋರ್ಟ್‌ ಜಡ್ಜ್‌ ನೀಡಿರುವ ಕಾರಣ ಒಪ್ಪುವುದು ಹೇಗೆ?. ಆದೇಶ ನೀಡಿರುವ ರೀತಿ ನೋವುಂಟು ಮಾಡಿದೆ. ಹೈಕೋರ್ಟ್‌ ಮಾಡಿದ ತಪ್ಪನ್ನೇ ನಾವು ಮಾಡುವುದಿಲ್ಲ, ಅಂತಾ ಸುಪ್ರೀಂ ಹೇಳಿದೆ.

ಪವಿತ್ರಾ ಗೌಡ ಬಗ್ಗೆ ಸುಪ್ರೀಂ  ಪ್ರಶ್ನೆ

ದರ್ಶನ್‌ ಪರ ವಾದ-ವಿವಾದ ಆಲಿಸಿದ ಸುಪ್ರೀಂ, ಎ1 ಆರೋಪಿ ಪವಿತ್ರಾ ಗೌಡ ಬಗ್ಗೆ ಪ್ರಶ್ನಿಸಿದೆ. ನೀವಿಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಇಷ್ಟೆಲ್ಲಾ ಆಗಲು ಪವಿತ್ರಾ ಗೌಡ ಕಾರಣ. ಹೀಗಂತ ಸುಪ್ರೀಂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಪವಿತ್ರಾ ಗೌಡ ಪರ ವಕೀಲೆ ವಾದ ಮಂಡನೆ ಆರಂಭಿಸಿದ್ರು.

ಸರ್ಕಾರದ ಪರ ವಕೀಲರಿಗೆ ಸುಪ್ರೀಂಕೋರ್ಟ್‌ ಪ್ರಶ್ನೆ

1) ಪ್ರಕರಣದ ದೂರುದಾರ ಯಾರು?
2) ಕೇವಲ 7 ಜನರ ಜಾಮೀನು ರದ್ದಾಗಬೇಕಾ?
3) ಪ್ರಕರಣದಲ್ಲಿ ಪ್ರತಿಯೊಬ್ಬರ ಪಾತ್ರ ತಿಳಿಸಿ?
4) ಈ ಹತ್ಯೆಯ ಉದ್ದೇಶವೇನು?
5)ಪಟ್ಟಣಗೆರೆ ಶೆಡ್‌ ಮಾಲೀಕ ಯಾರು?
6) ಹಲ್ಲೆಗೆ ಯಾರಾದರೂ ಪ್ರತ್ಯಕ್ಷದರ್ಶಿಗಳು ಇದ್ದಾರ?
7)ಪ್ರತ್ಯಕ್ಷದರ್ಶಿಯನ್ನು ಯಾವಾಗ ಪತ್ತೆ ಹಚ್ಚಿದ್ದೀರಿ?
8) ದರ್ಶನ್‌ ಫೇಮಸ್ಸೋ ಅಲ್ವೋ ಅನ್ನೋದು ಬೇಡ
9)ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಪಾತ್ರ ಎಲ್ಲಿ ಬರುತ್ತೆ?
10) ಹಲ್ಲೆ ವೇಳೆ ದರ್ಶನ್‌, ಪವಿತ್ರಾ ಗೌಡ ಏನು ಮಾಡುತ್ತಿದ್ರು..?
11) ಈ 7 ಜನರನ್ನೂ ಅವನು ಗುರುತಿಸಿದ್ದಾನೆಯೇ?
12) ಹಲ್ಲೆ ಮಾಡಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿ ಇದ್ದಾರಾ?
13) ಪ್ರತ್ಯಕ್ಷದರ್ಶಿಗಳ ಹೇಳಿಕೆಗೆ ಪೂರಕ ಸಾಕ್ಷಿಗಳಿವೆಯಾ?
14) ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ನಂಬಬಹುದಾ..?
15) ಪವಿತ್ರಾ-ದರ್ಶನ್‌ ಸಂಬಂಧದ ಬಗ್ಗೆ ವಿವರಿಸಬಹುದಾ?
16) ವಿನಯ್‌ ಏಕೆ ಹೊಡೆಯೋ ಫೋಟೋ ತೆಗೆದುಕೊಂಡಿದ್ದ?
17) ಫೋಟೋ ಎಲ್ಲಿ ಸಿಕ್ಕಿವು..? ಹೇಗೆ ಸಿಕ್ಕವು..?
18) ರೇಣುಕಾಸ್ವಾಮಿ ಬೇಡಿಕೊಳ್ಳೋ ಫೋಟೋದಲ್ಲಿ ಎಷ್ಟು ಜನರಿದ್ದಾರೆ?
19)ದರ್ಶನ್‌ ಆರೋಪಿಗಳ ಜೊತೆ ಇರುವ ಫೋಟೋ ಇದೆಯಾ?
20) ರೇಣುಕಾಸ್ವಾಮಿ ಪ್ರಕರಣದಲ್ಲಿ ಎಷ್ಟು ಆರೋಪಿಗಳಿದ್ದಾರೆ?
21) ಅಭಿಮಾನಿಯಾಗಿದ್ರೂ ಆತನ ಮೇಲೆ ಹಲ್ಲೆನಾ..?
22) ದರ್ಶನ್‌ ಫ್ಯಾನ್ಸ್‌ ಆಗಿದ್ದ ಕಿರಣ್‌, ಪುನಿತ್‌ ಹೇಗೆ ಹೇಳಿಕೆ ಕೊಟ್ರು?
23) ಫೋಟೋ ಬಿಟ್ಟು ಬೇರೆ ಏನಾದ್ರೂ ಸಾಕ್ಷಿಗಳಿವೆಯಾ?
24) ಕೊಲೆ ಮಾಡಿ ಫೋಟೋ ತೆಗೆದುಕೊಳ್ಳಲು ಸಾಧ್ಯಾನಾ?
25) ಹೈಕೋರ್ಟ್‌ ಈ ಇಬ್ಬರು ಸಾಕ್ಷಿಗಳ ಬಗ್ಗೆ ಏನು ಹೇಳಿದೆ?
26) ನಂಬಲು ಅರ್ಹವಲ್ಲದ ಸಾಕ್ಷಿಗಳು ಅಂತಾ ಹೇಗೆ ಪರಿಗಣಿಸಿತು?

ರಾಜ್ಯ ಸರ್ಕಾರದ ಪರ ವಕೀಲರ ಉತ್ತರ

ಸುಪ್ರೀಂಕೋರ್ಟಿನ ಎಲ್ಲಾ ಪ್ರಶ್ನೆಗಳಿಗೆ, ಸರ್ಕಾರದ ಪರ ವಕೀಲ ಲೂತ್ರಾ ಸಂಪೂರ್ಣ ವಿವರಣೆಯನ್ನು ನೀಡಿದ್ರು. ಎಫ್ಐಆರ್‌ ಪ್ರತಿಯನ್ನು ಓದಿದ ಸುಪ್ರೀಂಕೋರ್ಟ್‌ನ್ಯಾಯಮೂರ್ತಿಗಳು, ದೂರುದಾರ ಯಾರು? ಕೇವಲ 7 ಜನರ ಜಾಮೀನು ಮಾತ್ರ ರದ್ದಾಗಬೇಕಾ?. ಪ್ರಕರಣದಲ್ಲಿ ಪ್ರತಿಯೊಬ್ಬರ ಪಾತ್ರ ತಿಳಿಸಿ. ಈ ಹತ್ಯೆಯ ಉದ್ದೇಶವೇನು ಅಂತಾ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲ ಲೂತ್ರಾ, ಖಾಸಗಿ ಅಪಾರ್ಟ್‌ವೊಂದರ ಗಾರ್ಡ್‌ ಮಾಹಿತಿ ಮೇರೆಗೆ, ಪ್ರಕರಣ ದಾಖಲಾಗಿದೆ. ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸದ್ಯಕ್ಕೆ 7 ಜನರ ಜಾಮೀನು ರದ್ದಾಗಬೇಕೆಂಬುದು ನಮ್ಮ ವಾದ. ಸಿಸಿಟಿವಿ ಪರಿಶೀಲನೆಯಲ್ಲಿ 7 ಕಿಲೋ ಮೀಟರ್‌ ಫಾಲೋ ಮಾಡಿರೋದು ಪತ್ತೆಯಾಗಿದೆ. ಆರೋಪಿಗಳ ಮೊಬೈಲ್‌ನಲ್ಲೂ ಸಾಕಷ್ಟು ಫೋಟೋಗಳು ಸಿಕ್ಕಿವ. ನಾಲ್ವರು ತಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಪಟ್ಟಣೆರೆ ಶೆಡ್‌ ಬಗ್ಗೆ ಸುಪ್ರೀಂಕೋರ್ಟಿಗೆ ಸಿದ್ಧಾರ್ಥ್ ಲೂತ್ರಾ ಮಾಹಿತಿ ನೀಡಿದ್ರು.

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಕಳಿಸುತ್ತಿದ್ದ. ಹೀಗಾಗಿ ರೇಣುಕಾಸ್ವಾಮಿಯನ್ನು ಶೆಡ್ಡಿಗೆ ಕರೆದುಕೊಂಡು ಬಂದ ಹಲ್ಲೆ ಮಾಡಿದ್ದಾರೆ. ಆರೋಪಿ ತಾನೂ ಡಿ ಬಾಸ್‌ ಎಂದು ವೈಭವೀಕರಿಸಿಕೊಂಡಿದ್ದಾರೆ. ಡಿಬಾಸ್‌ ಗೆಳತಿ ಪವಿತ್ರಾ ಗೌಡ. ಪ್ರಕರಣದಲ್ಲಿ ಎ1 ಆರೋಪಿ ಈಕೆ. ಎ2 ಆರೋಪಿ ನಟ ದರ್ಶನ್.‌ ಇವರಿಗೆ ಕ್ರಿಮಿನಲ್‌ ಹಿನ್ನಲೆ ಇದೆ. ಇವರ ವಿರುದ್ಧ ಹಲವು ಕೇಸ್‌ಗಳಿವೆ. ಜಾಮೀನು ಮೇಲೆ ಹೊರ ಬಂದಾಗಲೂ ಸಾಕ್ಷಿಗಳ ಜೊತೆ ಇದ್ರು. ಜೈಲಲ್ಲಿ ಇದ್ದಾಗಲೂ ಅಪರಾಧಿಗಳ ಜೊತೆ ನಂಟು ಹೊಂದಿದ್ರು. ವೈದ್ಯಕೀಯ ಕಾರಣ ಹೇಳಿ ಜಾಮೀನು ಪಡೆದಿದ್ದಾರೆ. ಆದ್ರೆ ವಿದೇಶದಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಇದ್ದಾರೆ. ಆರೋಪಿಗಳ ತಪ್ಪೊಪ್ಪಿಗೆಯಿಂದ ದರ್ಶನ್‌, ಪವಿತ್ರ ಪಾತ್ರ ತಿಳಿದುಬಂದಿದೆ. ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಸುಪ್ರೀಂಗೆ ಲೂತ್ರಾ ವಿವರಿಸಿದ್ರು.

ಪ್ರತ್ಯಕ್ಷ ಸಾಕ್ಷಿ ಹೇಳಿಕೆ ಪಡೆದಿದ್ದೇವೆ. ಪುನಿತ್‌, ಕಿರಣ್ ಶೆಡ್ಡಲ್ಲಿ ಕೆಲಸ ಮಾಡ್ತಿದ್ರು. ಹಲ್ಲೆಯಿಂದಾಗಿಯೇ ರೇಣುಕಾಸ್ವಾಮಿ ಕೊಲೆಯಾಗಿದೆ. 7 ದಿನದಲ್ಲಿ ಕಿರಣ್‌ಹೇಳಿಕೆ, 12 ದಿನದಲ್ಲಿ ಪುನೀತ್ ‌ಹೇಳಿಕೆ ದಾಖಲಿಸಲಾಗಿದೆ. ರೇಣುಕಾಸ್ವಾಮಿಯನ್ನು ನಂದೀಶ್‌ಎತ್ತಿ ಎಸೆದಿದ್ದ. ಹಲ್ಲೆ ದೃಶ್ಯವನ್ನು ಮೊಬೈಲ್‌ನಲ್ಲಿ ಕಳಿಸಿದ್ದಾರೆ. ಬಳಿಕ ಡಿಲೀ್ಟ್‌ಮಾಡಿದ್ದಾರೆ. ಪವಿತ್ರಾ ಗೌಡ ಚಪ್ಪಲಿಯಿಂದ ಒಡೆದಿದ್ದಾಳೆ. ರೇಣುಕಾಸ್ವಾಮಿ ಎದೆಗೆ ದರ್ಶನ್‌ ಒದ್ದಿದ್ದಾನೆ. ಎಲೆಕ್ಟ್ರಿಕ್‌ ಶಾಕ್‌ ನೀಡಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಘಟನೆಯ ಸಂಪೂರ್ಣ ವಿವರವನ್ನು, ಕಿರಣ್‌, ಪುನೀತ್ ಹೇಳಿದ್ದಾರೆ .

ದರ್ಶನ್‌ ಪರ ವಕೀಲರಿಗೆ ಸುಪ್ರೀಂ ಪ್ರಶ್ನೆ ಏನು?

1) ರೇಣುಕಾಸ್ವಾಮಿ ಕೊಲೆ ಪ್ರಕರಣದ ಗಂಭೀರತೆ ಬಗ್ಗೆ ಪ್ರಶ್ನೆ
2) 164 ಹೇಳಿಕೆಗಳನ್ನು ಈ ಹಂತದಲ್ಲಿ ಏಕೆ ಪರಿಗಣಿಸಬಾರದು?
3) ಎಫ್‌ಎಸ್‌ಎಲ್‌, ಸಾಕ್ಷಿಗಳನ್ನು ಏಕೆ ನಂಬಬಾರದು..?
4) ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಏಕೆ ನಂಬಬಾರದು?
5) ವಾಹನದ ಮೇಲಿನ ರಕ್ತದ ಕಲೆ ಬಗ್ಗೆ ಏನು ಹೇಳ್ತೀರಿ?
6) ಏಕೆ ಜಾಮೀನು ರದ್ದುಗೊಳಿಸಬಾರದು?
7) ಸಾಕ್ಷ್ಯಗಳನ್ನು ನಿರ್ಲಕ್ಷ್ಯ ಮಾಡುವುದು ಸೂಕ್ತಾನಾ?
8) ಇತರೆ ಸಾಕ್ಷ್ಯಗಳ ಬಗ್ಗೆ ಏನು ಹೇಳ್ತೀರಾ?
9) ಎಲ್ಲಾ ಕೇಸ್‌ಗಳಲ್ಲೂ ಇದೇ ರೀತಿ ಆಗುತ್ತಾ?
10) ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಆದೇಶ ನೀಡಿದೆಯಲ್ವಾ?
11) ಹೈಕೋರ್ಟ್‌ ಜಡ್ಜ್‌ ನೀಡಿರುವ ಕಾರಣಗಳನ್ನು ಒಪ್ಪುವುದು ಹೇಗೆ?
12) ಜಾಮೀನು ನೀಡುವಾಗ ಹೈಕೋರ್ಟ್‌ ವಿವೇಚನೆ ಬಳಸಿದ್ಯಾ?
13) ಮೇಲ್ನೋಟಕ್ಕೆ ಸಾಕ್ಷಿಗಳಿದ್ರೂ ಬೇಲ್‌ ನೀಡಿದ್ದೇಕೆ?
14) ಲೂತ್ರಾ 272 ಸಾಕ್ಷಿಗಳನ್ನು ಏಕೆ ಹೆಸರಿಸಿದ್ದಾರೆ?
15) ಟ್ರಯಲ್‌ ಮುಗಿಯಲು ಎಷ್ಟು ಸಮಯ ಬೇಕಾಗುತ್ತದೆ?
16) ಈ ಕೇಸ್‌ಗೆ ಪ್ರತಿನಿತ್ಯ ವಿಚಾರಣೆ ಏಕೆ ಬೇಕು..?
17) ವಿಚಾರಣೆಗೆ ಎಷ್ಟು ಸಮಯ ಬೇಕಾಗುತ್ತದೆ..?
18) ಬೇರೆ ಕೇಸ್‌ಗಳು ಬಾಕಿ ಇರುವಾಗ ಇದಕ್ಕೇಕೆ ತರಾತುರಿ?
19) ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರು ಯಾರು?

ದರ್ಶನ್‌ ಪರ ವಕೀಲರ ಉತ್ತರ

ಸುಪ್ರೀಂ ಪ್ರಶ್ನೆಗಳಿಗೆಲ್ಲಾ ದರ್ಶನ ಪರ ವಕೀಲ ಸಿದ್ಧಾರ್ಥ್‌ ದವೆ ಕೂಡ ಉತ್ತರ ನೀಡಿದ್ದಾರೆ. ಹೇಳಿಕೆ ಕೊಡುವವನು, ಘಟನೆಯ ದಿನವೇ ಕೊಡುತ್ತಿದ್ದ. ಇಬ್ಬರು ವಿಟ್ನೆಸ್‌ಗಳು ಘಟನೆ ಬಳಿಕೆ ಹೊರಗೆ ಹೋಗಿದ್ರು. ಗೋವಾ ಸೇರಿದಂತೆ ಹಲವೆಡೆ ಹೋಗಿ ಬಂದಿದ್ದಾರೆ. 12 ದಿನಗಳ ಕಾಲ ನಾಪತ್ತೆಯಾಗಿದ್ದ ವ್ಯಕ್ತಿ ಬಗ್ಗೆ ಸಂಶಯವಿದೆ. ಸ್ಥಳ ಮಹಜರು ವೇಳೆ ರಕ್ತದ ಕಲೆ ಕಂಡು ಬಂದಿಲ್ಲ ಅಂತಾ ಉತ್ತರಿಸಿದ್ದಾರೆ.

ಸದ್ಯ, ಥೈಲ್ಯಾಂಡ್‌ನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್‌ ನಲ್ಲಿರುವ ದರ್ಶನ್‌ಗೆ, ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ. ಆದ್ರೂ, ಮುಂದಿನ 10 ದಿನದಲ್ಲಿ ಬೇಲ್‌ ಭವಿಷ್ಯ ನಿರ್ಧಾರವಾಗಲಿದ್ದು, ಜಾಮೀನು ರದ್ದಾದ್ರೆ ಮತ್ತೆ ಜೈಲು ಸೇರುವ ಆತಂಕ ಇದೆ.

 

- Advertisement -

Latest Posts

Don't Miss