- Advertisement -
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿ ಗಮನ ಸೆಳೆದಿದ್ದ ಚಾಲೆಂಜಿಂಗ್ ಸ್ಟಾರ್ ಮಂಡ್ಯ ಜನತೆಗೆ ಧನ್ಯವಾದ ಹೇಳಿದ್ದಾರೆ.
ವಿಡಿಯೋ ಮೂಲಕ ಧನ್ಯವಾದ ಹೇಳಿರೋ ಡಿ ಬಾಸ್, ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿಯೊಬ್ಬರಿಗೂ ನನ್ನ ಸಾಷ್ಠಾಗ ನಮಸ್ಕಾರ. ನಮ್ಮ ಸಣ್ಣ ಅಳಿಲು ಸೇವೆಗೆ ನೀವು ಅಮ್ಮನಿಗೆ ಇಷ್ಟುದೊಡ್ಡ ಗೆಲುವು ಕೊಟ್ಟಿದ್ದೀರ. ನಿಜಕ್ಕೂ ನೀವು ತೋರಿಸಿರೋ ಪ್ರೀತಿಗೆ ಪದಗಳೇ ಸಿಗುತ್ತಿಲ್ಲ. ನೀವು ಕೊಟ್ಟಿರೋ ಈ ಗೆಲುವನ್ನ ಸುಮಲತಮ್ಮ ತುಂಬಾ ಜೋಪಾನವಾಗಿ ಕಾಪಾಡಿಕೊಂಡು, ನಿಮ್ಮೆಲ್ಲರಿಗೂ ಏನು ಮಾಡಬೇಕೋ ಅದನ್ನ ಅಚ್ಚುಕಟ್ಟಾಗಿ ಮಾಡುತ್ತಾರೆ. ನೀವೇ ನಮ್ಮ ಪಾಲಿನ ದೇವರು. ತುಂಬಾ ತುಂಬಾ ಧನ್ಯವಾದಗಳು ಅಂತ ದಚ್ಚು ತಮ್ಮ ಮನದಾಳದಿಂದ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಡಿ ಬಾಸ್ ಆಡಿರೋ ಮನದಾಳದ ಮಾತು ಈ ವಿಡಿಯೋದಲ್ಲಿದೆ. ತಪ್ಪದೇ ನೋಡಿ
- Advertisement -