Friday, July 4, 2025

Latest Posts

ಕುಮಾರಸ್ವಾಮಿಗಾಗಿ ಚಲುವರಾಯಸ್ವಾಮಿ ಪ್ರಾರ್ಥನೆ!

- Advertisement -

ಇಂದು ಆಷಾಢ ಮಾಸದ ಎರಡನೇ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ತಾಯಿ ಚಾಮುಂಡೇಶ್ವರಿ ಲಕ್ಷ್ಮಿಅಲಂಕಾರದಿಂದ‌ ಕಂಗೊಳಿಸುತ್ತಿದ್ದಾಳೆ. ವಿವಿಧ ಬಗೆಯ ಹೂವು ಹಾಗೂ ಮಾವಿನ ಕಾಯಿಗಳು ಹಾಗು ಮುಸುಕಿನ ಜೋಳಗಳಿಂದ ದೇವಾಲಯದ ಆವರಣದೊಳಗೆ ವಿಶೇಷ ಅಲಂಕಾರ ಮಾಡಲಾಗಿದೆ. ಇಂದು ಕೃಷಿ ಸಚಿವ ಚಲುವರಾಯಸ್ವಾಮಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತಾನಾಡಿದ ಚಲುವರಾಯಸ್ವಾಮಿ ಮಂಡ್ಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ದಿಶಾ ಸಭೆ ಆಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿಗೆ ಒಳ್ಳೆಯದಾಗಲಿ. ನನಗೆ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ಇದೆ. ಹೀಗಾಗಿ ಅಲ್ಲಿಗೆ ಹೋಗಲು ಆಗಲ್ಲ. ಅಲ್ಲದೇ ನಾವು ಸಭೆ ಮಾಡಿದಾಗ ಅವರು ಬರುವುದಿಲ್ಲ. ಅವರು ಏನೇ ಯೋಜನೆ ತಂದರೂ ನಮ್ಮ ಬೆಂಬಲ ಇರುತ್ತದೆ.

ಜಿಲ್ಲೆಗೆ ರಾಜ್ಯಕ್ಕೆ ದೊಡ್ಡ ಮಂತ್ರಿ ಇದ್ದಾರೆ. ಪ್ರಲ್ಹಾದ್ ಜೋಶಿ, ಕುಮಾರಸ್ವಾಮಿ ಇಬ್ಬರೂ ಸೇರಿ ರಾಜ್ಯಕ್ಕೆ ಬರಬೇಕಾದ ಟ್ಯಾಕ್ಸ್ ಹಣ ಕೊಡಿಸಲಿ. ಅದನ್ನು ಬಿಟ್ಟು ಬರುವ ಎಂಪಿ ಫಂಡ್ ಹಣ ತಂದರೆ ಅದರಲ್ಲೇನು ವಿಶೇಷ ಇದೆ? ಏನಾದರೂ ವಿಶೇಷ ಅನುದಾನ ತಂದು ಅಭಿವೃದ್ದಿ ಮಾಡಲಿ ಎಂದಿದ್ದಾರೆ.

ಮಾತು ಮುಂದುವರೆದ ರಾಜ್ಯಕ್ಕೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಭೇಟಿ ನೀಡಿ ಶಾಸಕರ ಜೊತೆ ಮಾತುಕತೆ ವಿಚಾರವಾಗಿ ಕೂಡ ಪ್ರತಿಕಿಯೆ ನೀಡಿದ ಅವರು, ನಮ್ಮ ಸರ್ಕಾರ ಬಂದು ಎರಡು ವರ್ಷ ಆಗಿದೆ. ಜನಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಹೆಚ್ಚಿನ ಕೆಲಸ ಮಾಡಲು ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಲು ಬಂದಿದ್ದರು. ಜೊತೆಗೆ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಒಗ್ಗಟ್ಟಾಗಿದ್ದಾರೆ. ಯಾರೇ ಏನು ಮಾಡಿದರೂ ಅವರ ಒಗ್ಗಟ್ಟು ಹೀಗೆ ಇರುತ್ತದೆ. 5 ವರ್ಷ ಇಬ್ಬರೂ ಹೀಗೆ ಇರ್ತಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಚಾಮುಂಡಿ ಬೆಟ್ಟದಲ್ಲಿ ಹೇಳಿಕೆ ನೀಡಿದ್ದಾರೆ.

ಎರಡನೇ ಆಷಾಢ ಶುಕ್ರವಾರ ಹಿನ್ನೆಲೆ. ಚಾಮುಂಡಿ ಬೆಟ್ಟಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಸಕುಟುಂಬ ಸಮೇತರಾಗಿ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ದುಃಖವನ್ನು ದೂರು ಮಾಡುವವಳು ದೇವಿ ಚಾಮುಂಡೇಶ್ವರಿ. ಈ ಭಾರಿ ಇಡೀ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ. ಎಲ್ಲರಿಗೂ ಒಳ್ಳೆಯದನ್ನು ಮಾಡಲೆಂದು ಪ್ರಾರ್ಥನೆ ಮಾಡಿದ್ದೇನೆ‌. ಪ್ರಯತ್ನಕ್ಕಿಂತ ಪ್ರಾರ್ಥನೆಯಿಂದ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಇಡೀ ರಾಜ್ಯಕ್ಕೆ ಏನೇ ಕೆಲಸ ಮಾಡಬೇಕಾದರೂ ತಾಯಿಗೆ ಪೂಜೆ ಸಲ್ಲಿಸಿ ಮಾಡುತ್ತೇವೆ‌. ಇಂದು ಕುಟುಂಬ ಸಮೇತ ಬಂದು ತಾಯಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.

- Advertisement -

Latest Posts

Don't Miss